ಅಯೋಧ್ಯೆ : ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಹಬ್ಬದ ಹಿನ್ನಲೆ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬದ ಆಚರಣೆಯ ಜೊತೆ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಶನಿವಾರ ಅಧೀಕೃತ ಚಾಲನೆ ನೀಡಿದರು.
ಸರಯೂ ನದಿ ತೀರದಲ್ಲಿ ಬರೋಬ್ಬರಿ 24 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ಬರೆದಿದೆ. ಈ ಹಿಂದೆ ತನ್ನದೇ ಆದ 17 ಲಕ್ಷ ದೀಪಗಳನ್ನು ಬೆಳಗಿಸಿದ್ದ ದಾಖಲೆಯನ್ನು ಮುರಿಯುವ ಮೂಲಕ ನೂತನ ದಾಖಲೆ ನಿರ್ಮಿಸಲಾಗಿದೆ.
ಈ ದೀಪಗಳನ್ನು ಡ್ರೋನ್ ಮೂಲಕ ಎಣಿಕೆ ಮಾಡಲಾಗಿದ್ದು, ದೀಪೋತ್ಸವ 2023 ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದೆ ಎಂದು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ದೀಪೋತ್ಸವ ಮೆರವಣಿಗೆಯಲ್ಲಿ ಶ್ರೀರಾಮನ ಸಾರವನ್ನು ಚಿತ್ರಿಸುವ 18 ಸ್ಪೂರ್ತಿದಾಯಕ ಮತ್ತು ದೈವಿಕಸ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿಂದ ಪ್ರಮಾಣಪತ್ರ ಪಡೆದು ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆ ಜನತೆಗೆ ಧನ್ಯವಾದ ತಿಳಿಸಿದರು.