Mysore
22
scattered clouds

Social Media

ಮಂಗಳವಾರ, 01 ಏಪ್ರಿಲ 2025
Light
Dark

Author: ವಾಸು ವಿ ಹೊಂಗನೂರು

Home/ವಾಸು ವಿ ಹೊಂಗನೂರು
ವಾಸು ವಿ ಹೊಂಗನೂರು

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

ಮೈಸೂರು: ಕನ್ನಡ ನಾಡು ನುಡಿಯ ಸಂರಕ್ಷಣೆ ಮಾಡುವ ಕಲಿಗಳನ್ನು ಅಪರಾಧಿಗಳಂತೆ ಕಾಣದೆ ಅವರನ್ನು ಪ್ರೋತ್ಸಾಹಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಯುವ ಜನತೆಗೆ ಉದ್ಯೋಗ ನೀಡಬೇಕು ಎಂದು ಹಿರಿಯ ಸಾಹಿತಿಗಳಾದ ನಾಡೋಜ ಹಂಪ ನಾಗರಾಜಯ್ಯ ಅವರು ತಿಳಿಸಿದರು. ಇಂದು ಚಾಮುಂಡಿ ಬೆಟ್ಟದ ಆವರಣದಲ್ಲಿ …

ಮೈಸೂರು: ಚಾಮರಾಜ ಕ್ಷೇತ್ರದ ಪ್ರಮುಖ ರಸ್ತೆಗಳ ಡಿವೈಡರ್‌ಗಳ ಮಧ್ಯಭಾಗದಲ್ಲಿ ವಿವಿಧ ಅಲಂಕಾರಿಕ ಗಿಡಗಳನ್ನು ನೆಡುವ ಮೂಲಕ ಹೊಸ ಸ್ಪರ್ಶ ನೀಡಲು ನಗರಪಾಲಿಕೆ ಮುಂದಾಗಿದೆ. ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆಗಳ ವಿಭಜಕ ಗಳ ನಡುವೆ ಒಟ್ಟು ೫೦ ಕಿ. ಮೀ. ವ್ಯಾಪ್ತಿಯಲ್ಲಿ ಅಲಂಕಾರಿಕ …

ಮೈಸೂರು: ಭಾರತ ಕ್ರಿಕೆಟ್‌ ತಂಡದ ಹೆಸರಾಂತ ಸ್ಪಿನ್‌ ಬೌಲರ್‌ ಯುಜ್ವೇಂದ್ರ ಚಹಲ್‌ ಮೈಸೂರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಸ್ವತಃ ಯದುವೀರ್ ಅವರು …

ವಾಸು ವಿ. ಹೊಂಗನೂರು ಮೈಸೂರು: ಮಾನಸ ಗಂಗೋತ್ರಿಯಲ್ಲಿ ಲಕ್ಷಾಂತರ ರೂ. ಖರ್ಚುಮಾಡಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಆರು ತಿಂಗ ಳಲ್ಲೇ ಹಾಳಾಗಿದ್ದು, ವಿದ್ಯಾರ್ಥಿಗಳಿಗೆ ನೀರಿಲ್ಲದೇ ತೀವ್ರ ತೊಂದರೆಯಾಗಿದೆ. ಹೀಗಾಗಿ ಮಾನಸ ಗಂಗೋತ್ರಿಯಲ್ಲಿ ಶುದ್ಧ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಸ್ಥಳೀಯ …

ಮಡಿಕೇರಿ: ಜಿಲ್ಲೆಯ ಕುಟ್ಟ ನಾಗರಹೊಳೆ ಗೇಟ್ ಸಮೀಪದ ಬಾಳೆಕಾವು ಹಾಡಿಗೆ ಭೇಟಿ ನೀಡಿದ ಮೈಸೂರು - ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅಲ್ಲಿನ‌ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಹಾಡಿಯ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸಂಸದರಿಗೆ ಮನವಿಯನ್ನು ಮಾಡಿಕೊಂಡರು. …

ಮೈಸೂರು: ರಸ್ತೆಯ ಬದಿ ಎಲ್ಲೆಂದರಲ್ಲಿ ಸುರಿದಿರುವ ಕಸದ ರಾಶಿ, ಮುಂಜಾನೆ ಶಾಲೆಗೆ ಬರುವ ಮಕ್ಕಳು ದುರ್ನಾತದಿಂದ ಮೂಗು ಮುಚ್ಚಿಕೊಂಡೇ ಬರುವ ದುಸ್ಥಿತಿ. ಇದು ನಗರದ ಚಾಮರಾಜಪುರಂ ರೈಲು ನಿಲ್ದಾಣದ ಹಿಂಬದಿಯಲ್ಲಿರುವ ಕ್ಯಾಪಿಟಲ್ ಆಂಗ್ಲ ಮಾಧ್ಯಮ ಶಾಲೆಯ ಬಳಿ ಕಂಡು ಬರುವ ದೃಶ್ಯಗಳು. …

ವಾಸು ವಿ.ಹೊಂಗನೂರು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಪ್ರತಿ ರಾಜ್ಯದ ಮೂಲೆ ಮೂಲೆಯಲ್ಲಿಯೂ ಒಂದೊಂದು ವೈವಿದ್ಯಮಯ ಸಂಸ್ಕೃತಿಯನ್ನು ಕಾಣಬಹುದು. ನಮ್ಮ ಸಾಹಿತ್ಯ, ಸಂಸ್ಕೃತಿಯು ನಶಿಸಿಹೋಗುವ ಹಂತ ತಲುಪಿದ್ದು, ಜನರಿಂದ ದೂರಾಗಿರುವ ಜನಪದ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಮರುಪರಿಚಯಿಸುವ ಹಲವಾರು ಪ್ರಯತ್ನಗಳು ನಡೆಯುತ್ತಿವೆ. …

ಮೈಸೂರು: ನಗರದ ರಿಂಗ್ ರಸ್ತೆಯಲ್ಲಿ ರುವ ವಿದ್ಯುತ್ ಕಂಬಗಳ ಅಸಮರ್ಪಕ ನಿರ್ವಹಣೆಯಿಂದಾಗಿ ವಿದ್ಯುತ್‌ದೀಪಗಳು ಹಾಳಾಗಿದ್ದು, ಈ ಮಾರ್ಗದಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಕಿತ್ತು ಬಂದಿರುವ ಸ್ವಿಚ್‌ಗಳು: ನಗರದ ಹೆಬ್ಬಾಳದ ಮೊದಲ ಹಂತದ ಪೆಟ್ರೋಲ್ ಬಂಕ್ ಬಳಿಯಿಂದ …

ದುರಸ್ತಿಗೆ ಗಮನ ಹರಿಸದ ನಗರಪಾಲಿಕೆ ಅಧಿಕಾರಿಗಳು ಮೈಸೂರು: ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪೇ ಅಂಡ್ ಯೂಸ್ ಶೌಚಾಲಯ ಕಳೆದ ಎಂಟು ತಿಂಗಳಿನಿಂದ ಹಾಳಾಗಿದ್ದು, ಯಾರ ಬಳಕೆಗೂ ಬಾರದಂತಾಗಿದೆ. ನಗರದ ಗೋಕುಲಂ ಮೂರನೇ ಹಂತದ ಕೆಆರ್‌ಎಸ್ ರಸ್ತೆ ಬದಿಯಲ್ಲಿ ಮೈಸೂರು ನಗರಪಾಲಿಕೆಯಿಂದ …

ಮೈಸೂರು: ಜಿಲ್ಲೆಯ ಗುಂಗ್ರಛತ್ರದ ಕೊಪ್ಪಲಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಜಯರಾಮ್‌ ಅವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಜೊತೆಯಲ್ಲಿ ಪತ್ನಿ ಜಾನಕಮ್ಮ ಮಕ್ಕಳಾದ ರಾಣಿ, ಪ್ರೇಮ್ ಕುಮಾರ್, ಸುನಿತಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರು …