Mysore
19
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಅಕಾಡೆಮಿಯನ್ನು ತೊರೆದಿದ್ದನ್ನು ಜ್ಞಾಪಿಸಿಕೊಂಡು ಭಾವುಕರಾದ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ

ಹೊಸಪೇಟೆಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ. ಮೂರು ವರ್ಷಗಳ ತಮ್ಮ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷ ಸ್ಥಾನವನ್ನು ತೆರವುಗೊಳಿಸಿದ್ದಾಗಿ ತಿಳಿಸಿದ್ದಾರೆ

ವಿಜಯನಗರ ಜಿಲ್ಲೆಯ ಮರಿಯಮ್ಮನ ಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷಗಳ ಅಧಿಕಾರವಧಿಯಲ್ಲಿ ಸಾಕಷ್ಟು ‌ಕೆಲಸಗಳನ್ನು ಮಾಡಿದ್ದೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಕರೊನಾ ಸಂದರ್ಭದಲ್ಲಿ ಮನೆಯಲ್ಲಿ ಕೂರದೇ ಓಡಾಡಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ.

ಹಾವೇರಿ ಜಿಲ್ಲೆಯ ಮೂಗಳಿ ಗ್ರಾಮದಲ್ಲಿ ಜಾನಪದ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದೆ. ಸ್ಥಳೀಯ ಪ್ರತಿಭೆಗಳನ್ನ ಗುರುತಿಸಿ ಗೌರವ ಸಂಭಾವನೆ ಕೂಡ ನೀಡಿದ್ದೇವೆ. ಸಾಧಕರ ಆತ್ಮಕಥೆಯನ್ನು ಡಿಜಿಟಲ್ ಮಾಡುವ ಉದ್ದೇಶದಿಂದ 2.5 ಕೋಟಿ ರೂ. ವೆಚ್ಚದಲ್ಲಿ ಹಲವಾರು ಸಮಿತಿಗಳನ್ನು ನೇಮಕ ಮಾಡಿದ್ದೇನೆ’’ ಎಂದರು.

 

ಅಕಾಡೆಮಿಯನ್ನು ತೊರದಿದ್ದನ್ನು ಜ್ಞಾಪಿಸಿಕೊಂಡು ಭಾವುಕರಾಗಿ. ಕಳೆದ ಮೂರು ವರ್ಷ ಜನಪದ ಆಕಾಡೆಮಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ತೃಪ್ತಿ ಇದೆ. ಉಳಿದ ಅವಧಿಯನ್ನು ಮುಂದುವರಿಸಿದರೆ ಸಂತೋಷ. ಅಧಿಕಾರ ಇಲ್ಲದಿದ್ದರೂ ಸಂತೋಷವಾಗಿರುತ್ತೇನೆ. ಬೇರೆ ಯಾರಾದರೂ ಬಂದು ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು. ಅಕಾಡೆಮಿಯಿಂದ ನಿವೃತ್ತಿಯಾದ ನಂತರ ತಮಗೆ ರಾಜಕೀಯಕ್ಕೆ ಬರುವ ಇಚ್ಛೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!