ಇನ್‌ಸ್ಟಾಗ್ರಾಂನ ರೀಲ್ಸ್ ಒಂದರಲ್ಲಿ ಹೆಣ್ಣು ಮಕ್ಕಳಿಗೆ ಪಿಎಂಎಸ್ ಕಾಣಿಸಿಕೊಂಡರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಅನೇಕ ಹುಡುಗರು ಮಾತುಗಳಲ್ಲಿ, ಅವರನ್ನು ನಾವು ಕಾಳಜಿ ಯಿಂದ ನೋಡಿಕೊಳ್ಳಬೇಕು’, ‘ಒಂದಷ್ಟು ಸ್ಪೇಸ್ ಕೊಡಬೇಕು’ ಹೀಗೆ ಇತ್ಯಾದಿ ಉತ್ತರಗಳಿದ್ದವು.
ಕೆಲ ಹೆಣ್ಣುಮಕ್ಕಳಿಗೆ ಮುಟ್ಟಾಗುವ ಮುನ್ಸೂಚನೆಯಾಗಿ ಮೊಡವೆಯಾದರೆ ಇನ್ನೂ ಕೆಲವರಿಗೆ ಬೆನ್ನು, ಸೊಂಟ, ಕಿಬ್ಬೊಟ್ಟೆ, ಕಾಲುಗಳಲ್ಲಿ ಜಗಿತ ಕಾಣಿಸಿಕೊಳ್ಳುತ್ತದೆ. ಅದರ ಜೊತೆಗೆ ಭಾವದಲ್ಲಿ ಸ್ಥಿಮಿತ ಇರುವುದಿಲ್ಲ. ಕಾರಣವಿಲ್ಲದೆ ಅಳು ಬರುವುದು, ಸಣ್ಣ ಪುಟ್ಟ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದು, ತಾನು ಒಂಟಿ ಎಂದೆನಿಸಿ ನನಗೆಂದು ಯಾರೂ ಇಲ್ಲ ಇಂತಹ ಹಲವು ಲಕ್ಷಣಗಳು ಪಿಎಂಎಸ್ ಭಾಗವಾಗಿ ಕಾಣಿಸಿ ಕೊಳ್ಳುತ್ತದೆ. ಬಹುತೇಕರಿಗೆ ಕಾರಣಗಳ ಅರಿವೇ ಇಲ್ಲ. ಹಾರ್ಮೋನ್ ಬಿಡುಗಡೆ ಯಾಗುತ್ತಿದ್ದಂತೆ ಹೆಣ್ಣು ಮಕ್ಕಳ ಮೂಡ್ ಕೂಡ ಬದಲಾಗುತ್ತಿರುತ್ತದೆ. ತಾನೇಕೆ ಹೀಗೆ ವರ್ತಿಸುತ್ತಿದ್ದೇನೆಂದು ಯೋಚಿಸಲಾರದಷ್ಟು ಮಾನಸಿಕವಾಗಿ ಕುಗ್ಗಿಸುತ್ತದೆ. ಧ್ಯಾನ, ಯೋಗದಿಂದ ಸರಿಪಡಿಸಬಹುದು. ಡಾರ್ಕ್ ಚಾಕೊಲೇಟ್ ತಿಂದರೆ, ದೇಹಕ್ಕೆ ವಿಶ್ರಾಂತಿ ನೀಡಿದರೆ ಒಳಿತೆಂದರೂ ಈ ಸಮಯದಲ್ಲಿ ಸುತ್ತಲಿನವರ ಭಾವನಾತ್ಮಕ ಸಹಕಾರ ಬಹಳ ಮುಖ್ಯ.