Mysore
31
few clouds

Social Media

ಭಾನುವಾರ, 11 ಅಕ್ಟೋಬರ್ 2026
Light
Dark

ಯೋಗಕ್ಷೇಮ : ಸಣ್ ಸಣ್ ಸಲಹೆ

ಕಣ್ಣಿನ ಸುತ್ತಲ ಕಪ್ಪು ಇಲ್ಲವಾಗಿಸಿ

ಕೆಲವರಿಗೆ ಕಣ್ಣುಗಳ ಸುತ್ತಲು ಕಪ್ಪು ಕಲೆ ಸಾಮಾನ್ಯವಾಗಿರುತ್ತದೆ. ನಿದ್ದೆಗೆಟ್ಟರೆ, ಒತ್ತಡ ಹೆಚ್ಚಾದರೆ ಈ ರೀತಿ ಆಗಬಹುದು. ಇನ್ನೂ ಕೆಲವರಿಗೆ ಯಾವಾಗಲೂ ಈ ಸಮಸ್ಯೆ ಇರುತ್ತದೆ. ಇದಕ್ಕಾಗಿ ದುಬಾರಿ ಬೆಲೆಯ ಕ್ರೀಮ್‌ಗಳನ್ನು ಹಚ್ಚುವ ಬದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಕ್ರೀಮ್ ರೀತಿ ಮಾಡಿಕೊಂಡು ಅದಕ್ಕೆ ಸೌತೆಕಾಯಿ ರಸ, ನಿಂಬೆರಸವನ್ನು ಸೇರಿಸಿ ನಿಯಮಿತವಾಗಿ ಕಣ್ಣಿನ ಸುತ್ತಲೂ ಹಚ್ಚುತ್ತಾ ಬಂದರೆ ಈ ಸಮಸ್ಯೆ ಕಡಿಮೆಯಾಗುವುದು ಖಚಿತ.

—————

ಹಾಲು, ತುಪ್ಪ ತಪ್ಪದೇ ಸೇವಿಸಿ

ಕೆಲವರಿಗೆ ಹಾಲು, ತುಪ್ಪವನ್ನು ಬಳಕೆ ಮಾಡಿದರೆ ತೂಕ ಹೆಚ್ಚಾಗುತ್ತದೆ, ಬೊಜ್ಜು ಬರುತ್ತದೆ ಎನ್ನುವ ಕಲ್ಪನೆ ಇರುತ್ತದೆ. ಆದರೆ ನಿಯಮಿತವಾಗಿ ಇವುಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ನಿಜಕ್ಕೂ ಪೂರಕ. ಅದರಲ್ಲಿಯೂ ಬಿಸಿಯಾದ ಹಾಲಿಗೆ ಒಂದು ಚಮಚದಷ್ಟು ತುಪ್ಪವನ್ನು ಹಾಕಿಕೊಂಡು ಕುಡಿಯುವುದರಿಂದ ದೇಹದ ಶಕ್ತಿ ವೃದ್ಧಿಸುತ್ತದೆ. ಕೀಲುಗಳ ನೋವು ಕಡಿಮೆಯಾಗುತ್ತದೆ. ಮೂಳೆಗಳು ಗಟ್ಟಿಯಾಗುತ್ತವೆ. ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ದೊರಕುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!