Mysore
25
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಾಲ್ಗುಡಿಗೆ ಮರುಜೀವ ನೀಡಿದ ರುಕ್ಮಿಣಿ ಆಂಟಿ

ರಶ್ಮಿ ಕೋಟಿ

ಮೈಸೂರು ಅಂದರೆ ಕೇವಲ ಅರಮನೆಗಳ ನಗರ, ಉದ್ಯಾನಗಳ ನಗರ, ದಸರೆಯ ಭವ್ಯ ಸಂಭ್ರಮದ ನಗರವಷ್ಟೇ ಅಲ್ಲ, ಸಾಹಿತ್ಯ ಲೋಕದ ದಿಗ್ಗಜರು ಬದುಕಿ ಬಾಳಿದ ಊರು ಕೂಡ. ಕೆಲವು ವರ್ಷಗಳ ಹಿಂದೆ ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿರುವ ಮನೆ ಸಂಖ್ಯೆ ಹದಿನಾಲ್ಕರ ಬಿಳಿ ಬಂಗಲೆ ನಿರ್ಲಕ್ಷ್ಯಕ್ಕೊಳಗಾಗಿ ಅವಶೇಷದಂತಾಗಿತ್ತು. ಅದೇ ಮಾಲ್ಗುಡಿಯ ಸೃಷ್ಟಿಕರ್ತ ಆರ್.ಕೆ.ನಾರಾಯಣ್ ಬದುಕಿದ್ದ ಮನೆ. ಅಲ್ಲಿಯೇ ‘ಮಾಲ್ಗುಡಿ’ ಹುಟ್ಟಿದ್ದು. ‘ಸ್ವಾಮಿ’, ‘ರಾಜು’, ‘ರೋಸಿ’, ‘ಮಾರ್ಗಯ್ಯ’, ‘ನಟರಾಜ’ ಮೊದಲಾದ ಪಾತ್ರಗಳು ಜೀವ ಪಡೆದದ್ದು.

ಆರ್.ಕೆ.ನಾರಾಯಣ್ ಕಾಲವಾದನಂತರ ಅವರ ರಿಯಲ್ ಎಸ್ಟೇಟ್ ಮಾಫಿಯಾದ ಪಾಲಾಗಿತ್ತು. ದೇಶಕ್ಕೆ ಮರೆಯಲಾಗದ ಕಥೆಗಳನ್ನು ಕೊಟ್ಟ ಆ ಮಯ? ಇತಿಹಾಸದಿಂದ ಅಳಿಸಿಬಿಡುವ ಹಂತ ತಲುಪಿತ್ತು. ಆದರೆ ಮೈಸೂರಿನ ಜನ ಹಾಗಾಗಲು ಬಿಡಲಿಲ್ಲ . ಓದುಗರು, ಅಭಿಮಾನಿಗಳು, ಪರಂಪರೆ ಪ್ರೇಮಿಗಳು ಎಲ್ಲರೂ ಸೇರಿ ಮಾಡಿದ ಅಧಿಕ ಮನವಿ, ಒತ್ತಾಯ, ಅಭಿಯಾನಗಳ ತರ ಆ ಮನೆಗೆ ಕೊನೆಗೂ ಜೀವ ತುಂಬಲಾಯಿತು. ಇಂದು ಅವರ ಹೋರಾಟಕ್ಕೆ ಜಯ ಲಭಿಸಿ ಆರ್.ಕೆ.ನಾರಾಯಣ್ ಅವರ ಮನೆ ಸಂಗ್ರಹಾಲಯವಾಗಿ ಜನರ ಮುಂದೆ ನಿಂತಿದೆ. ಮೈಸೂರಿನ ಸಾಹಿತ್ಯ ಪ್ರಿಯರ ಆ ಹೋರಾಟವೇ ಇಂದು ಸೀತಾ ಭಾಸ್ಕರ್ ಅವರ ಕಥೆ ‘ರುಕ್ಮಿಣಿ ಆಂಟಿ ಅಂಡ್ ಆರ್.ಕೆ.ನಾರಾಯಣ್  ಫ್ಯಾನ್ ಕ್ಲಬ್’ ಕೃತಿಯ ಕೇಂದ್ರವಾಗಿ ಮೂಡಿಬಂದಿದೆ.

ಸೀತಾ ಭಾಸ್ಕರ್ ಅವರ ಈ ಕೃತಿ ಮೂಡಿ ಬಂದ ಹಿಂದೆಯೂ ಒಂದು ರೋಚಕ ಕತೆಯಿದೆ. ಅಮೆರಿಕಾದ ಐಟಿ ಕಂಪೆನಿಯೊಂದರಲ್ಲಿ ವೃತ್ತಿಜೀವನ ನಡೆಸುತ್ತಿದ್ದ ಸೀತಾಗೆ ಪುಸ್ತಕಗಳೇ ಆತ್ಮೀಯ ಸ್ನೇಹಿತರು. ತಮ್ಮ ೫೧ನೇ ವಯಸ್ಸಿನಲ್ಲಿ ಶೀಲ್ಡ ಹರ್ ಮಾಡೆಸ್ಟಿ (೨೦೦೬) ಪುಸ್ತವನ್ನು, ತಮ್ಮ ೬೦ನೇ ವಯಸ್ಸಿನಲ್ಲಿ ‘ಫ್ಲರ್ಟಿಂಗ್ ವಿತ್ ಟ್ರಬಲ್’ ಪುಸ್ತಕವನ್ನು ೬೭ ವಯಸ್ಸಿನಲ್ಲಿ ‘ತಾರಾ ಅಂಡ್ ಸಾಂಡಿ’ ಪುಸ್ತಕವ? ಬರೆದಿದ್ದಾರೆ.

೨೦೧೯ರಲ್ಲಿ ಮೈಸೂರಿನಲ್ಲಿ ನೆಲೆಸಲು ನಿರ್ಧರಿಸಿದಾಗ ಅವರು ಗೂಗಲ್ ಮಾಡಿದ ಮೊದಲ ಹೆಸರು ಆರ್.ಕೆ. ನಾರಾಯಣ. ಅವರು ವಾಸವಿದ್ದ ಮನೆಯ ಬಳಿಯೇ ವಾಸಿಸಬೇಕೆಂಬುದು ಸೀತಾ ಅವರ ಆಸೆಯಾಗಿತ್ತು. ಆಗ ಅವರು ಆರ್.ಕೆ. ನಾರಾಯಣ್ ಮನೆಯನ್ನು ಕುರಿತು ಸಂಗ್ರಹಿಸಿದ ಮಾಹಿತಿ ಅವರ ಕುತೂಹಲವನ್ನೇ ಕೆರಳಿಸಿತ್ತು. ಆ ಮನೆಯನ್ನು ಮ್ಯೂಸಿಯಂ ಆಗಿ ಉಳಿಸಲು ನಡೆದ ಹೋರಾಟವನ್ನೇ ಅರಿತುಕೊಂಡರು. ಅದು ಸೀತಾ ಅವರ ಮನಸ್ಸಿನಲ್ಲಿ ರುಕ್ಮಿಣಿ ಆಂಟಿಯ ಪಾತ್ರದ ಹುಟ್ಟಿಗೆ ಕಾರಣವಾಯಿತು.

ಆದರೆ ೨೦೨೩ರಲ್ಲಿ, ಸೀತಾ ಕ್ಯಾನ್ಸರ್‌ಗೆ ತುತ್ತಾದರು. ಆದರೂ ವಯಸ್ಸಾಗಲಿ, ಶಾರೀರಿಕ ರೋಗವಾಗಲಿ ಸೃಜನಶೀಲತೆಯನ್ನೇ ಕ್ಷೀಣಿಸಲು ಸಾಧ್ಯವಿಲ್ಲ , ಅವು ನಮ್ಮೊಳಗಿನ ಬೆಳಕನ್ನೇ, ಕುತೂಹಲವನ್ನೇ , ಕನಸುಗಳನ್ನು, ಸಾಧನೆಗಾಗಿ ಚಡಪಡಿಸುವ ಮನಬಲವನ್ನು ಮಸುಕುಮಾಡಲು ಸಾಧ್ಯವಿಲ್ಲ ಎಂಬುದನ್ನು ತಮ್ಮ ಸೃಜನಾತ್ಮಕ ಬರವಣಿಗೆಯ ಮೂಲಕ ಸೀತಾ ಸಾಧಿಸಿ ತೋರಿಸಿದ್ದಾರೆ. ಈ ಮಾತುಗಳು ಕೇವಲ ಉತ್ಪ್ರೇಕ್ಷೆಯ ಮಾತುಗಳಲ್ಲ.

ಸೀತಾ ಅವರ ಬರವಣಿಗೆ ನಿಂತುಹೋಗಬಹುದೇ? ಎಂದು ಅವರ ಸುತ್ತಲಿನವರು ಆತಂಕ ಪಡುತ್ತಿದ್ದರೆ, ಸೀತಾ ಅವರ ಸೃಜನಶೀಲತೆ ಮಾತ್ರ ಕ್ಯಾನ್ಸರ್‌ಗೆ ಮಣಿಯಲಿಲ್ಲ. ಕಿಮೋಥೆರಪಿ ಒಂದೊಂದು ಸುತ್ತಿನಲ್ಲಿ ಶರೀರ ದಣಿದರೂ, ಉಸಿರಾಟ ಭಾರವಾದರೂ, ಅವರ ಕಲ್ಪನೆ ಬಗ್ಗಲೇ ಇಲ್ಲ. ಪ್ರತಿ ಕಿಮೋಥೆರಪಿ ಆಸ್ಪತ್ರೆಯ ಹಾಸಿಗೆಯ ಮೇಲೆ ವಿಶ್ರಾಂತಿಯಲ್ಲಿದ್ದಾಗಲೇ ಅವರು ಬರೆಯುತ್ತಿದ್ದರು. ಅಲ್ಲಿಯೇ, ಆ ನಿಶ್ಶಕ್ತ ದೇಹದ ಸ್ಥಿತಿಯಲ್ಲೂ, ಅಚಲ ಮನಸ್ಸಿನಿಂದ ರುಕ್ಮಿಣಿ ಆಂಟಿಯ ಸಾಹಸಗಳು ರೂಪ ಪಡೆಯತೊಡಗಿದವು. ರುಕ್ಮಿಣಿ ಆಂಟಿ ಎಂಬ ಪಾತ್ರ ಸೀತಾಗೆ ಕ್ಯಾನ್ಸರ್ ಕಾಯಿಲೆ ಬಾಧಿಸುವುದಕ್ಕಿಂತ ಮೊದಲೇ ಹುಟ್ಟಿದ್ದರೂ, ಆಸ್ಪತ್ರೆಯಲ್ಲಿ ಅದು ರೆಕ್ಕೆಗಳನ್ನು ಹೆಕ್ಕಿಕೊಂಡಿತು.

ಈಗ ಪುಸ್ತಕ ರೂಪದಲ್ಲಿ ಪ್ರಕಟಣೆಗೊಂಡಿರುವ ರುಕ್ಮಿಣಿ ಆಂಟಿಯ ಕಥೆಯು ಗೆಳೆತನ , ಹಾಸ್ಯ ಹಾಗೂ ಸಾಮಾಜಿಕ ಜನರ ಅದ್ಭುತ ಬದುಕುಗಳಿಂದ ತುಂಬಿದ ಕಥೆಯಾಗಿದೆ. ಆರ್.ಕೆ.ನಾರಾಯಣ್ ಸಾಮಾಜಿಕ ಜಜರ ಸರಳ ಬದುಕಿನ ಮೂಲಕ ಓದುಗರ ಹೃದಯವನ್ನೇ ಗೆದ್ದಂತೆ, ಸೀತಾ ಕೂಡ ಸಾಮಾಜಿಕ ಜನರ ಬದುಕಿನ ಮೂಲಕವೇ ಕಥೆಯ ಹಂದರವನ್ನೇ ಹೆಣೆದಿದ್ದಾರೆ. ಮೈಸೂರಿನಲ್ಲಿ ರುಕ್ಮಿಣಿ ಆಂಟಿಯ ಹೊಸ ಮನೆ ಹಿಂಭಾಗದಲ್ಲಿ ಒಂದು ಹಳೆಯ ಬಂಗಲೆಯಿರುತ್ತದೆ. ಆ ಬಂಗಲೆಯಿಂದಾಗಿ ತಮ್ಮ ಮನೆಯ ನೋಟ ಹಾಳಾಗುತ್ತಿದೆ ಎಂದು ಭಾವಿಸಿದ್ದ ರುಕ್ಮಿಣಿ ಆಂಟಿಗೆ ಕಾಲಾಂತರದಲ್ಲಿ ಆ ಮನೆ ಮಾಲ್ಗುಡಿಯ ಸೃಷ್ಟಿಕರ್ತ ಆರ್.ಕೆ.ನಾರಾಯಣ್‌ಗೆ ಸೇರಿದ್ದು ಎಂದು ತಿಳಿಯುತ್ತದೆ.

ಅದರಿಂದ ಅವರ ಜೀವನವೇ ಬದಲಾಗುತ್ತದೆ. ಏಕೆಂದರೆ, ಅಷ್ಟರಗಲೇ ಆ ಮನೆಯನ್ನೇ ಬಿಲ್ಡರ್ ಒಬ್ಬರು ಖರೀದಿಸಿ, ಅದನ್ನೇ ಧ್ವಂಸ ಮಾಡಿ ಅಲ್ಲಿ ಅತ್ಯಾಧುನಿಕ ಕಟ್ಟಡ ಕಟ್ಟಲು ಮುಂದಾಗಿರುತ್ತಾರೆ. ಆಗ ಆ ಮನೆಯನ್ನು ಉಳಿಸಲು ರುಕ್ಮಿಣಿ ಆಂಟಿ ಮತ್ತು ಅವರ ನೆರೆಹೊರೆಯಲ್ಲಿರುವ ಆರ್.ಕೆ. ನಾರಾಯಣ್  ಆಫ್‌ ಕ್ಲಬ್ಬನ್ನೇ  ಮಹಿಳೆಯರ ಗುಂಪು ಪಣ ತೊಟ್ಟು ನಿಲ್ಲುತ್ತದೆ. ಅವರ ಆ ಹೋರಾಟದ ಈ ಕಥೆ ಆರ್. ಕೆ.ನಾರಾಯಣ್ ಮನೆ ಬಗ್ಗೆ ಮಾತ್ರವಲ್ಲ ನಶಿಸುತ್ತಿರುವ ಪರಂಪರೆ, ಗೆಳತಿಯರ ಬಾಂಧವ್ಯ, ಸಾಹಿತ್ಯ, ಸಮುದಾಯಗಳ ಬಗ್ಗೆಯೂ ಆಗಿದೆ.

ಓದುಗರು ‘ರುಕ್ಮಿಣಿ ಆಂಟಿ ಅಂಡ್ ಆರ್.ಕೆ.ನಾರಾಯಣ್ ಆಫ್ ಕ್ಲಬ್’ ಪುಸ್ತಕವನ್ನು ಓದಿದಾಗ ಅದರ ಮೂಲಕ ಪ್ರತಿ ಅಧ್ಯಾಯದಲ್ಲೂ ಕನಸುಗಳ ಬಿಡದ ರುಕ್ಮಿಣಿ ಆಂಟಿಯ ಪಾತ್ರದೊಂದಿಗೆ ಸೀತಾ ಅವರ ಜೀವನೋತ್ಸಾಹವೂ ಅಡಗಿದೆ. ಆರ್.ಕೆ.ನಾರಾಯಣರ ಮನೆಯ ಮರುಜೀವ ಹೇಗೆ ನಾಗರಿಕರ ಪ್ರೀತಿಯಿಂದ ಸಾಧ್ಯವಾಯಿತೋ, ಅದೇ ರೀತಿಯಲ್ಲಿ ಸೀತಾ ಅವರ ಬರವಣಿಗೆಯ ಮರುಜೀವವೂ ಬದುಕಿನ ಪ್ರೀತಿಯಿಂದ, ಸಾಹಿತ್ಯಾಸಕ್ತಿಯಿಂದ ಸಾಧ್ಯವಾಗಿದೆ. ಇದು ಕೇವಲ ಕಥೆಯಲ್ಲ, ನಮ್ಮ ನಡುವೆ ಬದುಕಿದ ಓರ್ವ ಶ್ರೇಷ್ಠ ಬರಹಗಾರನಿಗೆ ಸಲ್ಲಿಸಿರುವ ಗೌರವ.

” ವಿಶ್ವವಿಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣರ ಮನೆಯ ಪುನರುಜ್ಜೀವನದ ಸುತ್ತ ಹೆಣೆದ ಸೀತಾ ಭಾಸ್ಕರ್ ಅವರ ಈ ಕಾದಂಬರಿ ಕೇವಲ ಕಥೆಯಲ್ಲ, ನಮ್ಮ ನಡುವೆ ಬದುಕಿದ ಓರ್ವ ಶೇಷ್ಠ ಬರಹಗಾರನಿಗೆ ಸಲ್ಲಿಸಿರುವ ಗೌರವ”

ಇಂದು ಕೃತಿ ಬಿಡುಗಡೆ: 

ಪೆಂಗ್ವಿನ್ ಪ್ರಕಾಶನ ಹೊರತಂದಿರುವ ಸೀತಾ ಭಾಸ್ಕರ್ ಅವರ ‘ರುಕ್ಮಿಣಿ ಆಂಟಿ ಅಂಡ್ ದಿ ಆರ್.ಕೆ.ನಾರಾಯಣ್ ಫ್ಯಾನ್ ಕ್ಲಬ್’ ಇಂಗ್ಲಿಷ್ ಕಾದಂಬರಿಯು ಇಂದು (ಭಾನುವಾರ) ಸಂಜೆ ಮೈಸೂರಿನ ಮೆಟ್ರೋಪೋಲ್ ಹೋಟೆಲಿನಲ್ಲಿ ಬಿಡುಗಡೆಯಾಗಲಿದೆ.

Tags:
error: Content is protected !!