ಕೆಲ ಹಿರಿಯರಿಗೆ ಬಹು ಔಷಧಿಗಳನ್ನು ಸೇವಿಸುವ ಅಭ್ಯಾಸವಿದೆ. ಇದನ್ನು ಪಾಲಿಫಾರ್ಮಸಿ ಎನ್ನುತ್ತಾರೆ. ವಯಸ್ಸಾದಂತೆ ಔಷಧಿಗಳನ್ನು ಅಧಿಕವಾಗಿ ತೆಗೆದುಕೊಳ್ಳುವುದರಿಂದ ಅನೇಕ ಅಡ್ಡ ಪರಿಣಾಮಗಳ ಅಪಾಯವನ್ನು ಹೊಂದಿರುತ್ತಾರೆ. ಅಧ್ಯಯನದ ವರದಿಯೊಂದು ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚಿನ ಹಿರಿಯ ವಯಸ್ಥರು ಔಷಧಿ ಸಮಸ್ಯೆಗಳಿಂದ ಆಸ್ಪತ್ರೆಗೆ ಭೇಟಿ ನೀಡುತ್ತಾರೆಂದು ತಿಳಿಸುತ್ತದೆ.
ಪಾಲಿಫಾರ್ಮಸಿಯು ವಯಸ್ಸಾದ ವಯಸ್ಕರಿಗೆ ಹೊರೆಯಾಗುತ್ತದೆ. ಏಕೆಂದರೆ, ಆ ಎಲ್ಲ ಔಷಧಿಗಳನ್ನು ಖರೀದಿಸುವುದು ದುಬಾರಿಯಾಗಬಹುದು. ಅಂತೆಯೇ, ಔಷಧಿಗಳನ್ನು ತೆಗೆದುಕೊಳ್ಳುವುದೇ ಅಭ್ಯಾಸವಾಗಬಹುದು. ಇದು ಆರೋಗ್ಯ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದ್ದರಿಂದ ಹಿರಿಯರ ಆರೋಗ್ಯದ ಕಡೆ ಕಿರಿಯರು ನಿಗಾವಹಿಸಿ,
ಅವರು ಧೃತಿಗೆಡದಂತೆ ಬೆಂಬಲವಾಗಿ ನಿಲ್ಲುವುದು ಒಳಿತು.