Mysore
20
overcast clouds

Social Media

ಭಾನುವಾರ, 25 ಜನವರಿ 2026
Light
Dark

ಸೈಬರಿನ ಹೊಸ ವಂಚನೆಗಳು

ಸೈಬರ್ ಅಪರಾಧ ಪ್ರಕರಣಗಳು ದಿನೇದಿನೆ ಹೆಚ್ಚುತ್ತಲೇ ಇವೆ. ಜನರು ಎಷ್ಟೇ ಜಾಗ್ರತೆವಹಿಸಿದ್ದರೂ ಸೈಬರ್ ಅಪರಾಧಿಗಳು ಜನರನ್ನು ವಂಚಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ಯಾಪ್ಚಾ ಕೋಡ್ ಹೆಸರಿನಲ್ಲಿ ದೊಡ್ಡ ವಂಚನೆ ನಡೆಯುತ್ತಿದೆ.

ಗೂಗಲ್‌ನಲ್ಲಿ ಏನನ್ನಾದರೂ ಹುಡುಕುವಾಗ ಕ್ಯಾಪ್ಚಾ ಕೋಡ್‌ಅನ್ನು ಪರಿಶೀಲಿಸಲು ನೀವು ಅನೇಕ ಬಾರಿ ಪ್ರಾಪ್ಟ್‌ಅನ್ನು ನೋಡಿರಬೇಕು. ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ‘ ನಾನು ರೋಬೋಟ್ ಅಲ್ಲ’ ಎಂಬ ಆಯ್ಕೆ ಸಿಗುತ್ತದೆ. ಅದನ್ನು ಟಿಕ್ ಮಾಡಿದ ನಂತರ ನೀವು ಮುಂದುವರಿಯಲು ಸಾಧ್ಯವಾಗುತ್ತದೆ. ವಾಸ್ತವವಾಗಿ ಯಾವುದೇ ರೋಬೋಟ್ ಅದನ್ನು ದುರುಪಯೋಗಪಡಿಸಿಕೊಳ್ಳದಂತೆ ಪರಿಶೀಲಿಸಲು ಸರ್ಚ್ ಇಂಜಿನ್‌ಗಳು ಈ ರೀತಿಯ ಕ್ಯಾಪ್ಚಾ ಕೋಡ್ ಹಾಕುತ್ತವೆ. ನಕಲಿ ವೆಬ್‌ಸೈಟ್ ಗಳು ಮತ್ತು ಕ್ಯಾಪ್ಚಾ ಕೋಡ್‌ಗಳ ಮೂಲಕ ಹೊಸ ರೀತಿಯ ವಂಚನೆ ಮಾಡಲಾಗುತ್ತಿದೆ. ಈ ವಂಚನೆಯಲ್ಲಿ ಲುಮಾ ಸ್ಟೀಲರ್ ಎಂಬ ಮಾಲ್ ವೇರ್‌ಅನ್ನು ಬಳಕೆದಾರರ ಫೋನ್ ಗಳು ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಹರಡಲಾಗುತ್ತಿದೆ. ಸೈಬರ್ ಅಪರಾಧಿಗಳು ಯಾವುದೇ ಜನಪ್ರಿಯ ವೆಬ್‌ಸೈಟ್‌ನ ನಕಲಿ ವೆಬ್‌ಸೈಟ್‌ಅನ್ನು ರೂಪಿಸಿ, ಬ್ರೌಸರ್ ಅಧಿಸೂಚನೆಗಳನ್ನು ಆನ್ ಮಾಡಲು ಪರದೆಯ ಮೇಲೆ ಪ್ರಾಂಪ್ಟ್‌ಅನ್ನು ಪ್ರದರ್ಶಿಸುತ್ತಾರೆ.

ಸೈಬರ್ ಅಪರಾಧಿಗಳು ಈಗ ಅಂತಹ ಕ್ಯಾಪ್ಚಾ ಕೋಡ್‌ಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಮೂಲ ಕೋಡ್ಗಳ ಬದಲಿಗೆ ನಕಲಿ ಕ್ಯಾಪ್ಚಾ ಕೋಡ್ ಗಳನ್ನು ಸೇರಿಸುವ ಮೂಲಕ ಮಾಲ್ ವೇರ್ ಅಂದರೆ ವೈರಸ್‌ಗಳನ್ನು ಬಳಕೆದಾರರ ಮೊಬೈಲ್ ಫೋನ್‌ಗಳು ಅಥವಾ ಕಂಪ್ಯೂಟರ್‌ಗಳಿಗೆ ಕಳುಹಿಸುತ್ತಿದ್ದಾರೆ. ಈ ವೈರಸ್‌ಗಳು ಬಳಕೆದಾರರ ಸಾಧನವನ್ನು ಪ್ರವೇಶಿಸಿ ಅವರ ಮಾಹಿತಿಯನ್ನು ಕಳ್ಳತನ ಮಾಡುತ್ತವೆ. ಇದು ಸೈಬರ್ ಅಪರಾಧಿಗಳು ವಂಚನೆ ಮಾಡಲು ಕಂಡುಕೊಂಡಿರುವ ಹೊಸ ವಿಧಾನವಾಗಿದೆ. ಬಳಕೆದಾರರು ಈ ಬಗ್ಗೆ ಎಚ್ಚರಿಕೆವಹಿಸಬೇಕು.

Tags:
error: Content is protected !!