Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 260 ಹೊಸ ಪ್ರಕರಣ ಪತ್ತೆ; ಒಂದೇ ದಿನ 228 ಮಂದಿ ಡಿಸ್‌ಚಾರ್ಜ್‌

ರಾಜ್ಯದಲ್ಲಿ ಕೊನೆಯ 24 ಗಂಟೆಗಳಲ್ಲಿ ಒಟ್ಟು 260 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಹಂಚಿಕೊಂಡಿದೆ. 228 ಜನ ಡಿಸ್‌ಚಾರ್ಜ್‌ ಆಗಿದ್ದು, ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1175 ಇದೆ. ಕೊನೆಯ 24 ಗಂಟೆಗಳಲ್ಲಿ 7497 ಟೆಸ್ಟ್‌ಗಳು ನಡೆದಿವೆ, 6621 ಆರ್‌ಟಿಪಿಸಿಆರ್‌ ಟೆಸ್ಟ್‌ಗಳು ನಡೆದಿವೆ ಹಾಗೂ 876 ರ್ಯಾಟ್‌ ಟೆಸ್ಟ್‌ಗಳು ನಡೆದಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 3.46% ಇದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಓರ್ವ ಸೋಂಕಿತ ಮೃತಪಟ್ಟಿದ್ದಾರೆ. ಕೊಪ್ಪಳದ 39 ವರ್ಷದ ಸೋಂಕಿತ ಸಾವನ್ನಪ್ಪಿದ್ದಾರೆ.

ಒಟ್ಟು 1175 ಸಕ್ರಿಯ ಪ್ರಕರಣಗಳ ಪೈಕಿ 1107 ಸೋಂಕಿತರನ್ನು ಹೋಮ್‌ ಐಸೋಲೇಷನ್‌ ಮಾಡಲಾಗಿದ್ದು, 68 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 45 ಸೋಂಕಿತರು ಜನರಲ್‌ ಬೆಡ್‌ನಲ್ಲಿದ್ದು, ಇಬ್ಬರು ಸೋಂಕಿತರು ಆಮ್ಲಜನಕ ಸಪೋರ್ಟ್‌ ಐಸೋಲೇಷನ್‌ ಬೆಡ್‌ನಲ್ಲಿದ್ದಾರೆ, 17 ಮಂದಿ ಐಸಿಯುನಲ್ಲಿದ್ದಾರೆ ಹಾಗೂ 4 ಸೋಂಕಿತರು ವೆಂಟಿಲೇಟರ್‌ ಸೌಲಭ್ಯವಿರುವ ಐಸಿಯು ವಾರ್ಡ್‌ನಲ್ಲಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಮೈಸೂರಿನಲ್ಲಿ 24, ಮಂಡ್ಯದಲ್ಲಿ 8 ಹಾಗೂ ಚಾಮರಾಜನಗರದಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ ಒಟ್ಟು 83, ಮಂಡ್ಯದಲ್ಲಿ 35 ಹಾಗೂ ಚಾಮರಾಜನಗರದಲ್ಲಿ 21 ಸಕ್ರಿಯ ಪ್ರಕರಣಗಳಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ