Light
Dark

ಸಿನಿಮಾಲ್‌ : ‘ಮೊಗ್ಗಿನ ಮನಸ್ಸು’ ತೆರೆಕಂಡ ದಿನ ‘ಲವ್ 360’ ಹಾಡು

ಶಶಾಂಕ್ ನಿರ್ದೇಶನದ ‘ಮೊಗ್ಗಿನ ಮನಸ್ಸು’ ತೆರೆಕಂಡ ಹದಿನಾಲ್ಕು ವರ್ಷಗಳ ನಂತರ, ಮೊನ್ನೆ ಜುಲೈ 18ರಂದು ಅವರ ಹೊಸ ಚಿತ್ರ ‘ಲವ್ 360 ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಇತ್ತು. ಅವರೇ ಬರೆದು, ಅರ್ಜುನ್ ಜನ್ಯ ರಾಗ ಸಂೋಂಜಿಸಿ, ಕೀರ್ತನಾ ಹೊಳ್ಳ ಹಾಡಿರುವ ‘ಭೋರ್ಗರೆದು…’ ಎಂದು ಆರಂಭವಾಗುವ ಹಾಡದು. ಆ ಚಿತ್ರ ಬಿಡುಗಡೆಯ ನೆನಪಿನೊಂದಿಗೆ ಈ ಕಾರ್ಯಕ್ರಮ ಎಂದರು ಶಶಾಂಕ್. ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ಯಶ್, ರಾಧಿಕಾ ಪಂಡಿತ್, ಶುಭಾ ಪುಂಜಾ ಮುಂತಾದವರು ನಟಿಸಿದ್ದರು. ಕಿರುತೆರೆಯ ಜೋಡಿ ಯಶ್, ರಾಧಿಕಾ ಅವರನ್ನು ಈ ಚಿತ್ರ ಬೆಳ್ಳಿತೆರೆಗೆ ಪರಿಚಯಿಸಿದ್ದು, ಅವರು ತೆರೆಯ ಮೇಲೆ ಮತ್ತು ನಿಜಜೀವನದಲ್ಲಿ ಸಂಗಾತಿಗಳಾದರು. ಯಶ್ ಕನ್ನಡ ಚಿತ್ರರಂಗದ ಮಾರುಕಟ್ಟೆಯ ಸಾಧ್ಯತೆಯನ್ನು ಹೇಳಿದ ‘ಕೆಜಿಎಫ್’ನ ಮುಖ್ಯಪಾತ್ರಧಾರಿಯಾಗಿ ಈಗ ಎಲ್ಲೆಡೆ ಚಿರಪರಿಚಿತರು. ಹ್ಞಾಂ, ‘ಲವ್ 360’ ತೆರೆಗೆ ಬರಲು ಕಾದಿದೆ. ಪ್ರವೀಣ್, ರಚನಾ ಇಂದರ್ ಜೋಡಿಯ ಚಿತ್ರ ‘ಲವ್ 360’. ‘ಮೊಗ್ಗಿನ ಮನಸ್ಸು ಭಾಗ 2’ ಚಿತ್ರಿಸುವ ಯೋಚನೆಯನ್ನೂ ಶಶಾಂಕ್ ಹೇಳಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ