Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಅಣ್ಣ-ತಂಗಿಯ ಕರಾಟೆ ಸಾಧನೆ

• ಜಿ.ತಂಗಂ ಗೋಪಿನಾಥಂ

ಶಾಲೆಯಲ್ಲಿ ವಿದ್ಯಾರ್ಥಿಗಳಾಗಿ, ಹೊರಗೆ ಸ್ನೇಹಿತರಾಗಿ, ಸಂಬಂಧದಲ್ಲಿ ಅಣ್ಣ-ತಂಗಿಯರಾಗಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಎಸ್.ಕಾರ್ತಿಕ್ ಹಾಗೂ ಎಸ್.ಗೌತಮಿ ಇಬ್ಬರೂ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ಭವಿಷ್ಯದ ಕರಾಟೆ ಪಟುಗಳಾಗಿ ಮಿನುಗಲು ಅಣಿಯಾಗುತ್ತಿದ್ದಾರೆ..!

ಕರಾಟೆಯನ್ನೇ ಉಸಿರಾಗಿಸಿಕೊಂಡಿರುವ ಇವರು, ವಿಜಯ ನಗರದಲ್ಲಿರುವ ಅನಂತಗೀತಾ ವಿದ್ಯಾಲಯದ ವಿದ್ಯಾರ್ಥಿಗಳು, ಗೌತಮಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಕಾರ್ತಿಕ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರೂ ಓದಿನಲ್ಲೂ ಮುಂದಿದ್ದಾರೆ. 2025ರ ಜ.5ರಂದು ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಾಗ ಮಾರ್ಷಲ್ ಅಕಾಡೆಮಿ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಗೌತಮಿ ಮೊದಲ ಸ್ಥಾನ ಪಡೆದರೆ, ಕಾರ್ತಿಕ್ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಇವರಿಗೆ ಕರಾಟೆ ಮಾಸ್ಟರ್ ಶಾಂತ ಕುಮಾರ್ ತರಬೇತಿ ನೀಡುತ್ತಿದ್ದಾರೆ. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕರುನಾಡಿಗೆ ಹೆಮ್ಮೆ ತಂದುಕೊಟ್ಟಿರುವ ಈ ಇಬ್ಬರು ಈಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗಲಿದ್ದಾರೆ.

ಜೊತೆಗೂಡಿ ಓದು, ಅಭ್ಯಾಸ…
ಕಾರ್ತಿಕ್ ಮತ್ತು ಗೌತಮಿ ಅಣ್ಣ-ತಂಗಿ. ಇವರಿಬ್ಬರೂ ಮೈಸೂರಿನ ನಿವಾಸಿ ಸತೀಶ್ ಮತ್ತು ಚೈತ್ರಾ ದಂಪತಿಯ ಮಕ್ಕಳು. ಜೊತೆಗೂಡಿ ನಿತ್ಯದ ದಿನಚರಿ ಆರಂಭವಾ ಗುತ್ತದೆ. ಓದು, ಆಟ, ನಿರಂತರ ಅಭ್ಯಾಸ ಎಲ್ಲವೂ ಜೊತೆ ಯಾಗಿಯೇ ನಡೆಯುತ್ತದೆ. ಎರಡು ವರ್ಷಗಳ ಹಿಂದೆ ಕರಾಟೆಯತ್ತ ಆಸಕ್ತಿ ಹೊಂದಿದರು. ಯಾವುದೇ ಆಯುಧಗಳಿಲ್ಲದೆ, ತಮ್ಮ ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿ ಎಂಬ ಕಾರಣದಿಂದ ಇಬ್ಬರಿಗೂ ಕರಾಟೆ ಕಲಿಯಬೇಕು ಎಂಬ ಆಸೆ ಚಿಗುರಿತು. ಇವರ ಆಸೆಗೆ ಪೋಷ ಕರೂ ಕೈ ಜೋಡಿಸಿದರು. ಮುಂದೆ ಅವರ ಅಭ್ಯಾಸ ಆರಂಭವಾಯಿತು. ಈಗ ರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಕರಾಟೆಯಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ.

ಪ್ರತಿನಿತ್ಯ 2 ಗಂಟೆ ಅಭ್ಯಾಸ
ಕಾರ್ತಿಕ್ ಮತ್ತು ಗೌತಮಿ ಅವರು ಶೈಕ್ಷಣಿಕ ಕಲಿಕೆಯ ಜತೆಗೆ ವಿಜಯನಗರದ ಪ್ರತಿನಿಮಿಷ ಕರಾಟೆ ತರಬೇತಿ ಶಾಲೆಯಲ್ಲಿ ಪ್ರತಿನಿತ್ಯ 2 ಗಂಟೆಗಳ ಕಾಲ ಕರಾಟೆ ಅಭ್ಯಾಸದಲ್ಲಿ ನಿರತರಾಗುತ್ತಿದ್ದಾರೆ. ನಿತ್ಯ ಸಂಜೆ 5.30 ರಿಂದ 7.30ರವರೆಗೆ ಶಾಂತಕುಮಾರ್ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

ಗೌತಮಿಯ ಸಾಧನೆ

  • 2023 ನ.19 ರಂದು ಮೈಸೂರಿನಲ್ಲಿ ನಡೆದ 3ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ.
  • •2023 ಡಿ.3 ರಂದು ಮೈಸೂರಿನಲ್ಲಿ ನಡೆದ 6ನೇ ಜಿಕೆಎ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಸ್ಥಾನ.
  • •2023 ಡಿ.10 ರಂದು ಮೈಸೂರಿನಲ್ಲಿ ನಡೆದ 30ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ.
  • 2024 ಜ.26 ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನ ಕಥಾ ವಿಭಾಗದಲ್ಲಿ ಪ್ರಥಮ, ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ.
  • • 2025 ಜ.5 ರಂದು ಮೈಸೂರಿನಲ್ಲಿ ನಡೆದ 19ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ.

ಕಾರ್ತಿಕ್ ಸಾಧನೆ

  • •2023 ನ.19ರಂದು ಮೈಸೂರಿನಲ್ಲಿ ನಡೆದ 3ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ.
  • 2023 ಡಿ.3ರಂದು ಮೈಸೂರಿನಲ್ಲಿ ನಡೆದ 6ನೇ ಜಿಕೆಎ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಸ್ಥಾನ.
  • •2023 ಡಿ.10ರಂದು ಮೈಸೂರಿನಲ್ಲಿ ನಡೆದ 30ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ.
  • 2024 ಜ.26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನ ಕಥಾ ವಿಭಾಗದಲ್ಲಿ ಪ್ರಥಮ ಸ್ಥಾನ. •2025 ಜ.5ರಂದು ಮೈಸೂರಿನಲ್ಲಿ ನಡೆದ 19ನೇ
  • ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ.

ನಾನೂ ಯುಟೂಬ್‌ನಲ್ಲಿ ಬ್ರೂಸ್ಲಿ ಅವರ ಫೈಟ್ ನೋಡುತ್ತಿದ್ದೆ. ಆಗ ನಾನು ಕರಾಟೆ
ಕಲಿಯಬೇಕೆಂಬ ಆಸಕ್ತಿ ಮೊಳೆಯಿತು. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಯಗಳಿಸಿದ್ದಕ್ಕೆ ಖುಷಿ ಆಗಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆಯುವುದೇ ನನ್ನ ಗುರಿ. ಅದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ.
-ಎಸ್.ಕಾರ್ತಿಕ್, ಕರಾಟೆ ಪಟು.

ನಾನು ಕರಾಟೆ ಕಲಿಯಲು ಅಣ್ಣನೇ ಪ್ರೇರಣೆ. ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯಲು ಆರಂಭಿಸಿದೆ. ಉತ್ತಮ ಕರಾಟೆ ಪಟು ಆಗಬೇಕೆಂಬುದು ನನ್ನ ಕನಸು. ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದರಿಂದ ಖುಷಿಯಾಗಿದೆ.
-ಎಸ್‌.ಗೌತಮಿ, ಕರಾಟೆ ಪಟು.

Tags:
error: Content is protected !!