Mysore
21
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

Author: ಚಂದು ಸಿಎನ್

Home/ಚಂದು ಸಿಎನ್
ಚಂದು ಸಿಎನ್

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

ಬೆಂಗಳೂರು  : ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹನಿಟ್ರ್ಯಾಪ್‌ ಕುರಿತು ಸಮಗ್ರ ವಿವರಣೆಗಳನ್ನೊಳಗೊಂಡಂತೆ ನೀಡಿದ್ದ ಮನವಿಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್‌ ರಾಜ್ಯದ ಪೊಲೀಸ್‌‍ ಮಹಾ ನಿರ್ದೇಶಕರಿಗೆ ರವಾನಿಸಿದ್ದಾರೆ. ನಿನ್ನೆ ಸಂಜೆ ಬೆಂಗಳೂರಿನಲ್ಲಿ ರಾಜಣ್ಣ ಅವರಿಂದ ಮನವಿ ಸ್ವೀಕರಿಸಿದ್ದ ಪರಮೇಶ್ವರ್‌ ಸಂಜೆಯೇ ಡಿಜಿಪಿಯವರಿಗೆ ಮನವಿ ರವಾನಿಸಿದ್ದು …

ಮೈಸೂರು: ಮಾರ್ಚ್ 27 ಬೆಳಗ್ಗೆ 10 ಗಂಟೆಯಿoದ ಸಂಜೆ 06 ಗಂಟೆಯವರೆಗೆ ವಿ.ವಿ. ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ಕೆ.ಹೆಚ್.ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ವಿದ್ಯುತ್ ವ್ಯತ್ಯಯಾಗಲಿದೆ. ವಿದ್ಯುತ್‌ವ್ಯತ್ಯಯವಾಗುವ ಪ್ರದೇಶಗಳು: ವಿಜಯನಗರ 4ನೇ ಹಂತ, ಕೆ.ಹೆಚ್.ಬಿ ಕಾಲೋನಿ, ಹೂಟಗಳ್ಳಿ ಗ್ರಾಮ, ಬೆಳವಾಡಿ ಗ್ರಾಮ, ಬಸವನಪುರ, ಮರಟಿಕ್ಯಾತನಹಳ್ಳಿ, ಪಂಚಚಾರ್ಯ್ಯ ಲೇಔಟ್, ಕೆ. ಹೆಮ್ಮನಹಳ್ಳಿ, ಲಿಂಗದೇವರ ಕೊಪ್ಪಲು, ಇಲವಾಲ, ಹೂಟಗಳ್ಳಿ ಕೆ.ಆರ್.ಎಸ್.ರೋಡ್, ಆದಿತ್ಯಾ ಬಡಾವಣೆ, ಎಸ್.ಆರ್.ಎಸ್. ಕಾಲೋನಿ, ಕೂರ್ಗಳ್ಳಿ ಗ್ರಾಮ, ಎನ್.ಹೆಚ್.ಬಿ ಕಾಲೋನಿ, ಬೆಳವಾಡಿ ಕೈಗಾರಿಕಾ ಪ್ರದೇಶ, ಶಾಹಿ ಗಾರ್ಮೆಂಟ್ಸ್, ಹೂಟಗಳ್ಳಿ ಕೈಗಾರಿಕಾ ಪ್ರದೇಶ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶ, ಗ್ಯ್ರಾಂಡ್ ಮೌರ್ಯ್ಯ ಹೋಟೆಲ್, ರಿಲಾಯನ್ಸ್, ಮಾಸ್ ಫರ್ನಿಚರ್ಸ್, ಯಶಸ್ವಿನಿ ಕಲ್ಯಾಣ ಮಂಟಪ, ಸೌಪರ್ಣಿಕ ಅಪಾರ್ಟ್ಮೆಂಟ್ ಹಿನಕಲ್, ಎಸ್.ವಿ.ಇ.ಐ ಕಾಲೇಜು ಸುತ್ತಮುತ್ತ, ಜಟ್ಟಿಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ವಿ.ವಿ.ಮೊಹಲ್ಲಾ ವಿಭಾಗದ, ಚಾ.ವಿ.ಸ.ನಿ.ನಿ., ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು : ಡಾ. ಬಾಬು ಜಗಜೀವನ್ ರಾಂ ಹಾಗೂ ಡಾ. ಬಿ.ಅರ್ ಅಂಬೇಡ್ಕರ್ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ …

ಮಂಡ್ಯ: ಜಿಲ್ಲೆಯ ಮೇಲುಕೋಟೆಯಲ್ಲಿ ಏ.7 ರಂದು ನಡೆಯುವ ವೈರಮುಡಿ ಉತ್ಸವ ಕುರಿತು ಜಿಲ್ಲಾಧಿಕಾರಿ ಡಾ: ಕುಮಾರ ಬುಧವಾರ ಉತ್ಸವದ ಸಿದ್ದತೆ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ಸಂಚಾರ ವ್ಯವಸ್ಥೆ ಪಾರ್ಕಿಂಗ್, ಭಕ್ತಾಧಿಗಳಿಗೆ ಮಾಡಿಕೊಂಡಿರುವ ಸಿದ್ಧತೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು …

ಅಹಮದಾಬಾದ್‌: ನಾಯಕ ಶ್ರೇಯಸ್‌ ಅಯ್ಯರ್‌ ಅವರ ಅರ್ಧಶತಕ, ಅರ್ಶ್‌ದೀಪ್‌ ಸಿಂಗ್‌ ಮಾರಕ ದಾಳಿಯ ಸಹಾಯದಿಂದ ಪಂಜಾಬ್‌ ಕಿಂಗ್ಸ್‌ ಅತಿಥೇಯ ಗುಜರಾತ್‌ ಟೈಟನ್ಸ್‌ ತಂಡವನ್ನು 11 ರನ್‌ಗಳ ಅಂತರಿದಿಂದ ಸೋಲಿಸಿದೆ. ಮೊದಲ ಪಂದ್ಯ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇಲ್ಲಿನ ನರೇಂದ್ರ …

ಬೆಂಗಳೂರು : ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನೀಡುತ್ತಿದ್ದ ನಕಲಿ ಅಂಕಪಟ್ಟಿ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ. ದಾರವಾಡದ ಪ್ರಶಾಂತ್ ಗುಂಡುಮಿ(41), ಬನಶಂಕರಿ ಮೂರನೇ ಹಂತ ಶ್ರೀನಿವಾಸ್ ನಗರದ ಮೊನಿಷ್(26) ಮತ್ತು ಗದಗ …

ಮಡಿಕೇರಿ: ಚಲಿಸುತ್ತಿದ್ದ ಕಾರಿನ ಸ್ಟೇರಿಂಗ್ ಲಾಕ್ ಆಗಿ ರಸ್ತೆ ಬದಿಯ ಬೇಲಿಗೆ ಅಪ್ಪಳಿಸಿ ಪಲ್ಟಿ ಆಗಿರುವ ಘಟನೆ ಸೋಮವಾರಪೇಟೆ - ಕುಶಾಲನಗರ ಮಾರ್ಗಮಧ್ಯದ ಬೇಳೂರು ಬಾಣೆಯಲ್ಲಿ ಸಂಭವಿಸಿದೆ. ಸೋಮವಾರಪೇಟೆಯಿಂದ ಕೂಡಿಗೆಯತ್ತ ತೆರಳುತ್ತಿದ್ದ ಇದ್ದಕ್ಕಿದ್ದಾಗೆ ಕಾರಿನ ಸ್ಟೇರಿಂಗ್  ಬೇಳೂರು ಬಾಣೆ ರಸ್ತೆಯಲ್ಲಿ   ಲಾಕ್‌ …

ಹನೂರು: ತಾಲ್ಲೂಕಿನ ನಾಲ್‌ರೋಡ್ ಹಾಗೂ ನೆಲ್ಲೂರು ಮಾರ್ಗಮಧ್ಯದ ರಸ್ತೆಯಲ್ಲಿ ಕಾಡಾನೆಯೊಂದು ಹಾಡಹಗಲೇ ರಸ್ತೆ ದಾಟಿ ಹೋಗಿರುವುದು ಪ್ರಯಾಣಿಕರು ಹಾಗೂ ಸುತ್ತಮುತ್ತಲ ಜನರಲ್ಲಿ ಆತಂಕ ಮೂಡಿಸಿದೆ. ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಯೊಂದು ರಸ್ತೆಯನ್ನು ದಾಟಿದ್ದು, …

ಬೆಂಗಳೂರು: ಅಸ್ಸಾಂನ ಗುವಾಹಟಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯ ಅಂಡರ್-23 ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿನ್ ಶಿಪ್ ನಲ್ಲಿ ಕರ್ನಾಟಕ ಮಹಿಳಾ ತಂಡ ರನ್ನರ್ ಆಪ್ ಆಗಿದೆ. ಸೋಮವಾರ ನಡೆದ ಮಹಿಳಾ ವಿಭಾಗದ ಪೈನಲ್ ನಲ್ಲಿ ರಾಜ್ಯ ತಂಡ ತಮಿಳುನಾಡು ವಿರುದ್ದ 58-76 …

ಮಂಡ್ಯ: ಕಾವೇರಿ ನದಿ ರಕ್ಷಣಾ ಸಮಿತಿ ವತಿಯಿಂದ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣವನ್ನು ಬೆಂಗಳೂರಿನ ಕೆ.ಆರ್.ರಸ್ತೆಯ ಕೆಂಪೇಗೌಡ ಆಸ್ಪತ್ರೆ ಆವರಣದಲ್ಲಿನ ಏಪ್ರಿಲ್ ೦೫ರಂದು ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಹೆಚ್.ಕೆ.ರಾಮು …

error: Content is protected !!