ಹಾಸನ: ಹಾಸನ ಜಿಲ್ಲೆಯಲ್ಲಿ ಕೋಟ್ಯಾಂತರ ರೂ ಮೌಲ್ಯದ ಮರಗಳನ್ನು ಕಡಿದ ಆರೋಪದಡಿಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಮ್ ಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸರ್ಕಾರಿ ಗೋಮಾಳ ಸೇರಿ ೧೨ ಎಕರೆಯಲ್ಲಿ ಬೆಳೆದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ೧೨೬ ಮರಗಳನ್ನು ಕಡಿದು ಸಾಗಾಟ ಮಾಡಿದ ಆರೋಪದ ಮೇಲೆ ವಿಕ್ರಮ್ ಸಿಂಹ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಬೆಂಗಳೂರಿನ ಮಲ್ಲೇಶ್ವರದ ಅರಣ್ಯ ಭವನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಸುಮಾರು ೨೦ ರಿಂದ ೩೦ ಲೋಡ್ ಮರಗಳನ್ನು ಕಡಿದು ಮಾರಾಟ ಮಾಡಿರುವ ಹಿನ್ನಲೆ ಬಂಧಿಸಲಾಗಿದೆ. ಜಯಮ್ಮರ ೧೬.ಪಿ೨ ರಲ್ಲಿ ೩ ಎಕರೆ ೧೦ ಗುಂಟೆ ಜಾಗದಲ್ಲಿ ಶುಂಠಿ ಬೆಳೆಯಲು ಒಪ್ಪಂದಕ್ಕೆ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಸಹಿ ಹಾಕಿದ್ದರು. ಅಲ್ಲಿ ಹೊನ್ನೆ, ನಂದಿ, ಗರಿ ಹೆಬ್ಬೇವು, ಹೆಬ್ಬೆಲಸು, ಮಾವು ಮತ್ತು ಹಲಸು ಮರಗಳು ಸೇರಿದಂತೆ ಹಲವು ಮರಗಳನ್ನು ಕಡಿದು ಸಾಗಾಟ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.





