ಫ್ರಾನ್ಸ್‌ನ ಎಲೆಕ್ಟ್ರಾನಿಕ್ ಬ್ಯಾಂಡ್ ಆಗಿರುವ ಥಾಯ್ಸನ್ ತನ್ನ ಅತ್ಯಾಧುನಿಕ ‘ಅಲ್ಪಾಬೀಟ್ 25’ ಮತ್ತು ‘ಅಲ್ಫಾಬೀಟ್ 60’ ಎಂಬ ಎರಡು ಮಾದರಿಯ ಹೊಸ ಆಡಿಯೋ ಟಿವಿ ಸೌಂಡ್‌ಬಾರ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಕಂಪೆನಿಯು ಭಾರತದಲ್ಲಿ ಮುಂದಿನ 6 ತಿಂಗಳುಗಳಲ್ಲಿ 20 ವಿಭಿನ್ನ ಆವೃತ್ತಿಗಳನ್ನು ಪರಿಚಯಿಸುವ ಗುರಿ ಹೊಂದಿದ್ದು, ಇದಕ್ಕಾಗಿ ‘ಮೇಕ್ ಇನ್ ಇಂಡಿಯಾ ಯೋಜನೆಯಡಿ ಸೌಂಡ್ ಬಾರ್ಗಳ ತಯಾರಿಕೆಗಾಗಿ 50 ಕೋಟಿ ರೂ. ಹೂಡಿಕೆ ಮಾಡಲು ಸಿದ್ಧವಾಗಿದೆ. ಈಗಾಗಲೇ ಉತ್ತರ ಪ್ರದೇಶದ ನೋಯ್ದಾ ನಗರದಲ್ಲಿ ತನ್ನ ನೂತನ ತಯಾರಿಕಾ ಘಟಕ ತೆರೆದಿದ್ದು, ವರ್ಷದಲ್ಲಿ ಸುಮಾರು 5 ಲಕ್ಷ ಸ್ವೀಕರ್‌ಗಳನ್ನು ತಯಾರಿಸುವ ಯೋಜನೆಯಲ್ಲಿದೆ.
ಇನ್ನು ಆಕರ್ಷಕ ವಿನ್ಯಾಸದಲ್ಲಿ ರೂಪುಗೊಂಡಿರುವ ಅಲ್ಫಾಬೀಟ್25 ವೈರ್ ಹಾಗೂ ವೈರ್‌ಸ್ ಎರಡು ಮಾದರಿಗಳಲ್ಲಿ ಲಭ್ಯವಿದ್ದು, ಅಲ್ಲಾಬೀಟ್60 ವೈ ಅಳವಡಿಕೆಯ ಸೌಲಭ್ಯವನ್ನು ಮಾತ್ರ ಹೊಂದಿದೆ.
ಆಲ್ಫಾಬೀಟ್2582Hz-20kHz ಫ್ರೀಕ್ವೆನ್ಸಿ ಸಾಮರ್ಥ್ಯ ಹೊಂದಿದ್ದು, AUX IN, USB ಕನೆಕ್ಟಿವಿಟಿ ಸೌಲಭ್ಯ ಹೊಂದಿದ್ದು, 35Hz-20kHz ಫ್ರೀಕ್ವೆನ್ಸಿ ಸಾಮರ್ಥ್ಯವಿರುವ ಆಲ್ಫಾಬೀಟ್60 ಬ್ಲೂಟೂತ್, AUX IN, USB ಕನೆಕ್ಟಿವಿಟಿ ಜತೆಗೆ ರಿಮೋಟ್ ಕಂಟ್ರೋಲ್ ಹೊಂದಿದೆ. ಈ ಸೌಂಡ್‌ಬಾರ್‌ಗಳು ಮಾರುಕಟ್ಟೆಯಲ್ಲಿ ಕ್ರಮವಾಗಿ 1,699 ರೂ. ಮತ್ತು 9,899 ರೂ.ಗಳಿಗೆ ಲಭ್ಯವಿದೆ.