Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕರ್ನಾಟಕ ವಿಧಾನ ಸಭೆಯಿಂದ ಬಿಜೆಪಿಯ 10 ಶಾಸಕರು ಅಮಾನತು

ಬೆಂಗಳೂರು : ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಬಿಲ್‌ ಪ್ರತಿಯನ್ನು ಹರಿದು ಹಾಕಿದ ಬಿಜೆಪಿಯ ಒಟ್ಟು ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಧ್ಯಾಹ್ನದ ಅಅಧಿವೇಶನ ಆರಂಭವಾದ ಬೆನ್ನಲ್ಲೇ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಸಭೆಯನ್ನು ನಡೆಸಿಕೊಡುವಾಗ ಸರ್ಕಾರದ ಬಿಲ್‌ ಪ್ರತಿಯೊಂದನ್ನು ಬಿಜೆಪಿಯ ಹತ್ತಕ್ಕೂ ಅಧಿಕ ಶಾಸಕರು ಹರಿದು ಸ್ಪೀಕರ್‌ ಮೇಲೆ ಎಸೆದಿದ್ದಾರೆ.

ಇನ್ನು ವಿಧಾನಸಭಾ ಅಧಿವೇಶನದಲ್ಲಿ ಅಶಿಸ್ತಿನಿಂದ ನಡೆದುಕೊಮಡಿ ಹಿನ್ನೆಲೆಯಲ್ಲಿ ಬಿಜೆಪಿಯ 10 ಶಾಸಕರನ್ನು ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಇನ್ನು ಇದರ ಬೆನ್ನಲ್ಲೇ ಶಾಸಕರನ್ನು ಅಧಿವೇಶನದಿಂದ ಹೊರ ಹಾಕಲಾಗಿದೆ.

ವಿಧಾನಸಭಾ ಅಧಿವೇಶನದಿಂದ ಅಮಾನತ್ತಾದ ಶಾಸಕರು: 

  • ಆರ್ ಅಶೋಕ
  • ಸುನೀಲ್ ಕುಮಾರ್
  • ವೇದವ್ಯಾಸ ಕಾಮತ್
  • ಅಶ್ವಥ್ ನಾರಾಯಣ
  • ಯಶ್‌ಪಾಲ್‌ ಸುವರ್ಣ
  • ಧೀರಜ್‌ ಮುನಿರಾಜ್‌
  • ಅರವಿಂದ್‌ ಬೆಲ್ಲದ್‌
  • ಉಮಾನಾಥ್‌ ಕೋಟ್ಯಾನ್‌
  • ಅರಗ ಜ್ಞಾನೇಂದ್ರ
  • ಭರತ್‌ ಶೆಟ್ಟಿ
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ