ಹೈದರಾಬಾದ್ : ತೆಲಂಗಾಣದ ಕರ್ನೂಲಿನ ಆಲೂರು ಕ್ಷೇತ್ರದ ಬಿಜೆಪಿ ಉಸ್ತುವಾರಿ ಹಾಗೂ ಮಾಜಿ ಶಾಸಕಿ ನೀರಜಾ ರೆಡ್ಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನೀರಜಾ ರೆಡ್ಡಿ ಅವರು ಹೈದರಾಬಾದ್ ನಿಂದ ಕರ್ನೂಲ್ ಗೆ ಹಿಂದಿರುಗುತ್ತಿದ್ದಾಗ ಟೈರ್ ಸ್ಫೋಟಗೊಂಡಿದ್ದು ಇದರಿಂದಾಗಿ ಅವರ ಕಾರು ಪಲ್ಟಿಯಾಗಿದೆ. ಕೂಡಲೆ ಅವರನ್ನು ಶ್ರೀ ಚಕ್ರ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದಿದ್ದಾರೆ.
ನೀರಜಾ ರೆಡ್ಡಿ ಹಿಂದೆ 2009ರಲ್ಲಿ ಆಲೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದಾಗ್ಯೂ, ಅವರು 2011 ರಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ 2019 ರಲ್ಲಿ ವೈಎಸ್ಆರ್‌ಸಿಪಿ ಸೇರುವ ಮೊದಲು ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿದ್ದರು. ನಂತರ ಆಡಳಿತ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡು ಬಿಜೆಪಿಗೆ ಸೇರಿದ್ದರು.