Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬೀಡಾ ಮಾರಾಟಗಾರನ ಮಗಳು ಉತ್ತರ ಪ್ರದೇಶದಲ್ಲಿ ಮ್ಯಾಜಿಸ್ಪ್ರೇಟ್‌

ಲಖನೌ : ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗದ (ಯುಪಿಪಿಎಸ್‌ಸಿ) ಪರೀಕ್ಷೆಯಲ್ಲಿ ಬೀಡಾ ಮಾರಾಟಗಾರರೊಬ್ಬರ ಮಗಳು 21 ನೇ ರಾಂಕ್ ಪಡೆದು, ಗೊಂಡಾದಲ್ಲಿ ಉಪ ಉಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿ ನೇಮಕಗೊಂಡಿದ್ದಾರೆ.ಜ್ಯೋತಿ ಚೌರಾಸಿಯಾ ಉತ್ತರ ಪ್ರದೇಶ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ. ಅವರನ್ನು ಉತ್ತರ ಪ್ರದೇಶದ ಗೊಂಡಾದಲ್ಲಿ ಉಪವಿಭಾಗೀಯ ಮ್ಯಾಜಿಸ್ಪ್ರೇಟ್‌ ಆಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಬಾರ್ ಅಸೋಸಿಯೇಷನ್‌ಗೆ ಅರ್ಹತೆ ಪಡೆದುಕೊಂಡಿದ್ದ ಜ್ಯೋತಿ ಅವರು ಗೊಂಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ರೋಷನ್ ಜಾಕೋಬ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ.

ಜ್ಯೋತಿ ಅವರ ಹಿರಿಯ ಸಹೋದರ ಕೂಡ ಯಶಸ್ವಿ ವೃತ್ತಿಜೀವನ ಬಯಸಿದ್ದರು. ಆದರೆ ಹಣಕಾಸಿನ ಸಮಸ್ಯೆಗಳ ಕಾರಣದಿಂದ ಅವರು ಬೀಡಾ ಮಾರಾಟ ಅಂಗಡಿ ಸೇರಿಕೊಂಡು ತಂದೆಗೆ ಜತೆಯಾದರು. ಜ್ಯೋತಿಯ ತಂದೆ ಹೇಮ್‌ ಚಂದ್‌ ಚೌರಾಸಿಯಾ ಮೂಲತಃ ಡಿಯೋರಿಯಾ ಜಿಲ್ಲೆಯವರಾಗಿದ್ದು, ಗೊಂಡಾದಲ್ಲಿ ಕೆಲಸ ಸಿಗದ ಕಾರಣ ತಮ್ಮ ಕುಟುಂಬವನ್ನು ಪೋಷಿಸಲು 1997ರ ಫೆಬ್ರವರಿಯಲ್ಲಿ ಬೀಡಾ ಅಂಗಡಿ ತೆರೆದಿದ್ದರು. ನಂತರ 2000ನೇ ಇಸವಿಯಲ್ಲಿ ತಮ್ಮ ಇಬ್ಬರೂ ಮಕ್ಕಳನ್ನು ಗೊಂಡಾಕ್ಕೆ ಕರೆತಂದಿದ್ದರು.

ಗೊಂಡಾದಲ್ಲಿ ಜ್ಯೋತಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಳಿಕ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ನಡೆಸಲು ಲಖನೌಗೆ ತೆರಳಿದರು. ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಗಳ ಹೊರತಾಗಿಯೂ, 6ನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಪ್ರತಿಷ್ಠಿತ ಉದ್ಯೋಗವನ್ನು ಪಡೆಯುವುದು ಮತ್ತು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇವೆ ಸಲ್ಲಿಸುವುದು ಜ್ಯೋತಿಯ ಬಯಕೆಯಾಗಿದೆ. ಅವರ ಈ ಸಾಧನೆಯನ್ನು ಗೊಂಡಾದಲ್ಲಿನ ಜನರು, ಜ್ಯೋತಿ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಸಂಭ್ರಮಿಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ