Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಲ್ಯಾಣ ಕರ್ನಾಟಕದಲ್ಲಿ ಚಾಲಕ/ತಾಂತ್ರಿಕ ಹುದ್ದೆಗಳು

ನೇಮಕಾತಿ ಪ್ರಾಧಿಕಾರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

ಹುದ್ದೆಯ ಹೆಸರು: ಚಾಲಕರ ಹುದ್ದೆಗಳು ಹಾಗೂ ತಾಂತ್ರಿಕ ಸಹಾಯಕರ ಹುದ್ದೆಗಳು
ಹುದ್ದೆಗಳ ಸಂಖ್ಯೆ: ಚಾಲಕರ ಹುದ್ದೆಗಳ ಸಂಖ್ಯೆ 100, ತಾಂತ್ರಿಕ ಸಹಾಯಕರ ಒಟ್ಟು ಹುದ್ದೆಗಳ ಸಂಖ್ಯೆ 50

ಆಯ್ಕೆಯ ವಿಧಾನ: ನೇರ ಸಂದರ್ಶನ
ವಿದ್ಯಾರ್ಹತೆ: ಚಾಲಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. (ಮುಕ್ತ ವಿವಿಯಿಂದ ಪಡೆದ ಎಸ್.ಎಸ್.ಸಿ 500 ಅಂಕಗಳ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.) ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ ಚಾಲನಾ ಪರವಾನಿಗೆ ಪಡೆದು ಕನಿಷ್ಟ 2 ವರ್ಷಗಳಾಗಿರಬೇಕು. ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್ವಿ ಬ್ಯಾಡ್ಜ್ ಹೊಂದಿರಬೇಕು.‌

ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಹತೆ: ಐಟಿಐ ಅಥವಾ ಡಿಪ್ಲೊಮೊ ಶಿಕ್ಷಣವನ್ನು ಮೆಕ್ಯಾನಿಕಲ್ ಬ್ರ್ಯಾಂಚ್‌ನಲ್ಲಿ ಪಡೆದಿದ್ದು, ಮೆಕ್ಯಾನಿಕ್ ಕೆಲಸದ ಅನುಭವವಿರಬೇಕು.

ವೇತನ ಶ್ರೇಣಿ: ಇವು ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು, ಕರ್ತವ್ಯದ ಗಂಟೆ ಹಾಗೂ ದಿನಗಳ ಆಧಾರದ ಮೇಲೆ ವೇತನವನ್ನು ಕೆಕೆಆರ್‌ಟಿಸಿ ಆಯ್ಕೆ ಸಮಿತಿಯು ನಿಗದಿ ಮಾಡಲಿದೆ.

ಚಾಲಕ ಹುದ್ದೆಯ ನೇರ ಸಂದರ್ಶನ 02-12-20240od 04-12-2024ರವರೆಗೆ ತಾಂತ್ರಿಕ ಸಹಾಯಕ ಹುದ್ದೆಗೆ ನೇರ ಸಂದರ್ಶನ:
06-12-2024ರಿಂದ 7-12-2024 ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕೃತ ವೆಬ್‌ಸೈಟ್ ವಿಳಾs:https://kkrtc. karnataka.gov.in ಗೆ ಭೇಟಿ ನೀಡಬಹುದು.

 

Tags: