Mysore
17
few clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ವಿಟಮಿನ್ ಡಿ ಕೊರತೆಯಿಂದ ಹೊರ ಬರುವುದು ಹೇಗೆ

ಮಿಟಮಿನ್ ‘ಡಿ’ ನಮ್ಮ ದೇಹಕ್ಕೆ ಅತಿ ಅವಶ್ಯವಾಗಿರುವ ಪೋಷಕಾಂಶವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸ್ನಾಯುಗಳು ಮತ್ತು ಜೀವಕೋಶದ ಬೆಳವಣಿಗೆಗೆ, ಉರಿಯೂತ ತಗ್ಗಿಸಲು, ರಕ್ತದೊತ್ತಡ ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಹೀಗಾಗಿ ವಿಟಮಿನ್ ‘ಡಿ’ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರ ಜೊತೆಗೆ ಕೆಲವು ಆಹಾರ ಮತ್ತು ಪೂರಕಗಳಿಂದ ಈ ಪೋಷಕಾಂಶವನ್ನು ಪಡೆಯಬಹುದಾಗಿದೆ.

ಭಾರತದಲ್ಲಿ ಸೂರ್ಯನ ಬೆಳಕಿನ ಲಭ್ಯತೆ ಸಾಕಷ್ಟಿದ್ದು, ಇದರ ಹೊರತಾಗಿಯೂ ಇಲ್ಲಿನ ಪ್ರತಿ ಐದು ಜನರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಐಸಿಆರ್‌ಇಆರ್ ಸಂಶೋಧನಾ ಮಂಡಳಿ ಮತ್ತು ಎಎನ್‌ವಿಕೆಎ ಫೌಂಡೇಶನ್ ನಡೆಸಿದ ಸಂಶೋಧನೆಯಿಂದ ಈ ಆಘಾತಕಾರಿ ಸಂಗತಿ ತಿಳಿದು ಬಂದಿದೆ.

ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್‌ನ್ಯಾಷನಲ್ ಎಕನಾಮಿಕ್ ರಿಲೇಶನ್ಸ್ ಮತ್ತು ಎಎನ್‌ವಿಕೆಎ ಫೌಂಡೇಶನ್‌ನ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಭಾರತದಲ್ಲಿ ಐವರಲ್ಲಿ ಒಬ್ಬರು ವಿಟಮಿನ್ ‘ಡಿ’ ಕೊರತೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಬಯಲಾಗಿದೆ.

ಪ್ರತಿ ಐದು ಜನರಲ್ಲಿ ಒಬ್ಬರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದು, ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ಶೇ. ೮೪ ರಷ್ಟು ೨೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ಶೇ.೮೧ ರಷ್ಟು ೨೫-೪೦ ವರ್ಷ ವಯಸ್ಸಿನ ಜನ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿ ದ್ದಾರೆ. ವಿಟಮಿನ್ ಡಿ ಕೊರತೆಯು ಲಕ್ಷಾಂ ತರ ಜನರ ಮೇಲೆ ಪರಿಣಾಮ ಬೀರುವ ಮೌನ ಸಾಂಕ್ರಾಮಿಕ ರೋಗವಾಗಿದ್ದು, ಇದು ಮಕ್ಕಳಲ್ಲಿ ರಿಕೆಟ್ಸ್ ಮತ್ತು ವಯಸ್ಕರಲ್ಲಿ ಆಸ್ಟಿಯೋಮಲೇಶಿಯಾ ಎಂಬ ಮೂಳೆ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲದೆ ವಿಟಮಿನ್ ಡಿ ಕೊರತೆ ಹೃದಯ ರಕ್ತನಾಳಗಳ ಕಾಯಿಲೆ, ಟೈಪ್ ೨ ಮಧುಮೇಹ, ಸ್ತನ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಟಮಿನ್ ಡಿ ಕೊರತೆ ಪರಿಣಾಮವಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಜೊತೆಗೆ ರೋಗ ನಿರೋಧಕ ಶಕ್ತಿಯ ಕುಗ್ಗುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇಂತಹ ಆರೋಗ್ಯ ಸಮಸ್ಯೆಯ ಒತ್ತಡ ಕುಟುಂಬಗಳಿಗೆ ಹೊರೆಯಾಗುತ್ತದೆ.

ವಿಟಮಿನ್ ಡಿ ಕೊರತೆಗೆ ಕಾರಣ: ಮಕ್ಕಳು, ಹದಿಹರೆಯದವರು, ಗರ್ಭಿಣಿಯರು ಮತ್ತು ವೃದ್ಧರು ಹೆಚ್ಚಾಗಿ ವಿಟಮಿನ್ ‘ಡಿ’ ಕೊರತೆಯಿಂದ ಬಳಲುತ್ತಿದ್ದಾರೆ. ಹೊರಾಂ ಗಣ ಚಟುವಟಿಕೆಗಳ ಕೊರತೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದೆ ಹೆಚ್ಚು ಕಾಲ ಒಳಾಂಗಣದಲ್ಲಿಯೇ ಕಾಲ ಕಳೆಯುವುದು, ನಗರ ವಾಯು ಮಾಲಿನ್ಯ, ಮೀನು, ಮೊಟ್ಟೆ, ಡೈರಿ ಉತ್ಪನ್ನಗಳು ಸೇರಿದಂತೆ ವಿಟಮಿನ್ ‘ಡಿ’ ಯಿಂದ ಸಮೃದ್ಧವಾಗಿರುವಆಹಾರವನ್ನು ಸೇವಿಸದಿರುವುದೇ ವಿಟಮಿನ್ ಡಿ ಪೋಷಕಾಂಶದ ಕೊರತೆಗೆ ಮುಖ್ಯ ಕಾರಣವಾಗಿದೆ.

Tags:
error: Content is protected !!