Mysore
21
broken clouds

Social Media

ಗುರುವಾರ, 03 ಏಪ್ರಿಲ 2025
Light
Dark

ಧ್ಯಾನ ಕಿರು ಪರಿಚಯ

ಡಾ.ಚೈತ್ರ ಸುಖೇಶ್

ಧ್ಯಾನ ಎಂದರೇನು?

ಧ್ಯಾನ ಎಂದರೆ ನಮ್ಮ ಜೀವಶಕ್ತಿಯಾದ ಕುಂಡಲಿನಿ ಶಕ್ತಿಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದು. ಇದು ಮಾನಸಿಕ ಏಕಾಗ್ರತೆಯ ಅಡೆತಡೆಯಿಲ್ಲದ ಸ್ಥಿತಿ.

ಉಪಯೋಗಗಳು

■ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ.

■ಮನಸ್ಸು ಶಾಂತಗೊಳ್ಳುತ್ತದೆ.

■ಮನಸ್ಸು ಸಂತೋಷ ಮತ್ತು ಉಲ್ಲಾಸ/ ಉತ್ಸಾಹ ಭರಿತವಾಗುತ್ತದೆ.

■ಆಂತರಿಕ ಶಕ್ತಿ-ಸಾಮರ್ಥ್ಯ ಹೆಚ್ಚುತ್ತದೆ.

■ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

■ದೀರ್ಘಕಾಲದ ನೋವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

■ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

■ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

■ಆತಂಕ, ಒತ್ತಡ, ಖಿನ್ನತೆ ((Anxiel, Depressicen)ಯನ್ನು ಕಡಿಮೆ ಮಾಡುತ್ತದೆ.

■ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕಡಿಮೆಗೊಳಿಸುತ್ತದೆ ಹಾಗೂ ದೇಹದ ತೂಕದ ನಿರ್ವಹಣೆಗೂ ಸಹಾಯಕಾರಿ.

ಧ್ಯಾನದ ಹಾದಿಯು ೩ ಹಂತಗಳು: 

■ ಧಾರಣ (ಏಕಾಗ್ರತೆ)

■ಧ್ಯಾನ (ಧ್ಯಾನ)

■ಸಮಾಧಿ (ಜ್ಞಾನೋದಯ)

ದೀರ್ಘ ವಾದ ಧ್ಯಾನವು ಸಮಾಧಿ ಅಥವಾ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಆಯುರ್ವೇದ, ಯೋಗ ಮತ್ತು ಧ್ಯಾನದ ಮೂಲಕ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಪಡೆಯಬಹುದು. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನಿರಂತರ ಧ್ಯಾನ ಅಭ್ಯಾಸದಿಂದ ನಮ್ಮ ದೇಹದಲ್ಲಿರುವ ೭ ಚಕ್ರಗಳನ್ನು ನಾವು ಸುಸ್ಥಿತಿಯಲ್ಲಿಡಬಹುದು. ಧ್ಯಾನದಲ್ಲಿ ಮುಖ್ಯವಾದ ಪ್ರಕಾರ ಚಕ್ರಧ್ಯಾನ. ಚಕ್ರ ಎಂದರೆ ಬೆನ್ನುಹುರಿ (Dire) ಮಾನವ ದೇಹದ ೭ ಪ್ರಮುಖ ಚಕ್ರಗಳು

೧. ಮೂಲಾಧಾರ ಚಕ್ರ-ಇದು ನಮ್ಮ ಬೆನ್ನು ಮೂಳೆಯ ಬುಡದಲ್ಲಿದೆ. ಇದು ಮಾನಸಿಕ ಶಕ್ತಿ, ವ್ಯಕ್ತಿತ್ವ, ಧೈರ್ಯ ಪ್ರವೃತ್ತಿಗಳನ್ನು ಹೆಚ್ಚಿಸುತ್ತದೆ.

೨. ಸಾದಿಸ್ಥಾನ ಚಕ್ರ-ಇದು ನಮ್ಮ ಹೊಕ್ಕಳಿನ ಕೆಳಗೆ ಇದೆ. ಇದು ಸಂತಾನೋತ್ಪತ್ತಿ ಅಂಗಗಳನ್ನು ನಿಯಂತ್ರಿಸುತ್ತದೆ.

೩. ಮಣಿಪುರ ಚಕ್ರ- ಇದು ಹೊಕ್ಕುಳ ಜಾಗದ ಮೇಲೆ ಇರುತ್ತದೆ. ಇದು ಮನುಷ್ಯನ ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ.

೪. ಹೃದಯ ಚಕ್ರ- ಇದು ಎದೆಯ ಮಧ್ಯ ಭಾಗದಲ್ಲಿದೆ. ಇದು ಹೃದಯ, ಶ್ವಾಸಕೋಶಗಳ ಆರೋಗ್ಯವನ್ನು ನಿಯಂತ್ರಿಸುತ್ತದೆ. ಈ ಚಕ್ರವು ನಿರ್ಬಂಧಿಸಲ್ಪಡಲು ಹಲವಾರು ಕಾರಣಗಳಿವೆ. ನಕಾರಾತ್ಮಕ ಭಾವನೆಗಳು, ಭಯ, ಕೆಟ್ಟ ಜೀವನ ಶೈಲಿ, ಕೆಟ್ಟ ಅಭ್ಯಾಸಗಳು.

೫. ವಿಶುದ್ಧ ಚಕ್ರ-ಇದು ಗಂಟಲಿನ ಚಕ್ರ.

೬. ಆಜ್ಞಾ ಚಕ್ರ- ಇದು ಹಣೆ/ಹುಬ್ಬುಗಳ ನಡುವೆ ಇದೆ. ಇದು ನಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುತ್ತದೆ.

೭.ಕಿರೀಟಿ ಚಕ್ರ- ಇದು ತಲೆಯ ಮೇಲ್ಭಾಗ/ನೆತ್ತಿಯ ಮೇಲಿದೆ. ಇದು ಉಳಿದೆಲ್ಲಾ ಚಕ್ರಗಳ ಸಮತೋಲನವನ್ನು ನಿಯಂತ್ರಿಸುತ್ತದೆ.

ಈ ಚಕ್ರಗಳ ನಿರಂತರ ಅಭ್ಯಾಸದಿಂದ ನಮ್ಮ ದೇಹದಲ್ಲಿ ಚಲನೆಯಲ್ಲಿರುವ ಶಕ್ತಿಗಳನ್ನು ನಿಭಾಯಿಸಬಹುದು. ಅಂದರೆ ಈ ಶಕ್ತಿ ವ್ಯವಸ್ಥೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉಂಟಾಗುವ ಅಡೆತಡೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ದೇಹದ ಮೂಲಕ ಶಕ್ತಿಯ ಹರಿವನ್ನು ನಿಭಾಯಿಸುತ್ತದೆ.

Tags: