Mysore
22
few clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಬಂದಿದೆ ಬಜೆಟ್‌ ಸ್ನೇಹಿ ರೆಡ್‌ಮಿ ಫೋನ್

ಚೀನಾದ ಸ್ಮಾರ್ಟ್‌ಫೋನ್ ಕಂಪೆನಿ ಶಓಮಿ ಇಂಡಿಯಾ, ಜಾಗತಿಕ ಮಾರುಕಟ್ಟೆಗೆ ರೆಡ್‌ಮಿ ೧೪ ಸಿ ೫ಜಿ ಹೆಸರಿನ ಹೊಸ ಸ್ಮಾರ್ಟ್‌ಫೋನ್‌ಅನ್ನು ಬಿಡುಗಡೆ ಮಾಡಿದೆ.

ಇದೊಂದು ಬಜೆಟ್ ಸ್ನೇಹಿ ಮೊಬೈಲ್ ಆಗಿದ್ದು, ೧೭.೫ ಸೆಂ.ಮೀ. ಎಚ್‌ಡಿ ಮತ್ತುಡಾಟ್‌ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಗರಿಷ್ಟ ಬ್ರೈಟ್‌ನೆಸ್ ೬೦೦ ನಿಟ್ಸ್ ಆಗಿದೆ. ಹೀಗಾಗಿ ಇದು ಸ್ಟ್ರೀಮಿಂಗ್, ಗೇಮಿಂಗ್ ಹಾಗೂ ಬ್ರೌಸಿಂಗ್‌ನ ಉತ್ತಮ ವೀಕ್ಷಣೆಯ ಅನುಭವ ನೀಡುತ್ತದೆ.

ಇನ್ನು ಈ ಫೋನ್ ೫೦ ಎಂಪಿ ಎಐ ಡ್ಯುಯೆಲ್ ಕ್ಯಾಮೆರಾ, ೫೧೬೦ ಎಂಎಎಚ್ ಬ್ಯಾಟರಿ ಮತ್ತು ೧೮ ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಎರಡು ವರ್ಷಗಳ ಆಂಡ್ರಾಯ್ಡ್ ಅಪ್‌ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್ ಸೌಲಭ್ಯ ಒದಗಿಸುತ್ತದೆ. ಇನ್ನು ಈ ಫೋನ್ ಸ್ನಾ ಪ್ ಡ್ರ್ಯಾಗನ್ ೪ಜೆನ್ ೨ ೫ಜಿ ಪ್ರೊಸೆಸರ್ ಹೊಂದಿದ್ದು, ೧೨ ಜಿಬಿ ರ‍್ಯಾಮ್ (೬ಜಿಬಿ+೬ಜಿಬಿ ಎಕ್ಸ್‌ಟೆಂಡೆಡ್) ಮತ್ತು ೧೨೮ ಜಿಬಿ ಯುಎಫ್‌ಎಸ್ ೨.೨ ಸ್ಟೋರೇಜ್ ಹೊಂದಿದೆ.

ಈ ಫೋನ್ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ೪ ಜಿಬಿ + ೬೪ ಜಿಬಿ ವೇರಿಯಂಟ್‌ಗೆ ೯,೯೯೯ ರೂ., ೪ಜಿಬಿ + ೧೨೮ ಜಿಬಿಗೆ ೧೦,೯೯೯ ರೂ. ಹಾಗೂ ೬ಜಿಬಿ + ೧೨೮ ಜಿಬಿ ವೇರಿಯಂಟ್‌ನ ಬೆಲೆ ೧೧,೯೯೯ ರೂ. ನಿಗದಿಯಾಗಿದೆ.

 

Tags:
error: Content is protected !!