Mysore
22
overcast clouds

Social Media

ಬುಧವಾರ, 17 ಜೂನ್ 2026
Light
Dark

ಲಾರಿಗೆ ಡಿಕ್ಕಿ ಹೊಡೆದ ಕಾರು : ಐವರ ದುರ್ಮರಣ

ಚಿತ್ರದುರ್ಗ : ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರಚದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 13 ರ ಮಲ್ಲಾಪುರ ಗ್ರಾಮದ ಬಳಿ ಸಂಭವಿಸಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಗ್ರಾಮದವರಾದ ಖಾಸಗಿ ಬ್ಯಾಂಕಿನ ಉದ್ಯೋಗಿ ಸಂಗನಬಸಪ್ಪ (36), ಅವರ ಪತ್ನಿ ರೇಖಾ (30), ಪುತ್ರ ಅಗಸ್ತ್ಯ(2), ರೇಖಾ ಅವರ ಸಹೋದರ ಭೀಮಾಶಂಕರ್(26), ಮತ್ತೊಬ್ಬ ಸ್ನೇಹಿತ ಕೆಜಿಎಫ್ ಮೂಲದ ಮಧುಸೂಧನ್(24) ಮೃತದುರ್ದೈವಿಗಳು.

ಸಂಗನಬಸಪ್ಪ ಅವರ ಮತ್ತೊಬ್ಬ ಪುತ್ರ ಆದರ್ಶ್(4) ಹಾಗೂ ಪುತ್ರಿ ಅನ್ವಿಕಾ(6) ಅವರು ಗಾಯಗೊಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ರಜೆಯ ಕಾರಣ ಸಂಗನಬಸಪ್ಪ ಕುಟುಂಬದವರು ಹಾಗೂ ಸ್ನೇಹಿತ ಈರಣ್ಣ ಅವರ ಕುಟುಂಬದವರು ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳಲು ತೀರ್ಮಾನಿಸಿದ್ದರು. ಅದರಂತೆ ಎರಡು ಕಾರಿನಲ್ಲಿ ಕಳೆದ ರಾತ್ರಿ 11 ಗಂಟೆಗೆ ಹೊರಟಿದ್ದರು.

ನೆಕ್ಸ್ ನ್ ಕಾರನ್ನು ಸಂಗನಬಸಪ್ಪ ಅವರು ಚಾಲನೆ ಮಾಡುತ್ತಿದ್ದರು. ಅದರಲ್ಲಿ ಅವರ ಪತ್ನಿ, ಪುತ್ರ ಹಾಗೂ ಸೋದರ ಸಂಬಂ ಇದ್ದು, ಕಾರು ಮುಂಜಾನೆ 3.30ರಲ್ಲಿ ಮಲ್ಲಾಪುರ ಬಳಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಐವರು ಮೃತಪಟ್ಟಿದ್ದಾರೆ. ಹಿಂದೆ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ಈರಣ್ಣ ಕುಟುಂಬ ಇದನ್ನು ಕಂಡು ತಕ್ಷಣ ನೆರವಿಗೆ ಧಾವಿಸಿದರು.
ಅಪಘಾತ ಕುರಿತಂತೆ ಮಾಹಿತಿ ಪಡೆದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್‍ಪಿ ಕೆ.ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಖುಷಿಯಿಂದಲೇ ಸ್ನೇಹಿತರ ಕುಟುಂಬ ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಆಸ್ಪತ್ರೆ ಬಳಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ನಿದ್ದೆ ಮಂಪರಿನಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!