Mysore
26
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಮುಟ್ಟಿನ ಅರಿವು ಹೆಣ್ಣಿಗೆ ಮುಖ್ಯ

ಹೆಣ್ಣು ಮಕ್ಕಳು ನಿರ್ದಿಷ್ಟ ವಯಸ್ಸಿಗೂ ಮುನ್ನ ಮುಟ್ಟಾಗುವುದು ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ.

ಇದಕ್ಕೆ ಆಹಾರ, ಜೀವನಶೈಲಿಯೂ ಕಾರಣವೆಂಬುದು ಅನೇಕರ ಅಭಿಪ್ರಾಯ. ದುರಂತವೆಂದರೆ ೨೬ ಮಿಲಿಯನ್‌ನಷ್ಟು ಹೆಣ್ಣು ಮಕ್ಕಳು ಮುಟ್ಟಾಗುತ್ತಿದ್ದಂತೆಯೇ ತಮ್ಮ ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ.

‘ಮುಟ್ಟು’ ಎನ್ನುವ ಪದ ಬಳಕೆಯನ್ನು ಎಲ್ಲರೆದುರು ಮಾತನಾಡದ ಕಾಲವೊಂದಿತ್ತು. ವರ್ಷ ಕಳೆದಂತೆ ಹೆಣ್ಣು ಮಕ್ಕಳಿಗೆ ಮನೆಯಿಂದಲೂ ಶಾಲೆಯಿಂದಲೂ ಈ ಕುರಿತು ಅರಿವು ದೊರಕುತ್ತಿದೆ. ಹೆಣ್ಣು ಮಕ್ಕಳು ಬಹುಬೇಗ ಮುಟ್ಟಾಗುತ್ತಿರುವ ಸನ್ನಿವೇಶವನ್ನು ಆಧರಿಸಿದ ಸ್ಯಾನಿಟರಿ ನ್ಯಾಪ್‌ಕಿನ್ ಜಾಹೀರಾತು ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆ ಜಾಹೀರಾತಿನಲ್ಲಿ ಸ್ನೇಹಿತೆಯ ಯೂನಿಫಾರಂನಲ್ಲಿ ರಕ್ತದ ಕಲೆಯನ್ನು ಕಂಡ ಇಬ್ಬರು ಹೆಣ್ಣು ಮಕ್ಕಳು ಅದನ್ನು ಕಂಡದ್ದೇ ಮೊದಲು ಸಮಾಧಾನದಿಂದ ‘ರಕ್ತ ಒಸರುವುದು ನಿಂತ ಮೇಲೆ ಮತ್ತೆ ಶಾಲೆಗೆ ಬಾ’ ಎನ್ನುತ್ತಾರೆ. ಈಕೆ ಮತ್ತೆ ತೋರಿದಾಗ, ‘ಹಾಗಾದ್ರೆ ನೀನು ಶಾಲೆಗೆ ಬರೋ ಹಾಗೇ ಇಲ್ವಾ? ನಿಂಗೇನಾದ್ರೂ ಕಾಯಿಲೆ ಬಂದಿದ್ಯಾ?’ ಎಂದು ಒಬ್ಬಳು ಮುಗ್ಧವಾಗಿ ಕೇಳುತ್ತಾಳೆ. ಕಂಗಾಲಾದ ಹುಡುಗಿ ಶಾಲಾ ಶಿಕ್ಷಕಿ ಎದುರಾದಾಗ ಅತ್ತುಬಿಡುತ್ತಾಳೆ. ವಿಷಯ ಅರ್ಥವಾದ ಹೊತ್ತಿಗೆ ಶಿಕ್ಷಕಿ ತರಗತಿಗೆ ಹೊರಟು ನಿಂತಾಗ, ‘ಈ ವಿಷಯ ವನ್ನು ಮಕ್ಕಳಿಗೆ ಮೊದಲೇ ಹೇಳಬಹುದೇ?’

ಮತ್ತೊಬ್ಬ ಶಿಕ್ಷಕಿ ಕೇಳಿದ ಮಾತಿಗೆ ಮೊದಲೆ ‘ಮುಟ್ಟು ಆಗುವಾಗ, ಅದಕ್ಕೆ ಪೂರ್ವ ತಯಾರಿಯನ್ನು ಮೊದಲೇ ಮಾಡಿಕೊಳ್ಳಬೇಕು’ ಎನ್ನುತ್ತಾ ಮುಂದೆ ಸಾಗುತ್ತಾಳೆ. ಇಂಥ ಸನ್ನಿವೇಶ ಧುತ್ತೆಂದು ಎದುರಾದಾಗ ಗಾಬರಿ ಯಾಗಿ, ದಿನವಿಡೀ ಯೋಚಿಸುವುದಕ್ಕಿಂತ ಮಗಳು ಚಿಕ್ಕವಳಿದ್ದಾಗಲೇ ಮೊದಲ ಮುಟ್ಟಿನ ಕುರಿತು ತಾಯಿಯು ಅರಿವು ಮೂಡಿಸುವುದು ಸೂಕ್ತ.

Tags:
error: Content is protected !!