ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ೭೮ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕೇವಲ ಒಂದು ರೂಪಾಯಿಗೆ ನಿತ್ಯ ೨ಜಿಬಿ ಡೇಟಾ, ಅನಿಯಮಿತ ಕರೆ ಯೋಜನೆಯನ್ನು ಪ್ರಕಟಿಸಿದೆ.
ಬಿಎಸ್‌ಎನ್‌ಎಲ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹೊಸ ಆಜಾದಿ ಕಾ ಯೋಜನೆಯನ್ನು ಘೋಷಿಸಿದೆ. ಇದರ ಪ್ರಕಾರ ಬಿಎಸ್‌ಎನ್‌ಎಲ್‌ನ ಈ ಒಂದು ರೂ. ಪ್ಲ್ಯಾನ್ ಬಳಕೆದಾರರಿಗೆ ಅನಿಯಮಿತ ಕರೆಗಳ ಜೊತೆಗೆ ನಿತ್ಯ ೧೦೦ ಎಸ್‌ಎಂಎಸ್ ಉಚಿತ ನೀಡುತ್ತಿದೆ. ಇದರ ಜೊತೆಗೆ ೨ ಜಿಬಿ ದೈನಂದಿನ ಡೇಟಾವನ್ನೂ ಈ ಪ್ಯಾಕ್‌ನಲ್ಲಿ ನೀಡುತ್ತಿದೆ.
ಬಿಎಸ್‌ಎನ್‌ಎಲ್ ಕಂಪೆನಿಯ ಈ ಯೋಜನೆಯ ಮಾನ್ಯತೆ ಒಂದು ತಿಂಗಳು ಮಾತ್ರ! ಈ ಪ್ಲ್ಯಾನ್ ಜೊತೆಗೆ ಹಲವು ಪ್ರಯೋಜನಗಳೊಂದಿಗೆ ಸಿಮ್ ಕಾರ್ಡ್ ಅನ್ನೂ ಉಚಿತವಾಗಿ ನೀಡಲಾಗುತ್ತಿದೆ. ಬಿಎಸ್‌ಎನ್‌ಎಲ್ ಸೇವೆಯನ್ನು ಬಳಸಲುಬಯಸಿದರೆ ಕೇವಲ ಒಂದು ರೂಪಾಯಿ ಪಾವತಿಸುವ ಮೂಲಕ ಹೊಸ ಸಿಮ್ ಖರೀದಿಸಿ, ಇದರಿಂದ ಅನಿಯಮಿತ ಕರೆ, ಉಚಿತ ಎಸ್‌ಎಂಎಸ್ ಮತ್ತು ನಿತ್ಯ ೨ಜಿಬಿ ಡೇಟಾವನ್ನೂ ಪಡೆಯಬಹುದು. ಬಿಎಸ್‌ಎನ್‌ಎಲ್‌ನ ಈ ಫ್ರೀಡಂ ಆಫರ್ ಆ.೧ರಿಂದ ಪ್ರಾರಂಭವಾಗಿದ್ದು ಆ.೩೧ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಜನರು ತಮ್ಮ ಹತ್ತಿರದ ಬಿಎಸ್‌ಎನ್‌ಎಲ್ ಕಚೇರಿ ಅಥವಾ ಚಿಲ್ಲರೆ ವ್ಯಾಪಾರಿಗಳ ಮೂಲಕ ಸಿಮ್ ಪಡೆದು ಈ ಆಫರ್‌ನ ಸೇವೆಯನ್ನು ಬಳಸಿಕೊಳ್ಳಬಹುದು.





