ಕುಮಾರಸ್ವಾಮಿ ವಿರಕ್ತಮಠ, ಮೈಸೂರು
ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ವಿಶೇಷ ಸ್ಥಾನಮಾನವಿದೆ. ಕುವೆಂಪುರವರ ಮಾತಿನಂತೆ ಇಲ್ಲಿ ‘ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’. ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು, ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋದರೆ ಯಶಸ್ಸು ನಮ್ಮನ್ನು ಅರಸಿ ಬರುತ್ತದೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳೂ ದೊರಕುತ್ತವೆ.
ಇಂದಿನ ಯುವ ಸಮೂಹ ಸಾಧನೆಯ ಹಾದಿಯಿಂದ ದೂರ ಸರಿಯುತ್ತಿರುವುದು ಬೇಸರದ ಸಂಗತಿ. ಮಹಾನಗರಗಳಲ್ಲಿನ ಬಹುತೇಕ ಯುವಕರು ಮೋಜು-ಮಸ್ತಿಯ ಚಟಕ್ಕೆ ಬಿದ್ದು, ಅಮೂಲ್ಯವಾದ ಯೌವ್ವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರಿಂದ ದೊರಕುವ ಸಂಪತ್ತನ್ನು ಖರ್ಚು ಮಾಡುವ ಕೆಲವೊಂದಿಷ್ಟು ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ತಂದೆ ಮಾಡಿಟ್ಟ ಆಸ್ತಿ ಎಷ್ಟಾದರೂ ಇರಲಿ, ನನ್ನದೊಂದಿಷ್ಟು ಶ್ರಮವಿರಲಿ ಎಂದು ಪರಿಶ್ರಮದಿಂದ ದುಡಿಯುವ ಜೀವನೋತ್ಸಾಹ ಬೇರೆಲ್ಲೂ ಸಿಗುವುದಿಲ್ಲ. ಆದ್ದರಿಂದ ಯುವಸಮೂಹ ದುಡಿಮೆಯತ್ತ ಸಾಗಬೇಕು.
ರಾಜ್ಯದಲ್ಲಿ ದಿನವೊಂದಕ್ಕೆ ೩೦೦ ಕೋಟಿ ರೂ. ಗಳಿಗೂ ಅಽಕ ಮೌಲ್ಯದ ಮದ್ಯ ಮಾರಾಟ ವಾಗಿರುವುದು, ಯುವಕರಿಗೆ ಜೀವನದ ಮೇಲಿನ ಉತ್ಸಾಹಕ್ಕಿಂತ ಮತ್ತಿನ ಮೇಲಿನ ವ್ಯಾಮೋಹವೇ ಹೆಚ್ಚಿದೆ ಎಂಬುದಕ್ಕೆ ಸಾಕ್ಷಿಯಂ ತಿದೆ. ಹೊಸ ವರ್ಷವನ್ನು ಹೊಸ ಹೊಸ ಆಲೋಚನೆಗಳಿಂದ, ಹೊಸ ಹೊಸ ಕನಸು ಗಳೊಂದಿಗೆ ಬರಮಾಡಿಕೊಳ್ಳಬೇಕಿದ್ದ ಯುವ ಸಮೂಹ ಮತ್ತಿನಲ್ಲಿ ಮುಳುಗಿದ್ದು ದುರಂತವೇ ಸರಿ.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ನಿರುತ್ಸಾಹಿಯಾಗುತ್ತಿದೆ. ವಿಜ್ಞಾನ, ತಂತ್ರ
ಜ್ಞಾನದ ಹೊಸ ಹೊಸ ಅನ್ವೇಷಣೆಗಳು ಸಮಾಜಕ್ಕೆ ಉಪಯೋಗವಾಗಿದ್ದರೂ ಅವು ಅಷ್ಟೇ ವೇಗವಾಗಿ ಉದ್ಯೋಗಗಳನ್ನು ಕಸಿಯು ತ್ತಿವೆ. ಇದರಿಂದಾಗಿ ಯುವಕರು ಅರ್ಹತೆಗೆ ತಕ್ಕಂತೆ ಕೆಲಸ ಸಿಗದಿದ್ದರೂ ಸಿಕ್ಕ ಕೆಲಸವನ್ನು ಮಾಡುತ್ತಾ ತಮ್ಮಲ್ಲಿರುವ ಪ್ರತಿಭೆಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಯೌವನವನ್ನು ಮಾನವೀಯ ಮೌಲ್ಯಗಳಿಲ್ಲದೆ ಕಳೆಯುತ್ತಿದ್ದಾರೆ.
ಪೀಳಿಗೆಯಿಂದ ಪೀಳಿಗೆಗೆ ಮನುಷ್ಯನ ಜೀವನ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿರಬಹುದು. ಆದರೆ ಅವನ ನೈಜ ಪ್ರಾಕೃತಿಕ ಜೀವನ ಸಂಕುಚಿತಗೊಳ್ಳುತ್ತಿದೆ. ನಾವು ನಮ್ಮ ಸುತ್ತಲಿನ ಪರಿಸರವನ್ನು, ಸಂಬಂಧಗಳನ್ನು, ಜೀವನ ಮೌಲ್ಯಗಳನ್ನು ಪ್ರೀತಿಸುತ್ತಿಲ್ಲ. ನಮ್ಮನ್ನೇ ನಾವು ಪ್ರೀತಿಸಲಾರದಷ್ಟು ಒತ್ತಡದ ಬದುಕನ್ನು ನಿರ್ಮಿಸಿಕೊಂಡಿದ್ದೇವೆ. ನಮಗೆ ತಂದೆ, ತಾಯಿ, ಮಕ್ಕಳ ಬಗೆಗಿನ ಕಾಳಜಿ ಇರಲಿ ಕನಿಷ್ಠ ಪಕ್ಷ ತಿನ್ನಲೂ ಬಿಡುವಿಲ್ಲದಂತಾಗಿದೆ.
ಒತ್ತಡದ ಬದುಕು ಯುವ ಸಮೂಹವನ್ನು ಜೀವನದ ಮೌಲ್ಯಗಳನ್ನೇ ಅರಿಯಲು ಬಿಟ್ಟಿಲ್ಲ. ಬದುಕನ್ನು ಸವಿಯಲು ಸಾಧ್ಯವಾಗಿಲ್ಲ. ಕಾರಣವಿಷ್ಟೇ, ದಿನವಿಡೀ ದುಡಿಯುವ ಕೈಗಳಿಗೆ ತಿಂಗಳಿಗೆ ಬೇಕಾಗುವಷ್ಟು ವೇತನವೇ ಸಿಗು ತ್ತಿಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇದೆ. ಎಲ್ಲರಲ್ಲೂ ಹಾಡುಗಾರನಿದ್ದಾನೆ, ಬರಹ ಗಾರನಿದ್ದಾನೆ, ನೃತ್ಯಗಾರನಿದ್ದಾನೆ. ಅವೆಲ್ಲದ್ದಕೂ ಸಮಯ ಹೊಂದಿಸಿಕೊಂಡು ಅವುಗಳನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.
ಜೀವನದ ಹಾದಿಯಲ್ಲಿ ಏಳುತ್ತಿದ್ದೇವೆ, ಬೀಳುತ್ತಿದ್ದೇವೆ. ಬಿದ್ದ ಕೆಲವರು ತಮ್ಮ ಶಕ್ತಿ ಗುರುತಿಸಿಕೊಂಡು ಎದ್ದು ಎತ್ತರಕ್ಕೇರಿದ್ದಾರೆ. ಏಳಲಾಗದವರು ಕೈ ಹಿಡಿದು ಎಬ್ಬಿಸಿದರೂ ಏಳಲಾರದಷ್ಟು ಹುದುಗಿ ಹೋಗಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಯುವ ಸಮೂಹ ಎಚ್ಚೆತ್ತುಕೊಂಡು ಮುನ್ನಡೆಯಬೇಕಿದೆ.