ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ೭೫ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪದವಿ, ಡಿಪ್ಲೊಮಾ ಮತ್ತು ಐಟಿಐ ಅಪ್ರೆಂಟಿಸ್ ಹುದ್ದೆಗಳು ಲಭ್ಯವಿವೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ ೨೧ ರೊಳಗೆ isro.gov.in ಅಥವಾ
nats.edcucation.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇಸ್ರೋದಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಟ್ಟು ೭೫ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಏ.೨೧ರೊಳಗೆ ಆನ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳಲ್ಲಿ ಪದವಿ ಅಪ್ರೆಂಟಿಸ್ ಟ್ರೈನಿ ೪೬ ಹುದ್ದೆಗಳು, ಡಿಪ್ಲೊಮಾ ಅಪ್ರೆಂಟಿಸ್ ಟ್ರೈನಿ ೧೫ ಹುದ್ದೆಗಳು, ವಾಣಿಜ್ಯ ಅಭ್ಯಾಸದಲ್ಲಿ ಡಿಪ್ಲೊಮಾ ೫ ಹುದ್ದೆಗಳು ಮತ್ತು ಟ್ರೇಡ್ ಐಟಿಐ ೯ ಹುದ್ದೆಗಳು ಸೇರಿವೆ.
ಅರ್ಹತಾ ಮಾನದಂಡಗಳು: ಪದವಿ ಅಪ್ರೆಂಟಿಸ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ ಅಥವಾ ಬಿ.ಟೆಕ್ ಪದವಿ ಪಡೆದಿರಬೇಕು. ಡಿಪ್ಲೊಮಾ ಅಪ್ರೆಂಟಿಸ್ ಗಾಗಿ ಅರ್ಜಿದಾರರು ಸಂಬಂಧಿಸಿದ ವಿಭಾಗದಲ್ಲಿ ಡಿಪ್ಲೊಮಾ ಪಡೆದಿರಬೇಕು. ಟ್ರೇಡ್ ಐಟಿಐ ಅಪ್ರೆಂಟಿಸ್‌ಗಾಗಿ ಅಭ್ಯರ್ಥಿಯು ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ೨೦೨೨, ೨೦೨೩ ಮತ್ತು ೨೦೨೪ನೇ ಸಾಲಿನಲ್ಲಿ ಉತ್ತೀರ್ಣರಾದವರು ಮಾತ್ರ ಅಪ್ರೆಂಟಿಸ್‌ಶಿಪ್ ಗೆ ಅರ್ಹರು.
ಅರ್ಜಿ ಸಲ್ಲಿಸುವುದು ಹೇಗೆ?
■ nats.edcucation.gov.in ಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
■ ಇಲ್ಲಿ ವಿವರಗಳನ್ನು ನಮೂದಿಸುವ ಮೂಲಕ ನೋಂದಾಯಿಸಿ.
■ ಈಗ ಇಸ್ರೋ ಅಪ್ರೆಂಟಿಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
■ ಅರ್ಜಿ ನಮೂನೆಯನ್ನು ಭರ್ತಿ ಮಾಡಿ,
■ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿ.