Mysore
20
overcast clouds
Light
Dark

ತಿಂಗಳ ಕಥೆ ಪ್ರಸ್ತ ಮತ್ತು ಜ್ವರ

“ನನ್ನ ಗಂಡುನ್ನಾ ಸೆರ್ಗೊಳಿಕಾಕ್ಕೊಂಡು ಗುಮ್ಮುನ್ ಗುಸ್ತುನಂಗೆ ಕದ ವಳ್ಕೊಂಡು ಕೂತಿದ್ದಿಯೇನೆ ನನ್ನ ಸೌತಿ, ಧೈರ್ಯ ಇದ್ರೆ ಈಚಿಕ್ ಬಂದು ಜವಾಬ್ ಕೊಟ್ ಹೋಗ್ಗೆ” ಎಂದು ಶ್ಯಾಮಿ ಮನೆಯ ಬೀದಿ ಬಾಗಿಲಲ್ಲಿ ನಿಂತು ಅರಚಾಡುತ್ತಿದ್ದಳು ಚಂದ್ರಿ. ತನ್ನ ಪ್ರೀತಿಯ ಹೆಂಡತಿಗೆ ಹಿಗ್ಗಾಮುಗ್ಗಾ ಬಯ್ಯುತ್ತಿದ್ದ ಚಂದ್ರಿಯ ದನಿ ಕೇಳಿ ಶ್ಯಾಮಿಯ ಗಂಡ ರುದ್ರೇಶ ರೌದ್ರಾವತಾರ ತಾಳಿ ಹೊರಬಂದು “ಪ್ರಕಾಶಣ್ಣುನ್ನ ನಮ್ ಸ್ಯಾಮಿ ಸೆರ್ಗೊಳೆ ಮಡಿಕೊಂಡ ಏನೀಗ’ ಎಂದು ಕೆಂಗಣ್ಣು ಬಿಟ್ಟು ತನ್ನ ಗೊಗ್ಗರು ದನಿಯಲ್ಲಿ ಗುಡುಗಿದ. “ಅಯ್ಯೋ ಮಾನೈಟ್ ನನ್ ಮಗೆ ಆ ಮಾತಾಡಕೆ ನಾಚೆ ಆಗಲ್ಲೆಲ್ಲಾ ನಿಂಗೆ ನೀನು ಒಬ್ಬ ಗಂಡ್ಲಾ” ಎಂದು ರುದ್ರೇಶನ ಮುಖಕ್ಕೆ ಮೆತ್ತಿಕೊಳ್ಳುವಂತೆ ಕ್ಯಾಕರಿಸಿ ಉಗಿದಳು ಚಂದ್ರಿ.
ಹಾಗೆ ಉಗಿಸಿಕೊಂಡರುದೇಶ, ಅಡುಗೆ ಕೋಣೆಯಲ್ಲಿ ಬೋಂಡಾ ಬೇಯಿಸುತ್ತಿದ್ದ ಶ್ಯಾಮಿಯ ಮುಂದೆ ಸಣ್ಣ ಮಗುವಿನಂತೆ ಬಂದು ನಿಂತ.coಂಡನ ಮುಖಾ ನೋಡಿ ಶ್ಯಾಮಿಯ ಕರುಳು ಚುರ್ ಎಂದಿತು. ಈ ಚಂದ್ರಕ್ಕುಂದು ಇದೇ ಗೋಳಾಗೊಯ್ತು ಇದುಕ್ಕೊಂದು ಗತಿ ಕಾಣುಸ್ತೇ ಬೇಕು ಕಣಿ” ಎಂದು ಹಜಾರದ ದೀವಾನಿನ ಮೇಲೆ ಮಲಗಿದ್ದ ಪ್ರಕಾಶನಲ್ಲಿ ಬುಸುಗುಟ್ಟಿ ಚಂಡಿ ಚಾಮುಂಡಿ ಅಂತೆ ಹೊರಗೆ ಬಂದು ಸೀದಾ ಚಂದ್ರಿಯ ಜಡೆಮುಡಿಗೆ ಕೈ ಹಾಕಿದಳು. ಯಾರ ಹಿಡಿತಕ್ಕು ಸಿಗದ ಇವರಿಬ್ಬರ ಜಡೆಜಗಳ ಕಂಡು ಅಭ್ಯಾಸವಾಗಿದ್ದ ಪ್ರಕಾಶ ಸುಮ್ಮನೆ ನೋಡುತ್ತಿದ್ದ
ನಿಜ ಹೇಳಬೇಕೆಂದರೆ ಶ್ಯಾಮಿಗೂ ಕೂಡ ಪ್ರಕಾಶನನ್ನು ಹೀಗೆ ತನ್ನ ತೆಕ್ಕೆಯೊಳಗಿಟ್ಟುಕೊಂಡು ಊರವರ ಮುಂದೆ ಮಾನಗೆಟ್ಟವಳಂತೆ ಓಡಾಡುವುದು ಬಹಳ ಸಂಕೋಚದ ವಿಷಯವೇ ಆಗಿತ್ತು. ಆದರೆ ಅದುಮಿಟ್ಟುಕೊಂಡ ತನ್ನ ಬಯಕೆಗಳಿಗೆ ಪ್ರಕಾಶನ ಮುಖಾಂತರ ಕಾಲವೇ ಮುಲಾಮು ಹಚ್ಚಿ ಸಂತೈಸುತ್ತಿದೆಯೇನೋ ಎನ್ನುವ ಭಾವ ಮೂಡಿ ಬಿಡುತ್ತಿತ್ತು.

ತನ್ನ ಅಪ್ಪ ಅವ್ವನನ್ನೂ ಬರೋಬ್ಬರಿ ಇಪ್ಪತ್ತು ವರ್ಷಗಳು ಕಾಡಿಸಿ ಹುಟ್ಟಿದ ಈ ಗರಗಂದೂರಿನ ಹಟ್ಟಿಯ ಶ್ಯಾಮಲ, ಮಂಟಿಕೊಪ್ಪಲ ಏರು ಗುಡ್ಡದ ಕಾಲೇಜಿನಲ್ಲಿ ಡಿಗ್ರಿ ಓದುತ್ತಿರುವಾಗಲೇ ನಮಗೂ ವಯಸ್ಸ ಆಯ್ತು ಕಣ್ಣಾ ಮಗ ಬೇಗ ಲಗ್ನ ಆಗು” ಎಂದು ಸದಾ ಹಲುಬುತ್ತಿದ್ದ ಅಪ್ಪ ಅವ್ವನ ಗೋಳಾಟಕ್ಕೆ ಕಟ್ಟುಬಿದ್ದು ಈ ರುದ್ರೇಶನನ್ನು ಮದುವೆ ಆಗಿ ನೂರಾರು ಮೈಲು ದೂರದ ದುಗ್ಗಮ್ಮನ ಹಟ್ಟಿಗೆ ಬಂದು ಸೇರಿದ್ದಳು. ದಿನ ಒಳ್ಳೆಯದಿಲ್ಲವೆಂಬ ನೆಪ ಹೇಳಿ ಪ್ರಸ್ಥದ ಶಾಸ್ತ್ರವನ್ನು ಮುಂದೂಡಿಕೊಂಡೇ ಬಂದ ರುದ್ರೇಶನ ಅಣ್ಣಂದಿರು, ಇನ್ನು ಕಾರಣ ಹೇಳುವಂತೆಯೇ ಇರಲಿಲ್ಲ. ಮದುವೆಗೆ ಹಾಕಿದ್ದ ತಮ್ಮ ರಜೆಗಳೆಲ್ಲ ಮುಗಿದು ಇನ್ನೊಂದೆರಡು ದಿನದಲ್ಲಿ ಕಚೇರಿಗೆ ಹಾಜರಾಗಲೇಬೇಕಾಗಿತ್ತು. ಹಾಗಾಗಿ ಧೈರ್ಯ ತಂದುಕೊಂಡು ಆ ದಿನ ಬೆಳ್ಳಂಬೆಳಿಗ್ಗೆಯೇ, ರುದ್ರೇಶನನ್ನು ತೋಟದ ಮಿಷನ್ ಮನೆಗೆ ಕರೆದುಕೊಂಡು ಹೋಗಿ, ತಮ್ಮನಿಗೆ ಮೊದಲ ರಾತ್ರಿಯ ಒಳ ಹೊರಗುಗಳನ್ನೆಲ್ಲ ಸವಿವರವಾಗಿ ವಿವರಿಸಿದ್ದರು.

ಅಚ್ಚರಿಯಿಂದ ಅಣ್ಣಂದಿರ ಆ ಮಾತುಗಳನ್ನು ಕೇಳಿಸಿಕೊಂಡ ರುದ್ರೇಶ “ಇಸ್ಸಿಯೇ… ನೀವಿಬ್ರು ಇಷ್ಟೊಂದು ಪೋಲಿಗಳು ಅಂತ ಗೊತ್ತಿರ್ಲಿಲ್ಲ. ನಾನಂತೂ ಇಂತ ಹಲ್ಕಟ್ ಕೆಲ್ಲನೆಲ್ಲಾ ಮಾಡಕಿಲ್ ಅಣ್ಣಯ್ಯೋರ ಎಂದು ಮುಖ ಕಿವಿಚಿಕೊಂಡು ಗುದ್ದಲಿ ತೆಗೆದುಕೊಂಡು ತೋಟದೊಳಕ್ಕೆ ನುಗ್ಗಿದ್ದ. ಇಷ್ಟರವರೆಗೆ ಶ್ಯಾಮಿಗಾಗಲಿ ಅವಳ ಮನೆಯವರಿಗಾಗಲಿ ಮದುವೆ ಆಗುತ್ತಿರುವ ಹುಡುಗ ಹೆಗ್ಡೆ ಅನ್ನುವ ವಿಚಾರ ಅರಿವಿಗೆ ಬಾರದಂತೆ, ಸರ್ಪಗಾವಲು ಹಾಕಿ ಕಾದಿದ್ದ ಅತ್ತಿಗೆಯರಿಗೆ, ಈ ಪ್ರಸ್ಥದ ದಿನ ಎಲ್ಲಾ ಬಯಲಾಗಿ ಬಿಟ್ಟರೆ ಶ್ಯಾಮಿಗೆ ಹೇಗೆ ಮುಖ ತೋರಿಸುವುದು ಎನ್ನುವುದೇ ದೊಡ್ಡ ಚಿಂತೆಯಾಗಿ ತಲೆಯ ಮೇಲೆ ಬೆಟ್ಟ ಹೊತ್ತವರಂತೆ ವಿಧಿ ಇಲ್ಲದೆ ಶ್ಯಾಮಿಯನ್ನು ಪ್ರಸ್ಥದ ಕೋಣೆಗೆ ಬಿಟ್ಟುಬಂದಿದ್ದರು.

ಕೈ ಕಾಲೆಲ್ಲ ಸೋತಂತಾಗಿ ಎದ್ದು ನಿಲ್ಲುವ ತ್ರಾಣವು ಇಲ್ಲದವನಂತೆ ಪ್ರಸ್ಥದ ಹಾಸಿಗೆಯಲ್ಲಿ ಮುದುರಿ ಕೂತಿದ್ದ ರುದ್ರೇಶನ ಮೈ ಕೆಂಡದುಂಡೆಯಂತೆ ಸುಡುತ್ತಿತ್ತು. “ಅಯ್ಯೋ ಶಿವೆ ಇಷ್ಟೊಂದು ಜ್ವರ ಉಕ್ತಿದಿಯಲ್ಲ ಹೇಳ್ಕೊ ಬಾರ್ದೇನಿ” ಎಂದು ಹೇಳಿ ಹೊರಗಿದ್ದ ಭಾವಂದಿರ ಗಮನಕ್ಕೆ ಇದನ್ನು ತಂದು ಮಾತ್ರೆ ತರಿಸಿ ನುಂಗಿಸಿ ಮಲಗಿಸಿದ್ದಳು.
ಊರಿಗೆ ಹೊಸಬಳಾಗಿದ್ದ ಶ್ಯಾಮಿಗೆ ರುದ್ರೇಶನೇ ಸಕಲ ಸರ್ವಸ್ವವೂ ಆಗಿದ್ದರಿಂದ ಆಕೆ ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಜ್ವರ ಹಿಡಿದು ವಾರವಿಡೀ ಮೌನದ ಚಿಪ್ಪಿನೊಳಗೆ ಹುದುಗಿಹೋಗಿದ್ದ ಗಂಡನ ಆರೈಕೆಯಲ್ಲಿಯೇ ತನ್ನ ಕನಸುಗಳನ್ನು ನೇಯತೊಡಗಿದ್ದಳು. ಬಂದ ದಿನದಿಂದ ಇಲ್ಲಿಯವರೆಗೂ ಅವನೊಂದಿಗಿನ ಸಾಮೀಪ್ಯಕ್ಕಾಗಿ ಹಪಹಪಿಸುತ್ತಿದ್ದ ಶ್ಯಾಮಿ, ರುದ್ರೇಶ ಗುಣಮುಖನಾಗುವುದನ್ನೇ ಕಾದುಕುಳಿತಿದ್ದಳು. ಒಂದು ಮಧ್ಯರಾತ್ರಿ ತನ್ನ ಸಂಕೋಚವನ್ನೆಲ್ಲಾ
ಬದಿಗೊತ್ತಿ ಗಾಢನಿದ್ದೆಯಲ್ಲಿದ್ದ ರುದ್ರೇಶನನ್ನು ಗಟ್ಟಿಯಾಗಿ ತಬ್ಬಿ ಅವನ
ತಲೆಗೂದಲು ನೇವರಿಸುತ್ತಾ ಒಂದ್ಧತಿಯು ನನ್ನ ಮುಖ ನೋಡಿ ಮಾತಾಡೇಕು ಅನ್ನುಸ್ತಿಲ್ವ ನಿದ್ದೆ” ಎಂದು ಕೆಣಕಿದಳು. ಕುದಿನೀರು ಮೈ ಮೇಲೆ ಬಿದ್ದಂತೆ ತಟ್ಟನೆ ವಾಸ್ತವಕ್ಕಿಳಿದ ರುದ್ರೇಶ, ಭಯಗ್ರಸ್ತನಾಗಿ ಅವಳಿಂದ ಮಾರು ದೂರ ಮುದುರಿ ಕುಳಿತು ಸಣ್ಣಮಗುವಿನಂತೆ ಬಿಕ್ಕತೊಡಗಿದ. ಪ್ರಸ್ಥದ ದಿನವೇ ಅವನ ಸಹಜತೆಯ ಬಗ್ಗೆ ತುಸು ಅನುಮಾನಗೊಂಡಿದ್ದ ಶ್ಯಾಮಿಗೆ ಇಂದು ಅವನ ಅಸಹಜತೆಯ ಪೂರ್ಣ ದರ್ಶನವಾಗಿ ಮನೆಯ ಹೊರಗಿದ್ದ ಬಚ್ಚಲಿಗೆ ಹೋಗಿ ಕಡಾಯಿಯಲ್ಲಿದ್ದ ತಣ್ಣೀರನ್ನೇ ದಬದಬನೆ ಸುರಿದುಕೊಂಡು ಮಡಿಸೀರೆ ಉಟ್ಟು ಹೊರಬಂದಿದ್ದಳು.

ಮಗಳು ಸಿರಿವಂತರ ಮನೆ ಸೇರಿದಳು ಎಂದು ನಿಟ್ಟುಸಿರು ಬಿಟ್ಟಿದ್ದ ತನ್ನ ವಯಸ್ಸಾದ ಅಪ್ಪ ಅವ್ವ ಈ ಸತ್ಯವನ್ನು ಹೇಗೆ ಜೀರ್ಣಿಸಿಕೊಂಡಾರು? ತನ್ನ ಹಟ್ಟಿ ಜನರ ಮುಂದೆ ಹೇಗೆ ತಲೆ ಎತ್ತಿ ನಿಲ್ಲುವುದು ಎಂಬುದನ್ನೆಲ್ಲಾ ನೆನೆದು ಅವಳ ಎದೆ ಇನ್ನಷ್ಟು ಭಾರವಾಯಿತು. ಮುಂದಿನ ದಾರಿ ತೋಚದೆ ಮನೆಯ ಹೊರಬಾಗಿಲಲ್ಲಿಯೇ ಕುಳಿತು ಕಣ್ಣಲ್ಲಿಯ ನೀರು ಇಂಗುವವರೆಗು ರೋದಿಸಿದಳು. ಇದುವರೆಗೂ ಶ್ಯಾಮಿಯನ್ನು ಮಾತಾಡಿಸಲು ಹೆದರಿ ಒಳಕೋಣೆಯಲ್ಲಿಯೇ ಜೂಗರಿಸುತ್ತಾ ಕುಳಿತಿದ್ದ ರುದ್ರೇಶ ನಿದ್ದೆ ತಾಳಲಾರದೆ ಧೈರ್ಯ ತಂದುಕೊಂಡು ಅವಳ ಬಳಿ ಬಂದ “ಹಿಂಗ್ ಅಡ ಸ್ಯಾಮವ್ವ ತಲೆನೋವು ಬತ್ತದೆ. ನಮ್ಮವಂಗೆ ಈ ಮನೆಗೆ ಬಂದಿದ್ಯಾ. ನಿಂಗೆ ನಾನ್ ಬ್ಯಾಡ ಅಂದ್ರೆ ಹೇಳು ನಾನೇ ಎಲ್ಲಾಗಾದ್ರು ಹೊಂಟ್ ಹೊಯ್ತಿನಿ. ಒಟ್ನಲ್ಲಿ ನೀನು ಕಣ್ಣೀರ್ ಹಾಕ್ಷಂಗೆ ಈ ಮನೆಲಿ ಖುಸಿಯಾಗಿರ್ಬೇಕು ಅಷ್ಟೆಯಾ. ಹಿಂಗೆ ತಲೆಗೆ ಯೋಚೆ ಹಳ್ಕೊಂಡೆಯ ನಾನು ಈಸ್ ದಿನ ಹಾಸ್ಟೆ ಹಿಡ್ಡು ಮಲಗಿದ್ದು ಸ್ಯಾಮವ್ವ ನಿಂಗು ಅಂಗಾಗದು ಬ್ಯಾಡನೋಡು, ಅದುಕ್ಕೆ ಹೇಳ್ತಿದ್ದೀನಿ ಒಳುಗಂದು ಮಲಿಕ ಬಾವ್ವ’ ಎಂದು ಗೋಗರೆಯುತ್ತ ನಿಂತ.

ಶ್ಯಾಮಿ ಕಣ್ಣುಬಿಟ್ಟಾಗ ರುದ್ರೇಶ ಅವಳ ಕಾಲ ಬುಡದಲ್ಲಿಯೇ ನಿದ್ರೆಗೆ ಜಾರಿದ್ದ. ಅದನ್ನು ಕಂಡು ಶ್ಯಾಮಿಯ ಒಳಗಿದ್ದ ಅಷ್ಟೋ ಇಷ್ಟೋ ಸಿಟ್ಟು ಸೆಡವುಗಳು ಕೊಂಚ ಕರಗಿದಂತಾಗಿ ಕಾಲ ಬುಡದಲ್ಲಿದ್ದ ಅವನನ್ನು ಮಗ್ಗುಲಿಗೆಳೆದುಕೊಂಡು ಅವ್ವನಂತೆಯೇ ತಬ್ಬಿ ಮಲಗಿದಳು.
ಸಾಂತ್ವನಕ್ಕಾಗಿ ಹಪಾಪಿಸುತ್ತಿದ್ದ ಶ್ಯಾಮಿಯನ್ನು ಅವನ ದನಿಯಲ್ಲಿದ್ದ ಪ್ರೀತಿ, ಆದ್ರ್ರ ಭಾವ ತುಸು ತಣ್ಣಗಾಗಿಸಿತು, ತಲೆ ಎತ್ತಿ ಅವನ ಮುಖ ನೋಡಿದಳು. ಮಗುವಿನ ಮುಗ್ಧತೆಯನ್ನೇ ಹೊತ್ತು ನಿಂತಿದ್ದ ರುದ್ರೇಶನ ನಿಷ್ಕಲ್ಮಶ ವ್ಯಕ್ತಿತ್ವ, ತನ್ನಲ್ಲಿ ಅವ್ವನ ಪ್ರೀತಿಯನ್ನು ಹುಡುಕುತ್ತಿದ್ದ ಅವನ ತಬ್ಬಲಿತನ ಎಲ್ಲವೂ ಶ್ಯಾಮಿಯ ಎದೆಯಲ್ಲಿದ್ದ ತಾಯ್ತನವನ್ನು ಬಡಿದೆಬ್ಬಿಸಿತು. ಏನೊಂದು ಮಾತಾಡಲಾರದೆ
ಎದ್ದು ಹಜಾರಕ್ಕೆ ಬಂದು, ಚಾಪೆ
ಬಿಡಿಸಿ ತಲೆ ತುಂಬಾ
ಮುಸುಕೊದ್ದು ಮಲಗಿಬಿಟ್ಟಳು. ಬೆಳಗ್ಗೆ ಶ್ಯಾಮಿ ಕಣ್ಣುಬಿಟ್ಟಾಗ ರುದ್ರೇಶ ಅವಳ ಕಾಲ ಬುಡದಲ್ಲಿಯೇ ನಿದ್ರೆಗೆ ಜಾರಿದ್ದ. ಅದನ್ನು ಕಂಡು ಶ್ಯಾಮಿಯ ಒಳಗಿದ್ದ ಅಷ್ಟೋ ಇಷ್ಟೋ ಸಿಟ್ಟು ಸೆಡವುಗಳು
ಕೊಂಚ ಕರಗಿದಂತಾಗಿ ಕಾಲ ಬುಡದಲ್ಲಿದ್ದ ಅವನನ್ನು ಮಗ್ಗುಲಿಗೆಳೆದುಕೊಂಡು ಅವ್ವನಂತೆಯೇ ತಬ್ಬಿ ಮಲಗಿದಳು.

ಗರಗಂದೂರಿನ ಹಟ್ಟಿಯಲ್ಲಿ ಸದಾ ಜನರ ಒಡನಾಟದಲ್ಲಿ ಜವಾರಿಯಾಗಿ ಬೆಳೆದ ಶ್ಯಾಮಿಗೆ, ಈ ತೋಟದ ಒಂಟಿ ಮನೆಯ ನಾಜೋಕಿನ ಬದುಕು ನೀರಸವಾಗತೊಡಗಿತ್ತು. ಹಾಗಾಗಿ ಗಂಡನೊಂದಿಗೆ ಆಗಾಗ ಪಕ್ಕದ ತಲಚೇರಿ ಪೇಟೆಗೆ ಹೋಗಿ ಸುತ್ತಾಡಿ ನಾಟಕವೋ ಬಯಲಾಟವೋ ಇದ್ದರೆ
ನೋಡಿಕೊಂಡು ಬರುವುದನ್ನು ರೂಢಿಸಿಕೊಂಡಿದ್ದಳು. ದಿನ ಕಳೆದಂತೆ ತುಸು ಹೆಚ್ಚೇ ಎನ್ನಿಸುವಷ್ಟು ನಾಟಕದ ಗೀಳಿಗೆ ಬಿದ್ದ ಈ ಗಂಡ ಹೆಂಡಿರಿಗೆ ದಾನಶೂರ ಕರ್ಣ” ದ ಕರ್ಣನಾಗಿ, ‘ಕೃಷ್ಣ ಲೀಲೆಯ’ ಕೃಷ್ಣನಾಗಿ “ಸಂಪೂರ್ಣ ರಾಮಾಯಣ’ದ ರಾಮನಾಗಿ “ದೇವಿ ಮಹಾತ್ತೆಯ’ ದೇವಿಯಾಗಿ ಹೀಗೆ ಅನೇಕ ಪಾತ್ರಗಳ ಮೂಲಕ ಮನ ಸೂರೆಗೊಂಡವನೇ ಈ ಸೂಗೂರಿನ ಹಟ್ಟಿಯ ಪ್ರಕಾಶ. ತಲಚೇರಿಯ ನಾಡ ಕಚೇರಿಯಲ್ಲಿ ಗುಮಾಸ್ತನಾಗಿದ್ದ ಈತ ತನ್ನ ಕಾಲೇಜಿನ ಸಹಪಾಠಿ ಸಿಂಗನೂರಿನ ಆಚಾರರ ಬೀದಿಯ ಚಂದ್ರಕಲಾಳನ್ನು ಹಾರಿಸಿಕೊಂಡು ಬಂದು ಮದುವೆಯಾಗಿ ತಲಚೇರಿಯಲ್ಲಿಯೇ ಸಂಸಾರ ಹೂಡಿದ್ದ. ಸದಾ ಜನರೊಳಗಿರುವುದನ್ನೇ ಬಯಸುತ್ತಿದ್ದ ಪ್ರಕಾಶ ಒಂದಷ್ಟು ಸಮಾನ ಮನಸ್ಕರನ್ನು ಒಟ್ಟುಗೂಡಿಸಿ “ತಲಚೇರಿ ನಾಟಕ ಮಂಡಳಿ’ಯನ್ನು ಹುಟ್ಟುಹಾಕಿದ್ದ. ಒಂದಾದ ಮೇಲೆ ಒಂದರಂತೆ ನಾಟಕ ಆಡುತ್ತಾ, ಸುತ್ತಮುತ್ತಲ ಹತ್ತು ಹಳ್ಳಿಯ ಜನರನ್ನು ತನ್ನ ಹಾಡು, ನಟನೆಗಳಿಂದ ಸೂಜಿಗಲ್ಲಿನಂತೆ ಸೆಳೆದು ಬಿಟ್ಟಿದ್ದ. ಪ್ರಕಾಶ ಆಟ ಕಟ್ಟಿದನೆಂದರೆ ಮೈಲಿ ಮೈಲಿ ದೂರಗಳಿಂದ ಎತ್ತಿನ ಗಾಡಿಗಳು ಸಾಲುಗಟ್ಟಿ ಬಂದು ತಲಚೇರಿಯಲ್ಲಿ ಬೀಡುಬಿಡುತ್ತಿದ್ದವು. ಪ್ರತಿ ಹಳ್ಳಿಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಮುಖ್ಯ ಅತಿಥಿಯಾಗಿ ಭಾಗವಹಿಸಲೇಬೇಕಾಗಿದ್ದ ಪ್ರಕಾಶ, ಕಚೇರಿ, ನಾಟಕ, ಕಾರ್ಯಕ್ರಮ ಎಂದು ಮೂರು ಹೊತ್ತು ಓಡಾಡುತ್ತಿದ್ದರೆ, ಇತ್ತ ಅವನ ಹೆಂಡತಿ ಚಂದ್ರಿ ಮನೆ, ಮಕ್ಕಳು ಎಂದು ಕೈಕಾಲಿಗೆ ಹಗ್ಗ ಬಿಗಿದುಕೊಂಡವಳಂತೆ ಹೆಣಗಾಡುತ್ತಿದ್ದಳು.

ಕಾಲೇಜಿನ ದಿನಗಳಲ್ಲಿ ಓದಿನಿಂದ ಹಿಡಿದು ಪ್ರತಿಯೊಂದು ಚಟುವಟಿಕೆಗಳಲ್ಲೂ ಪ್ರಕಾಶನಿಗಿಂತ ಬಹಳ ಜಾಣೆಯಾಗಿದ್ದ ಚಂದ್ರಿ, ಮದುವೆಯ ನಂತರ ಗಂಡನ ಪ್ರೀತಿಯ ತೆಕ್ಕೆಗೆ ಸಿಕ್ಕು ತನ್ನ ಸರ್ವಸ್ವವನ್ನು ಅವನ ಏಳಿಗೆಗಾಗಿ ಧಾರೆ ಎರೆದಿದ್ದಳು. ತಾನು ಮಾತ್ರ ನಾಕು ಕೋಣೆಯ ಮೇಲುಸ್ತುವಾರಿಯೊಳಗೆ ಸಿಕ್ಕು ಗೂಡಿನ ಹಕ್ಕಿಯಾಗಿದ್ದಳು.
ಇತ್ತಿತ್ತಲಾಗಿ ತನ್ನ ಅಸ್ತಿತ್ವದ ಹುಡುಕಾಟಕ್ಕಿಳಿದಿದ್ದ ಚಂದ್ರಿ ಈ ಸಂಸಾರದ ಕಗ್ಗಂಟಿನಿಂದ ಬಿಡಿಸಿಕೊಳ್ಳಲಾರದೆ ಉಸಿರು ಕಟ್ಟತೊಡಗಿದ್ದಳು. ನಿಧಾನವಾಗಿ ಗಂಡನ ಮೇಲೆ ಶುರುವಾದ ಅಸಮಧಾನದ ಹೊಗೆ ಕಿಚ್ಚಾಗಿ ಭುಗಿಲೇಳಲು ಬಹಳ ಸಮಯವೇನು ತೆಗೆದುಕೊಳ್ಳಲಿಲ್ಲ. ಸದಾ ಒಂದಿಲ್ಲೊಂದು ಹೊಸ ಚಟುವಟಿಕೆಗೆ ತನ್ನನ್ನು ತೆರೆದುಕೊಳ್ಳಲೆಳಸುತ್ತಿದ್ದ ಪ್ರಕಾಶನಿಗೆ ಚಂದ್ರಿ ಕಿರಿಕಿರಿ ಎನ್ನಿಸತೊಡಗಿದಳು. ಹಾಗಾಗಿ ಹೆಚ್ಚು ಹೆಚ್ಚು ತಾಲೀಮಿನ ಕೊಠಡಿಯಲ್ಲಿಯೇ ಝಾಂಡ ಊರತೊಡಗಿದ. ಇದರಿಂದ ಇನ್ನಷ್ಟು ಕಿಡಿಯಾದ ಚಂದ್ರಿ ಗಂಡ ಬಂದಾಗ ಮಗ್ಗುಲಾಗುವುದನ್ನು ಬಿಟ್ಟಿದ್ದಲ್ಲದೆ, ಅವನ ಬೇಕು ಬೇಡಗಳ ಪೂರೈಕೆಯನ್ನು ನಿಸೂರಾಗಿ ನಿಲ್ಲಿಸಿ ತೆಪ್ಪಗಾದಳು.
ಇಂತಹ ಗಳಿಗೆಯಲ್ಲಿಯೇ ಪ್ರಕಾಶನ ಸ್ನೇಹದ ಪರಿಧಿಗೆ ಬಂದಿದ್ದ ರುದ್ರೇಶ ಶ್ಯಾಮಿಯರು ಜಾತಿ ಕಾರಣದಿಂದಲೋ, ಅನುಕಂಪದಿಂದಲೋ, ಒಟ್ಟಿನಲ್ಲಿ ಪ್ರಕಾಶನೊಳಗಿನ ಒಂಟಿತನಕ್ಕೆ ಹೆಗಲೆಣೆಯಾಗಿ ಬೆಸೆದುಕೊಂಡರು.

ಚಂದ್ರಿ ಕೈಯ ಸೊಪ್ಪು ಸೆದೆ ತಿಂದು ಜಡ್ಡುಗಟ್ಟಿದ್ದ ಪ್ರಕಾಶನ ನಾಲಿಗೆಗೆ, ಶ್ಯಾಮಿಯ ಬಾಡಿನೂಟದ ರುಚಿ, ಅವಳು ಮಾಡಿಸುತ್ತಿದ್ದ ನೊಚ್ಚನೆಯ ಎಣ್ಣೆನೀರಿನ ಸ್ಥಾನ ಎಲ್ಲವೂ ಅವನ ಪಂಚೇಂದ್ರಿಯಗಳಿಗೆ ಸುಖವನ್ನುಣಿಸಿ ಇಬ್ಬರ ಅಭಿಮಾನ ಪ್ರೇಮದ ಹೂವಾಗಿ ಅರಳಿ ಘಮಗುಟ್ಟಿತು. ಆ ಪ್ರೇಮದ ಘಮಲು ಬಹುಬೇಗ ಊರು ಕೇರಿಗಳನ್ನು ದಾಟಿ ಪ್ರಕಾಶನ ಮನೆ ಬಾಗಿಲಿಗೂ ಬಂದು ಬಡಿಯಿತು. ಮೊದಲೇ ಹತಾಶೆಯ ಕಿಚ್ಚಿನಲ್ಲಿ ಬೇಯುತ್ತಿದ್ದ ಚಂದ್ರಿಯನ್ನು ಆಗಾಗ ಕೇಳಿ ಬರುತ್ತಿದ್ದ ಈ ಸುದ್ದಿ ಇನ್ನಷ್ಟು ರೊಚ್ಚಿಗೇಳುವಂತೆ ಮಾಡುತ್ತಿತ್ತು. ತನ್ನೊಳಗೆ ಕುದಿಯುತ್ತಿದ್ದ ಲಾವಾರಸವನ್ನು ಹೊತ್ತು ಆಗಾಗ ಶ್ಯಾಮಿಯ ಮನೆ ಮುಂದೆ ಬಂದು ಕಾರಿ ಹೋಗುವುದು ಚಂದ್ರಿಗೆ ಮಾಮೂಲಾಗಿ ಹೋಗಿತ್ತು. ಪ್ರಕಾಶ ಚಂದ್ರಿಯನ್ನು ಓಲೈಸಲು ಮಾಡಿದ ಸಾಹಸವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿ ಕೊನೆಗೊಂದು ದಿನ ಕೈ ಚೆಲ್ಲಿ
ದಾರಿ ಕಂಡತ್ತ ಹೆಜ್ಜೆ ಹಾಕತೊಡಗಿದ.
ಅಂದು ವಾರ ಕಳೆದರೂ ಮನೆಯತ್ತ ತಲೆ ಹಾಕದ
ಮೇಲೆ ರೋಷಾವೇಶಗೊಂಡು ಸೆಡ್ಡು ಹೊಡೆದು ನಿಂತ ಚಂದ್ರಿ, ತಲಚೇರಿ ಮತ್ತು ದುಗ್ಗಮ್ಮನ ಹಟ್ಟಿಯ ಹತ್ತಾರು ಜನರನ್ನು ತನ್ನ ಬೆನ್ನಿಗಾಕಿಕೊಂಡು ಬಂದು ಪ್ರಕಾಶನ ಮಾನ ಮರಿಯಾದಿಯನ್ನೆಲ್ಲ ಹರಾಜಾಕಿ ಅವನನ್ನು ಎಳೆದಾಡಿ ಒಂದು ಗಂಟೆಯ ಗಡುವು ಕೊಟ್ಟು ಮನೆಗೆ ಹಿಂದಿರುಗಿದ್ದಳು. ತನ್ನನ್ನು ಆರಾಧಿಸುತ್ತಿದ್ದ ಊರ ಜನರ ಮುಂದೆ ತನ್ನ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದ್ದನ್ನು ಕಂಡು ಕುಗ್ಗಿಹೋದ ಪ್ರಕಾಶ, ಜ್ವರದ ಆಯಾಸದಲ್ಲಿಯೇ ಎದ್ದು ತಲಚೇರಿಯ ಮನೆ ಸೇರಿ ರೂಮಿನ ಬಾಗಿಲು ಹಾಕಿಕೊಂಡ. ಇನ್ನೂ ಅದೇ ಕೋಪದಲ್ಲಿ ಧುಮುಗುಡುತ್ತಿದ್ದ ಚಂದ್ರಿಗೆ ಅವಮಾನದಿಂದ ಕುಗ್ಗಿಹೋದ ಗಂಡನ ಮುಖ ಕಂಡು ಕೋಪವೆಲ್ಲ ಜರನೆ ಇಳಿದು ತನ್ನ ಬಗ್ಗೆಯೆ ಪಾಪ ಪ್ರಜ್ಞೆ ಮೂಡಿ ನಿಂತಿತು. ಗಂಟಲಿನ ಮಾತೆಲ್ಲವೂ ಇಂಗಿ ಮೌನಕ್ಕೆ ಶರಣಾದ ಚಂದ್ರಿ ಅವನು ಬಾಗಿಲು ತೆರೆದು ಹೊರಬರುವುದನ್ನೇ ಕಾದು ಕುಳಿತಳು. ಎಷ್ಟು ತಾಸು ಕಳೆದರೂ ಬಾಗಿಲು ಮಾತ್ರ ತೆರೆದುಕೊಳ್ಳಲೇ ಇಲ್ಲ. ಇವಳೊಳಗೆ ಸಣ್ಣದಾಗಿ ಆತಂಕ ಮುಳ್ಳಾಡತೊಡಗಿತು.

ಅವನಿಗೆ ಕೇಳುವಂತೆ “ಗೌರಿ ದುಃಖ ಕೇಳೋರ್ಯಾರು..? ನೀನೇ ಬೇಕು ಅಂತ ಬಂಧು ಬಳಗನೆಲ್ಲ ಬುಟ್ ಉಟ್ಟಟ್ಟೇಲಿ ನಿನ್ ಹಿಂದ್ ಬಂದಿದ್ದೀನಿ. ಈಗ ಬಂದು ಅವಳ್ಯಾವ ಹಲ್ಕಟ್ ಲವಿನ ಒಪ್ಪೋ ಒಪ್ಪೋ ಅಂದ್ರೆ ನಾನು ಹೆಂಗ್ ಒಳ್ಳಿ ಹೇಳು, ನಿನ್ನ ಪ್ರೀತಿ ಮಾಡಕೆ ಕಾಲೊಬ್ರು ಕೈಗೊಬ್ರು, ನಾನು ಎಲ್ಲೋಗೋಕು ಹೇಳು. ನಂಗು ಈ ನಾಕ್ ಗ್ವಾಡೆ ಒಳ್ಳೆ ಬೆಂದು ಸಾಕಾಗದೆ ಪ್ರಕಾಶ ನನ್ನ ಸಂಕ್ಷನು ಅರ್ಥ ಮಾಡ್ಕೊಳ್ಳೋ’ ಎಂದು ರೋದಿಸುತ್ತಾ, ರೂಮಿನ ಬಾಗಿಲು ಬಡಿದೇ ಬಡಿದಳು. ಚಂದ್ರಿಯ ಯಾವ ಸದ್ದಿಗೂ ಬಾಗಿಲು ಮಾತ್ರ ತೆರೆದುಕೊಳ್ಳಲೇ ಇಲ್ಲ. ಅದಾಗಲೇ ಎಲ್ಲಾ ಕಟ್ಟು ಕಟ್ಟಳೆಗಳ ಹಂಗು ತೊರೆದ ಪ್ರಕಾಶನ ಪ್ರಾಣ ಪಕ್ಷಿ ಯಾರ ಹಿಡಿತಕ್ಕೂ ಸಿಗದಂತೆ, ಸ್ವಚ್ಛಂದವಾಗಿ ಹಾರಿಹೋಗಿತ್ತು. ಜಡ್ಡುಗಟ್ಟಿದ್ದ ದೇಹ ಮಾತ್ರ ತಣ್ಣಗೆ ರೂಮಿನ ಸೂರಿನಲ್ಲಿ ನೇತಾಡುತ್ತಾ ಭಯಭೀತವಾಗಿ ಸೆಟೆದು ನಿಂತಿತ್ತು…

ಕಾಡಿಚ್ಚಿನಂತೆ ಹಬ್ಬಿದ ಪ್ರಕಾಶನ ಆತ್ಮಹತ್ಯೆಯ ಸುದ್ದಿ, ಹುಚ್ಚೆದ್ದು ಕುಣಿಯುತ್ತಿದ್ದ ಅವನ ಅಭಿಮಾನಿಗಳನ್ನು ರೊಚ್ಚಿಗೇಳಿಸಿತ್ತು. ಕಣ್ಣು ಮುಚ್ಚಿ ಬಿಡುವುದರೊಳಗೆ ಪ್ರಕಾಶನ ಮನೆಯ ಅಂಗಳ ಜನ ಜಂಗುಳಿಯಿಂದ ತುಂಬಿ ಹೋಯಿತು. ಕೆಂಗಣ್ಣಿನಲ್ಲಿಯೇ ಚಂದ್ರಿಯ ಮಹಜರು ಮಾಡಿದ ಜನ ‘ನಮ್ಮೂರ್ ಆಸ್ತಿನ ನುಂಗಿ ನೀರ್ ಕುಡುದ್ ಬುಟ್ಟು ರಂಡೆ’ ಎಂದು ಬಾಯಿಗೆ ಬಂದಂತೆ ಆಡಿದ ಮಾತುಗಳು ಅರೆ ಜೀವವಾಗಿದ್ದ ಅವಳ ಉಸಿರನ್ನೆ ನಿಲ್ಲಿಸಿದಂತಾಗಿತ್ತು. ಅಪ್ಪನ ಶವದೆದುರು ಆಘಾತಗೊಂಡು ಕುಸಿದಿದ್ದ ತನ್ನೆರಡು ಹೆಣ್ಣು ಮಕ್ಕಳನ್ನು ಬಗಲಿಗೆಳೆದುಕೊಂಡು ತಬ್ಬಿದ ಚಂದ್ರಿ ಗುಟುಕು ಉಸುರಿಗಾಗಿ ವಿಸ್ತಾರ ಆಗಸದತ್ತ ಮುಖ ಎತ್ತಿ ಕೂತಳು….

 

Tags: