Mysore
21
broken clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಯೋಗ ಕ್ಷೇಮ : ವೀರ್ಯ ಸ್ಖಲನದ ಬಗ್ಗೆ ತಿಳಿಯಿರಿ

ಡಿ.ಬಿ. ಸತ್ಯನಾರಾಯಣ

ಪುರುಷರ ಲೈಂಗಿಕಾಂಗಗಳಲ್ಲಿರುವ ಲೈಂಗಿಕ ಗ್ರಂಥಿಗಳಿಂದ ಉತ್ಪತ್ತಿಯಾಗುವ ದ್ರವ ರೂಪದ ವಸ್ತುವನ್ನು ವೀರ್ಯ ಎನ್ನುತ್ತಾರೆ. ಇದು ಬಿಳಿ ಲೋಳೆಯಂತಹ ದ್ರವ ಪದಾರ್ಥ. ವೀರ್ಯಾಣುಗಳು ವೃಷಣದಲ್ಲಿ ಉತ್ಪತ್ತಿಯಾಗುತ್ತವೆ. ಇದರ ಜೊತೆಗೆ ವೀರ್ಯನಾಳ, ವೀರ್ಯಚೀಲ ಮತ್ತು ಪ್ರಾಸೆಟಿಟ್ ಗ್ರಂಥಿಗಳು ಸ್ರವಿಸುವ ರಸಗಳು ಮಿಶ್ರಣಗೊಂಡು ವೀರ್ಯವಾಗಿ ಹೊರ ಚೆಲ್ಲುವುದನ್ನು ಸರಳವಾಗಿ ವೀರ್ಯ ಸ್ಖಲನ ಎನ್ನಲಾಗುತ್ತದೆ.

ಒಂದು ಸಾರಿಗೆ ೨ರಿಂದ ೫ ಎಂಲ್‌ನಷ್ಟು ಹೊರ ಚೆಲ್ಲುವ ವೀರ್ಯದಲ್ಲಿ ಸುಮಾರು ೬೦ರಿಂದ ೧೨೦ ದಶ ಲಕ್ಷದಷ್ಟು ವೀರ್ಯಾಣುಗಳು ಇರುತ್ತವೆ. ಆದರೂ ಮಹಿಳೆಯರಲ್ಲಿ ಗರ್ಭಧಾರಣೆ ಯಶಸ್ವಿಯಾಗಲು ಏಕಮಾತ್ರ ವೀರ್ಯಾಣು ಸಾಕಾಗುತ್ತದೆ.

ವೀರ್ಯನಾಶ ಪುರುಷರ ನಿಶ್ಯಕ್ತಿಕಗೆ ಮೂಲ ಕಾರಣ ಎಂಬುದು ತಪ್ಪು ಅಭಿಪ್ರಾಯ. ಹಾಗಯೇ ವೀರ್ಯ ರಕ್ತಕ್ಕಿಂತ ಉತ್ಕೃಷ್ಟವಾದದ್ದು ಎಂಬ ಅಭಿಪ್ರಾಯವೂ ತಪ್ಪು. ಪ್ರಾಯದ ಹಂತ ತಲುಪಿದ ಮೇಲೆ ನಿರಂತರವಾಗಿ ವೀರ್ಯವು ಲೈಂಗಿಕ ಗ್ರಂಥಿಗಳಿಂದ ಉತ್ಪತ್ತಿಯಾಗುತ್ತಿರುತ್ತದೆ. ಲೈಂಗಿಕ ಬಯಕೆ ಅತಿಯಾದಾಗ ಅಥವಾ ಲೈಂಗಿಕವಾಗಿ ಮನಸ್ಸು ಯೋಚಿಸಲು ತೊಡಗಿದಾಗ ವೀರ್ಯದ ಉತ್ಪತ್ತಿ ಹೆಚ್ಚಾಗಿ ವೀರ್ಯ ಸ್ಖಲನವಾಗುವುದು ಸ್ವಾಭಾವಿಕ ಕ್ರಿಯೆ. ಈ ಸ್ವಾಭಾವಿಕ ಕ್ರಿಯೆ ಆಗಾಗ ಸಂಭವಿಸುತ್ತಿರುತ್ತದೆ. ಪುರುಷರ ಮನಸ್ಸು ಯಾವ ರೀತಿ ಲೈಂಗಿಕ ಆಸಕ್ತಿಗೆ ತೆರೆದುಕೊಳ್ಳುತ್ತದೆ ಎನ್ನುವುದರ ಆಧಾರದ ಮೇಲೆ ವೀರ್ಯ ಸ್ಖಲನ ಉಂಟಾಗುತ್ತಿರುತ್ತದೆ.

ಮಿಲನದ ಬಗ್ಗೆ ಯೋಚಿಸುವುದು, ಅಶ್ಲೀಲ ಚಿತ್ರಗಳನ್ನು ನೋಡುವುದು, ಗೆಳೆಯರೊಡನೆ ಕಾಮಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವುದರಿಂದ ಮನಸ್ಸಿನಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ಉಂಟಾಗುತ್ತದೆ. ಇದೇ ಆಲೋಚನೆಯಲ್ಲಿ ಮಲಗಿಕೊಂಡಾಗ ಕನಸಿನಲ್ಲಿಯೂ ಇವೇ ಅಂಶಗಳು ಕಾಣಿಸಿಕೊಳ್ಳಬಹುದು. ಈ ವೇಳೆ ವೀರ್ಯ ಸ್ಖಲನವಾಗುವುದು ಸಹಜ. ಇದನ್ನು ಸಪ್ನ ಸ್ಖಲನ ಎಂದೂ ಕರೆಯುವುದುಂಟು.

ನಿಗದಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರು, ವಿವಾಹವಾಗಿ ಸಂಗಾತಿಯೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರಿಗೆ ವೀರ್ಯ ಸ್ಖಲನವಾಗುವ ಸಾಧ್ಯತೆ ಕಡಿಮೆ. ಕೆಲವರಲ್ಲಿ ವಾರಕ್ಕೆ ಎರಡು ಮೂರು ಬಾರಿ ವೀರ್ಯ ಸ್ಖಲನವಾದರೆ ಮತ್ತೆ ಕೆಲವರಲ್ಲಿ ತುಂಬಾ ಅಪರೂಪಕ್ಕೆ ಈ ರೀತಿ ಆಗುವುದೂ ಸಹಜ.

ಮುಂದುವರಿಯುವುದು…

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!