Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

‘ವಿಕ್ರಾಂತ ರೋಣ’ ಜೊತೆ ಮತ್ತೆರಡು ಈ ವಾರ

‘ವಿಕ್ರಾಂತ್ ರೋಣ’

ಶಾಲಿನಿ ಆರ್ಟ್ಸ್ ಸಂಸ್ಥೆ ಕಿಚ್ಚ ಕ್ರಿಯೇಶನ್ಸ್ ಸಹೋಂಗದಲ್ಲಿ ನಿರ್ಮಿಸಿರುವ ಚಿತ್ರ ‘ವಿಕ್ರಾಂತ್ ರೋಣ’ ಈ ವಾರದ ಬಿಡುಗಡೆ, ವಿಶ್ವಾದ್ಯಂತ ತೆರೆಕಾಣುತ್ತಿರುವ ಅತಿ ನಿರೀಕ್ಷೆಯ ಚಿತ್ರ. ಶಾಲಿನಿ ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಅವರಿಗೆ ಅಲಂಕಾರ್ ಪಾಂಡ್ಯನ್ ನೆರವಾಗಿದ್ದಾರೆ. ಅನುಪ್ ಭಂಡಾರಿ ರಚನೆ, ನಿರ್ದೇಶನದ ಈ ಚಿತ್ರದ ಶೀರ್ಷಿಕಾ ಪಾತ್ರ ವಿಕ್ರಾಂತ್ ರೋಣ ಆಗಿ ಸುದೀಪ್ ನಟಿಸಿದ್ದಾರೆ. ಅವರೊಂದಿಗೆ ನಿರೂಪ್ ಭಂಡಾರಿ, ನೀತಾ ಅಶೋಕ, ಜಾಕ್ವೆಲಿನ್ ಫನಾರ್ಂಡಿಸ್, ರವಿಶಂಕರ್ ಗೌಡ, ಜನಾರ್ದನ್, ವಾಸುಕಿ ವೈಭವ್ ಇದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಸಂೋಂಜನೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ ಸಂಕಲನ ಇದೆ. ೩ಡಿ ತಂತ್ರಜ್ಞಾನದಲ್ಲಿ ತೆರೆಕಾಣುತ್ತಿರುವ ಈ ಚಿತ್ರ ೨ ಡಿಯಲ್ಲೂ ಲಭ್ಯವಿದೆ. ವಿಶ್ವಾದ್ಯಂತ ಈ ಚಿತ್ರ ತೆರೆಕಾಣುತ್ತಿದ್ದು ನಿರ್ಮಾಪಕ ಜಾಕ್ ಮಂಜು ಅವರ ಮೈಸೂರು ಟಾಕೀಸ್ ಜೊತೆ ಟಿ ಸೀರೀಸ್, ಸಲ್ಮಾನ್ ಖಾನ್ ಫಿಲ್ಸ್ತ್ಯ್ಮ್, ಜೀ ಸ್ಟುಡಿೋಂಸ್, ಪಿವಿಆರ್ ಸಿನಿಮಾಸ್, ಒನ್ ಟ್ವೆಂಟಿ ೮ ಮಾಧ್ಯಮ ಮುಂತಾದ ಸಂಸ್ಥೆಗಳು ಹಂಚಿಕೆ, ಪ್ರಸಾರಕ್ಕಾಗಿ ಕೈಗೂಡಿಸಿವೆ. ಸಿನೆ ಡಬ್  ಆಪ್ ತಮ್ಮ ಮೊಬೈಲ್‌ನಲ್ಲಿ ಇಳಿಸಿಕೊಂಡರೆ, ಪ್ರೇಕ್ಷಕರು ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಅದು ಡಬ್ ಆದ ಯಾವುದೇ ಭಾಷೆಯಲ್ಲಿ ನೋಡಲು ಸಾಧ್ಯ. ‘ವಿಕ್ರಾಂತ್ ರೋಣ’ ಹಲವು ಮೊದಲುಗಳನ್ನು ದಾಖಲಿಸಿಕೊಂಡಿದ್ದು, ಎನ್‌ಎಫ್‌ಟಿ ಮೂಲಕ, ಮೊದಲ ಬಾರಿಗೆ ಪ್ರೀಮಿಯರ್ ಪ್ರದರ್ಶನವನ್ನು ಮೊನ್ನೆ ದುಬೈಯಲ್ಲಿ ನಡೆಸಿತ್ತು.


‘ಬೈಪಾಸ್ ರಸ್ತೆ’

ಎಂಟಿಬಿ ಪ್ರೊಡಕ್ಷನ್ ಲಾಂಛನದಲ್ಲಿ ಭರತ್‌ರಾಜ್ ಎಂ. ಮತ್ತು ಮಹೇಶ್ ಬಿ.ಎನ್.ನಿರ್ಮಿಸಿರುವ ಚಿತ್ರ ‘ಬೈಪಾಸ್ ರಸ್ತೆ’. ಎಸ್.ಬಿ.ಶ್ರೀನಿವಾಸ್ ನಿರ್ದೇಶನದ ಈ ಚಿತ್ರ ಬೈಪಾಸ್ ರಸ್ತೆಯಲ್ಲಿ ಪ್ರಯಾಣ ಮಾಡಿದ ದಂಪತಿಯ ಜೀವನದಲ್ಲಿ ನಡೆದ ಘಟನಾವಳಿಗಳ ಕಥೆ ಎನ್ನಲಾಗಿದ್ದು, ೨೦೧೭ರಲ್ಲೇ ಇದು ಸಿದ್ಧವಾಗಿತ್ತು. ವಿರಂಜನ ಬಾಬು ಛಾಯಾಗ್ರಹಣ, ವಿಜಯಕೃಷ್ಣ ಡಿ ಸಂಗೀತ ಸಂೋಂಜನೆಯ ಈ ಚಿತ್ರದ ತಾರಾಗಣದಲ್ಲಿ ಭರತ್‌ಕುಮಾರ್, ತಿಲಕ್, ಚಿಕ್ಕಣ್ಣ, ನೇಹಾ ಸಕ್ಸೇನಾ, ನೀತು ಗೌಡ, ಮಾಸ್ಟರ್ ತಬಲಾನಾಣಿ, ಉಗ್ರಂ ಮಂಜು, ಕುರಿ ರಂಗ ಮುಂತಾದವರಿದ್ದಾರೆ.


‘ರಕ್ಕಂ’

ನಮ್ಮ ಹೈಕ್ಳು ಚಿತ್ರ ಲಾಂಛನದಲ್ಲಿ ಸ್ನೇಹಲತ ನಿರ್ಮಿಸಿರುವ ಚಿತ್ರ ‘ರಕ್ಕಂ’. ಕೆ.ಸೆಂದಿಲ್ ನಿರ್ದೇಶನದ ಈ ಚಿತ್ರ ಪ್ರಧಾನಮಂತ್ರಿಗಳು ಡಿಮಾನಿಟೈಸೇಶನ್ ಮಾಡಿದ ಸಮಯದಲ್ಲಿ ಹುಟ್ಡಿದ ಕಥೆಯಂತೆ.
ರಣಧೀರ್ ಗೌಡ ಮುಖ್ಯಭೂಮಿಕೆಯಲ್ಲಿದ್ದು, ಅವರೊಂದಿಗೆ ಅಮೃತ ನಾಯರ್, ನಂಜಪ್ಪ ಬೆನಕ, ಬಿ.ರಾಮಮೂರ್ತಿ, ವಿನಯ್ ಪಾಂಡವಪುರ, ದಯಾನಂದ್ ಮೊದಲಾದವರು ತಾರಾಗಣದಲ್ಲಿದ್ದಾರೆ.
ಶ್ಯಾಮ್ ಛಾಯಾಗ್ರಹಣ, ಶ್ರೀವತ್ಸ ಸಂಗೀತ ಸಂೋಂಜನೆ, ಚಾಮರಾಜ್, ಅರುಣ್ ನೃತ್ಯ ಸಂೋಂಜನೆ ಇದೆ. ಸಂದೇಶ್ ಕಾರ್ಯನಿರ್ವಾಹಕ ನಿರ್ಮಾಪಕರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ