Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಮೀರ್ ಅವರ ಕನಸು ಕಣ್ಣುಗಳು; ಈ ಇಬ್ಬರು ಮಕ್ಕಳು

ಹನಿ ಉತ್ತಪ್ಪ

ಮೈಸೂರಿನ ಅಮೀರ್ ಅವರು ಕಂಪ್ಯೂಟರ್ ಸೈನ್ಸ್ ಪದವೀಧರರು. ಸಾಫ್ಟ್‌ವೇರ್ ಉದ್ಯಮ ಸಾಕು-ಬೇಕಾದ ಮೇಲೆ ಗುಜರಿ ವ್ಯಾಪಾರವನ್ನು ಆರಂಭಿಸಿದವರು. ಅಮೀರ್ ಅವರು ತನ್ನ ಮಕ್ಕಳಿಬ್ಬರ ಕನಸುಗಳಿಗೆ ರೆಕ್ಕೆಕಟ್ಟುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅಯಾನ್ ಮತ್ತು ಅಫ್ಜಾಳ ತಂದೆಯೆಂಬ ಹೆಮ್ಮೆ ಭಾವ. ಮಕ್ಕಳಿಬ್ಬರನ್ನೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನಾಗಿ ಬೆಳೆಸಿದ ತಂದೆಯೊಬ್ಬರ ಬೆವರ ಕತೆಯಿದು. ಮನೆಯಲ್ಲಿ ಯಾರಾದರೂ ಬಾಕ್ಸಿಂಗ್ ಕಲಿತವರಿದ್ದರಾ? ಎಂದು ಕುತೂಹಲಕ್ಕೆ ಕೇಳಿದರೆ, ಇವರ ಅಜ್ಜ ಕೂಡ ಕುಸ್ತಿಪಟುವಾಗಿದ್ದರು. ಎರಡು ತಲೆಮಾರಿನ ಅಂತರವೆಂದು ಅಂದುಕೊಳ್ಳುವಷ್ಟರಲ್ಲಿ, ‘ನಾನು ಕೂಡ ಬಾಕ್ಸರ್’ ಎನ್ನುತ್ತಾ ಅಚ್ಚರಿ ಮೂಡಿಸುತ್ತಾರೆ!

ಅಮೀರ್ ಅವರ ತಂದೆಗೆ ಇವರೊಬ್ಬನೇ ಮಗ. ಒಂದು ಕಡೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ತೀರಾ ಬಡತನ. ಅದೇ ಸಮಯಕ್ಕೆ ಆದ ಅಪಘಾತವೊಂದು ಅಮೀರ್ ಅವರ ಬಾಕ್ಸರ್ ಆಗುವ ಆಸೆಯನ್ನು ಹೊಸಕಿಹಾಕಿತು. ಸಂಸಾರದ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ತಂದೆಯ ಸಂಕಟವನ್ನು ಬಹಳ ಹತ್ತಿರದಿಂದ ಕಂಡ ಮಗ, ಹೇಗೆ ತಾನೆ ತನ್ನ ಕನಸನ್ನು ಮತ್ತೆ ಕಟ್ಟಬಲ್ಲ! ತಾನೇನು ಆಗಬೇಕೆಂದು ಅಂದುಕೊಂಡಿದ್ದರೋ ಮಕ್ಕಳಿಬ್ಬರೂ ಹಾಗೇ ಆಗುತ್ತಿದ್ದಾರೆಂದು ಹೇಳುವಾಗೆಲ್ಲ ತಂದೆ ಅಮೀರ್ ಅವರಿಗೆ ಸಂಭ್ರಮ. ಮಗ ಅಯಾನ್ ಅಲಿ ಅಕ್ಕಂದಿರೊಡನೆ ಜಗಳವಾಡುತ್ತಾ, ಒಮ್ಮೆ ಹೊಡೆದಾಡಿಕೊಳ್ಳುತ್ತಿರುವಾಗ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವರು ಹತ್ತಿರ ಕರೆದು, ಪುಶ್‌ಅಪ್, ಸ್ಟ್ರೈಕ್ಸ್ ಮಾಡೆಂದು ಹೇಳಿಕೊಟ್ಟರು. ಮೊದಲ ದಿನ ವಿಚಿತ್ರವಾಗಿ ಮಾಡಿದ್ದ ಅಯಾನ್ ಮಾರನೆಯ ದಿನ ಬಂದು, ‘ಇವತ್ತೇನಿಲ್ವಾ? ’ ಎಂದು ಕೇಳಿದ್ದ.

ಮಗನ ಈ ಆಸಕ್ತಿಯನ್ನು ಸುಲಭಕ್ಕೆ ತಳ್ಳಿಹಾಕುವ ಮನಸ್ಸಿಲ್ಲದೆ ಅಮೀರ್ ಅವರು ತಾವು ಕಲಿತಷ್ಟು ಬಾಕ್ಸಿಂಗ್ ಪಟ್ಟುಗಳನ್ನೆಲ್ಲ ಹೇಳಿಕೊಟ್ಟರು. ಕಲಿಕೆಯ ದಾಹ ಅಯಾನ್‌ನನ್ನು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಎಂ. ಎಂ. ಎ. ಅಥ್ಲೇಟ್ ಆಗಿರುವ ಅಯಾನ್ ಛತ್ತೀಸ್ ಗಢದಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಏಳು ಪದಕಗಳನ್ನು ಪಡೆದಿದ್ದಾನೆ. ಮಾರ್ಷಿಯಲ್ ಸೈನ್ಸ್ ಅಕಾಡೆಮಿಯಲ್ಲಿ ವಿಕ್ರಮ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದು, ಕಿಕ್ ಬಾಕ್ಸಿಂಗ್, ಕುಸ್ತಿ, ಬ್ರೆಜಿಲಿಯನ್ ಜಿಯು ಜಿಸು ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಚಿನ್ನದ ಪದಕಗಳನ್ನೇ ಗೆದ್ದು, ಹನ್ನೊಂದನೇ ವರ್ಷಕ್ಕಾಗಲೆ ಸಾಧನೆಯ ಹಾದಿಯಲ್ಲಿದ್ದಾನೆ. ಅಪ್ಪನ ಚಿತ್ತವಿಡೀ ತಮ್ಮನೇ ಇದ್ದಾನಲ್ಲಾ ಎನ್ನುತ್ತಾ ಮಗಳು ಅಫ್ಜಾ ಅಲಿ, ತಾನೂ ಈ ಎಲ್ಲಾ ವಿದ್ಯೆಗಳನ್ನು ಕಲಿಯಬೇಕೆಂದು ಬಂದಿದ್ದೇನೊ ಹೌದು, ಆದರೆ ಆರಂಭದ ೨ ವರ್ಷ ಬಹಳ ಕಷ್ಟಪಡಬೇಕಾಯಿತು. ಮಗಳ ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಅಮೀರ್ ಅವರು ತಮ್ಮ ಗರಡಿಯಲ್ಲಿ ಎರಡು – ಮೂರು ತಿಂಗಳ ಮಟ್ಟಿಗೆ ತರಬೇತಿ ನೀಡಲು ಶುರುವಿಟ್ಟುಕೊಂಡರು. ಈ ಮಧ್ಯೆ ಉಳಿದಿಬ್ಬರು ಮಕ್ಕಳಿಗೂ ಕಲಿಸಿಕೊಟ್ಟರಾದರೂ, ಆಸಕ್ತಿ ಇರದ ಕಾರಣಕ್ಕೆ ತಮ್ಮ ಆಸೆಯನ್ನು ಹೇರಲಿಲ್ಲ.

ಒಂಬತ್ತನೇ ತರಗತಿ ಓದುತ್ತಿರುವ ಅಫ್ಜಾಳೆಂದರೆ ತಂದೆಗೆ ವಿಶೇಷವಾದ ಕಾಳಜಿ. ಅಮೀರ್ ಅವರ ಪ್ರಕಾರ ಹದಿಹರೆಯದ ಪ್ರಾಯದ ಆಕೆಗೆ ನೀಡುವ ಆಹಾರದಲ್ಲಿ ಬಹಳ ಎಚ್ಚರಿಕೆ ಇರಬೇಕು. ಕ್ರೀಡೆಗೆ ದೈಹಿಕ ಶ್ರಮ ಅಗತ್ಯ ಬಹಳಷ್ಟಿದೆ. ಅವಳಷ್ಟನ್ನೂ ನೀಡಬೇಕೆಂದರೆ ಪ್ರೊಟೀನ್, ವಿಟಮಿನ್ ಆಹಾರಗಳನ್ನೇ ಹೆಚ್ಚಾಗಿ ಸೇವಿಸಬೇಕು. ಅವಳಿಗೆ ನೀಡಬೇಕಿರುವ ಆಹಾರದ ಬೆಲೆ ದಿನೇದಿನೇ ಗಗನ ಮುಟ್ಟುತ್ತಿದ್ದರೂ ನಾಳೆಯ ದಿನ ಮಗಳ ಸಾಧನೆ ಗಗನದೆತ್ತರ ಏರುತ್ತದೆಂದು ತಂದೆ ಆಸೆಯಿಟ್ಟು ಕಾಯುತ್ತಿದ್ದಾರೆ. ೨೦೨೩ರ ದಸರಾ ಸಿಎಂ ಕಪ್ ಪಡೆದಿದ್ದಲ್ಲದೆ, ಕೇವಲ ೧೩ ಸೆಕೆಂಡ್‌ನೊಳಗೆ ತನ್ನ ಪ್ರತಿ ಸ್ಪಽಯನ್ನು ಅಫ್ಜಾ ಸೋಲಿಸಿದ್ದಳು. ಮೈಸೂರಿನಲ್ಲಿ ‘ಖೇಲೊ ಇಂಡಿಯಾದ ಮಹಿಳಾ ಲೀಗ್’ನಲ್ಲಿ ಸ್ಪಽಸಿ, ಪದಕ ಗೆದ್ದಿದ್ದವಳು, ಕಳೆದ ವಾರವಷ್ಟೆ ರಾಜ್ಯ ಮಟ್ಟದ ಖೇಲೊ ಇಂಡಿಯಾಕ್ಕಾಗಿ ಸ್ಪಽಸಿದ್ದಳು. ಇದರೊಂದಿಗೆ ಅನೇಕ ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್‌ನ ಸಬ್ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾಳೆ.

ಮೈಸೂರಿನ ನಜರ್‌ಬಾದ್‌ನಲ್ಲಿರುವ ವುಶು ಅಕಾಡೆಮಿಯ ಆಸೀಫ್ ಅವರ ತರಬೇತಿಯಲ್ಲಿ ಅವಳ ಅಭ್ಯಾಸ ನಿರಂತರವಾಗಿ ಸಾಗುತ್ತಿದೆ. ಒಲಿಂಪಿಕ್‌ನಲ್ಲಿ ತಾನು ಸ್ಪಽಸಬೇಕೆಂಬ ಕನಸಿದ್ದರೂ ಆಕೆ ಓದನ್ನು ಮಾತ್ರ ಮರೆತಿಲ್ಲ. ಇಬ್ಬರು ಮಕ್ಕಳ ಕ್ರೀಡಾ ಕನಸನ್ನು ಸಾಕಾರಗೊಳಿಸು ವುದೆಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ಅಮೀರ್ ಅವರ ದುಡಿಮೆಯಲ್ಲಿ ಕೂಡಿಡುವ ಮಾತಿರಲಿ, ಬಂದ ಆದಾಯದಲ್ಲಿ ನಾಲ್ಕು ಮಕ್ಕಳ ವಿದ್ಯಾಭ್ಯಾಸ, ಕ್ರೀಡೆಗೆ ಸಂಬಂಽಸಿದ ಖರ್ಚು, ಕುಟುಂಬ ನಿರ್ವಹಣೆಯ ವೆಚ್ಚಗಳನ್ನು ಹೊಂದಿಸಿಕೊಳ್ಳಬೇಕು. ನಾಲ್ಕೂ ಮಕ್ಕಳು ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾರೆ. ಅಯಾನ್ ಅಲಿಯ ಸಾಧನೆಯನ್ನು ಕಂಡ ಫಾದರ್ ಚಾರ್ಲ್ಸ್ ಅವರು ಈ ವರ್ಷದ ಶಿಕ್ಷಣವನ್ನು ಉಚಿತವಾಗಿ ನೀಡಿದ್ದಾರೆ.

Tags: