ಹೊಸ ಚಿತ್ರದ ಹಾಡುಗಳನ್ನು ಒಮ್ಮೆಲೇ ಈಗ ಬಿಡುಗಡೆ ಮಾಡುವುದು ಕಡಿಮೆ. ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಿ ಅದನ್ನು ಸಾಮಾಜಿಕ ತಾಣಗಳಲ್ಲಿ ಎಷ್ಟು ಮಂದಿ ವೀಕ್ಷಿಸಿದರು ಎನ್ನುವುದರ ಮೂಲಕ ಚಿತ್ರದ ಯಶಸ್ಸಿನ ಲೆಕ್ಕಾಚಾರ ಹಾಕುವುದು ಇತ್ತೀಚಿನ ಬೆಳವಣಿಗೆ. ಅದರಲ್ಲೂ ದುಬಾರಿ ವೆಚ್ಚದ ಚಿತ್ರಗಳು, ಜನಪ್ರಿಯ ನಟರ ಚಿತ್ರಗಳು ಸಾಕಷ್ಟು ಮೊದಲೇ ಬಿಡುಗಡೆ ದಿನಾಂಕ ನಿರ್ಧರಿಸಿ, ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡುತ್ತವೆ. ಕಳೆದ ವಾರ ‘ಗಾಳಿಪಟ ೨’ ಮತ್ತು ‘ಬನಾರಸ್’ ಚಿತ್ರಗಳ ಒಂದೊಂದು ಹಾಡು ಲೋಕಾರ್ಪಣೆಯಾಯಿತು.
‘ಗಾಳಿಪಟ ೨’ ರಮೇಶ್ ರೆಡ್ಡಿ ಅವರಿಗಾಗಿ ೋಂಗರಾಜ್ ಭಟ್ ನಿರ್ದೇಶಿಸಿರುವ ಚಿತ್ರ. ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾ ರಾವ್ ಮುಂತಾದವರು ನಟಿಸಿರುವ ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಬರೆದಿರುವ ‘ನೀನು ಬಗೆಹರಿಯದ ಹಾಡು…’ ಎಂದು ಆರಂಭವಾಗುವ ಹಾಡು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ರಾಗ ಸಂೋಂಜಿಸಿ, ನಿಹಾಲ್ ತಾವ್ರೋ ಹಾಡಿರುವ ಈ ಹಾಡಿನಲ್ಲಿ ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯಿಸಿದ್ದಾರೆ. ಧನು ನೃತ್ಯಸಂೋಂಜನೆಗೆ ಛಾಯಾಗ್ರಹಣ ಸಂತೋಷ್ ರೈ ಪಾತಾಜೆ ಅವರದು.
‘ಬನಾರಸ್’ ಚಿತ್ರದಲ್ಲಿ ‘ಹೆಣ್ಣು ಹಡೆಯಲು ಬ್ಯಾಡಾ’ ಜನಪ್ರಿಯ ಜಾನಪದ ಗೀತೆಯನ್ನು ಬಳಸಿಕೊಳ್ಳಲಾಗಿದೆ. ಈ ಗೀತೆಗೆ ಅಜನೀಶ್ ಲೋಕನಾಥ್ ರಾಗ ಸಂೋಂಜಿಸಿದ್ದು, ಹರ್ಷಿಕಾ ದೇವನಾಥ್ ಹಾಡಿದ್ದಾರೆ. ತಿಲಕ್ ಬಲ್ಲಾಳ್ ನಿರ್ಮಾಣದ ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದು, ಝೈದ್ ಖಾನ್ ಈ ಚಿತ್ರದ ಮೂಲಕ ಚಿತ್ರರಸಿಕರಿಗೆ ಪರಿಚಯವಾಗಲಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಿಗೆ ಡಬ್ ಆಗಿದೆ.