Light
Dark

ಸಿನಿಮಾಲ್‌ : ‘ಕೆಂಪುಸೀರೆ’ಯ ಕಥೆ

ಕೆಂಪುಸೀರೆ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ಕೆಂಪುಸೀರೆ ಉಟ್ಟುಕೊಂಡಿದ್ದ ತಾಯಿ ಕೊಲೆಯಾಗುತ್ತಾಳೆ. ತಾಯಿಯ ನಂತರ ಆಕೆಯ ಮಗಳನ್ನೂ ಹಂತಕರು ಸಾಯಿಸುತ್ತಾರೆ. ಮಗಳ ಆತ್ಮ ಕೆಂಪು ಸೀರೆ ಉಟ್ಟಿದ್ದ ತಾಯಿಯ ಆತ್ಮವನ್ನು ಹುಡುಕುವ ಕಥೆಯಂತೆ ಇದು! ದಸರಾ ವೇಳೆಗೆ ಈ ಚಿತ್ರ ತೆರೆಗೆ ಬರಲಿದೆಯಂತೆ. ಸುಮನ್ ಬಾಬು ರಚನೆ, ನಿರ್ದೇಶನದ, ಸುಮನ್ ವೆಂಕಟಾದ್ರಿ ಪ್ರೊಡಕ್ಷನ್ ನಿರ್ಮಿಸಿ, ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಕನ್ನಡವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ತೆರೆಗೆ ಬರಲಿದೆ ಎನ್ನುತ್ತಿದೆ ಚಿತ್ರತಂಡ. ಚಿತ್ರದಲ್ಲಿನ ಅಘೋರಿ ಪಾತ್ರದಲ್ಲಿ ಸಾಯಿಕುಮಾರ್ ಸೋದರ ಅಯ್ಯಪ್ಪ ಶರ್ಮ, ಜೊತೆಗೆ ಸುಮನ್ ಬಾಬು, ಕಾರುಣ್ಯ ಚೌಧರಿ, ಸಂಜನಶೆಟ್ಟಿ, ಆಲಿ, ಶ್ರೀಕಾಂತ್ (ಶ್ರೀರಾಮ್), ಅಜಯ್, ಜೀವಾ, ಬೇಬು ಸಾಯಿ ತೇಜಸ್ವಿನಿ ನಟಿಸಿದ್ದಾರೆ. ಪ್ರಮೋದ್ ರಾಗಸಂಯೋಜನೆ, ಚಿನ್ನು ಹಿನ್ನೆಲೆ ಸಂಗೀತ, ಚಂದ್ರು ಛಾಯಾಗ್ರಹಣ, ಸಂಗೋಪಿ ವಿಮಲ ಸಂಭಾಷಣೆ, ಅಜಯ್ ಶಿವಶಂಕರ್ ಅಕುಲ್ ನೃತ್ಯ ಸಂಯೋಜನೆ, ವೆಂಕಟಪ್ರಭು ಸಂಕಲನ ಈ ಚಿತ್ರಕ್ಕಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ