ಐಬಿಪಿಎಸ್ ಆರ್‌ಆರ್‌ಬಿ ಬ್ಯಾಂಕ್ ಗಳಲ್ಲಿ ಪ್ರೊಬೇಷನರಿ ಆಫೀಸರ್ (ಪಿಒ), ಆಫೀಸರ್ ಸ್ಕೇಲ್ ೨ ಮತ್ತು ೩, ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್)ನ ೧೩,೨೧೭ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ibps.inಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಹತೆ ಮತ್ತು ಶುಲ್ಕ ವಿವರಗಳನ್ನು ಪರಿಶೀಲಿಸಿ ಸೆ.೨೧ರೊಳಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಪ್ರಾಥಮಿಕ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿದೆ.
ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್ ೨ ಹುದ್ದೆಗಳಿಗೆ ಅರ್ಜಿದಾರರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯ ದಿಂದ ಪದವಿ ಪಡೆದಿರಬೇಕು. ಆಫೀಸರ್ ಸ್ಕೇಲ್- ಸ್ಪೆಷಲಿಸ್ಟ್ ಆಫೀಸರ್ (ಮ್ಯಾನೇಜರ್) ಹುದ್ದೆಗಳಿಗೆ ಅಭ್ಯರ್ಥಿಯು ಕಾನೂನು ಪದವಿಯನ್ನು ಪಡೆದಿರಬೇಕು.
ಹುದ್ದೆಗಳಿಗೆ ಅನುಗುಣವಾಗಿ ವಯಸ್ಸಿನ ಮಿತಿಯನ್ನು ನಿರ್ಧರಿಸಲಾಗಿದೆ. ಪ,ಜಾ ಮತ್ತು ಪ,ಪಂ ದ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ೫ ವರ್ಷ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ೩ ವರ್ಷಗಳ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕ ಎಷ್ಟು?: ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್ ವರ್ಗದವರಿಗೆ ಅರ್ಜಿ ಶುಲ್ಕವನ್ನು ೮೫೦ ರೂ. ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಮತ್ತು ವಿಶೇಷಚೇತನ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ೧೭೫ ರೂ. ಗಳನ್ನು ಪಾವತಿಸಬೇಕಾಗುತ್ತದೆ.





