Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಹೆಚ್ಎಎಲ್ ಸ್ಕೂಲ್‌ನಲ್ಲಿ ವಿವಿಧ ಹುದ್ದೆಗಳು

ನೇಮಕಾತಿ ಪ್ರಾಧಿಕಾರ: ಹೆಚ್‌ಎಎಲ್ ಎಜುಕೇಷನ್ ಕಮಿಟಿ

ಹುದ್ದೆಗಳ ಹೆಸರು: ಪ್ರಾಂಶುಪಾಲರು ಮತ್ತು ಹೆಡ್ ಮಾಸ್ಟರ್, ಹೆಡ್ ಮಿಸ್‌ಟ್ರೆಸ್.

ಉದ್ಯೋಗ ಸ್ಥಳ: ಬೆಂಗಳೂರು.

ಹುದ್ದೆ ಹೆಸರು, ಹುದ್ದೆಗಳ ಸಂಖ್ಯೆ ಪ್ರಾಂಶುಪಾಲರು: ೧ ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್: ೧

ವಿದ್ಯಾರ್ಹತೆ: ಪ್ರಾಂಶುಪಾಲರ ಹುದ್ದೆಗೆ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಕನಿಷ್ಠ ಶೇ.೫೦ ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಕನಿಷ್ಠ ೧೫ ವರ್ಷಗಳ ಬೋಧನಾ ಅನುಭವ ಇರಬೇಕು. ಸೀನಿಯರ್ ಸೆಕೆಂಡರಿ ಲೆವೆಲ್‌ನಲ್ಲಿ ಕನಿಷ್ಠ ೫ ವರ್ಷಗಳ ಟೀಚಿಂಗ್ ಎಕ್ಸ್ ಪೀರಿಯನ್ಸ್ ಇರಬೇಕು. ಕನಿಷ್ಠ ೩ ವರ್ಷ ವೈಸ್ ಪ್ರಿನ್ಸಿಪಾಲ್ / ಪ್ರಿನ್ಸಿಪಾಲ್ ಹೆಚ್‌ಎಂ ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಿ ಆಡಳಿತಾತ್ಮಕ ವಿಷಯದಲ್ಲಿ ಕಾರ್ಯಾನುಭವ ಹೊಂದಿರಬೇಕು.

ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ಬಿಎ, ಬಿ.ಇಡಿ / ಬಿಎಸ್ಸಿ, ಬಿ.ಇಡಿ ಜತೆಗೆ, ಪೋಸ್ಟ್ ಗ್ರಾಜುಯೇಷನ್‌ಗೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ ೧೦ ವರ್ಷಗಳಬೋಧನಾ ಅನುಭವವನ್ನು ಪ್ರೌಢಶಾಲೆಯಲ್ಲಿ ಹೊಂದಿರಬೇಕು. ಕನಿಷ್ಠ ೩ ವರ್ಷ ಹೆಡ್ ಮಾಸ್ಟರ್ / ಹೆಡ್ ಮಿಸ್‌ಟ್ರೆಸ್ ಆಗಿ ಆಡಳಿತಾತ್ಮಕ ಕಾರ್ಯಾನುಭವ ಹೊಂದಿರಬೇಕು.

ವಯೋಮಿತಿ: ಪ್ರಾಂಶುಪಾಲರ ಹುದ್ದೆಗೆ ೨೦೨೫ರ ಜೂನ್ ೦೧ಕ್ಕೆ ಕನಿಷ್ಠ ೪೦ ವರ್ಷ, ಗರಿಷ್ಟ ೫೦ ವರ್ಷ ವಯಸ್ಸಿನ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ.

ಹೆಡ್‌ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ೨೦೨೫ರ ಜೂನ್ ೦೧ಕ್ಕೆ ಕನಿಷ್ಠ ೪೦ ವರ್ಷ, ಗರಿಷ್ಟ ೫೦ ವರ್ಷ ವಯಸ್ಸಿನ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ.

ವೇತನಶ್ರೇಣಿ: ಪ್ರಾಂಶುಪಾಲರ ಹುದ್ದೆಗೆ ಬೇಸಿಕ್ ಪೇ ೭೮,೦೦೦ ರೂ. ಇರುತ್ತದೆ ಹಾಗೂ ಇತರೆ ಭತ್ಯೆಗಳು ಪ್ರತ್ಯೇಕವಾಗಿರುತ್ತವೆ.

ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ೬೯,೨೫೦ ರೂ.ಗಳಿಂದ ೧,೩೪,೨೦೦ ರೂ. ಹಾಗೂ ಇತರೆ ಭತ್ಯೆಗಳಿಗೂ ಅರ್ಹರು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೬-೦೧-೨೦೨೫

ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ ವಿಳಾಸ www.halec. co.in / www. halpublicschool / www.hnps. co.in /www.halgnanajyoti.co.in /www.hal-india. com ಗೆ ಭೇಟಿ ನೀಡಬಹುದು.

Tags:
error: Content is protected !!