ಬೆಂಗಳೂರು : ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ನಗರದ ಯಶವಂತಪುರದಲ್ಲಿ ನಡೆದಿದೆ.
ನೆನ್ನೆ ರಾತ್ರಿ 9.30ರ ಸಮಯ ಈ ದುರ್ಘಟನೆ ನಡೆದಿದ್ದು, ಯಶವಂತಪುರದ ಟಾಟಾ ಟಾಟಾ ಇನ್ಸ್ಟಿಟ್ಯೂಟ್ ಬಳಿ ಚಲಿಸುತ್ತಿದ್ದಾಗ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರು ನಿಲ್ಲಿಸಿ ತಕ್ಷಣ ಕಾರಿನಿಂದ ಡ್ರೈವರ್ ಇಳಿದಿದ್ದಾರೆ ಡ್ರೈವರ್. ನೋಡುನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ . ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.