Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕಾಕ್‌ ಟೇಲ್

ಚಿಕ್ಕವಳಿದ್ದಾಗ ನಾನು ಪೇಂಟಿಂಗ್ ವಾಡುತ್ತಿದ್ದರೆ ಬಂದು ಕೈ ಮೈಗೆಲ್ಲಾ ಬಣ್ಣ ಬಳಿದುಕೊಂಡು ಆಟವಾಡುತ್ತಿದ್ದಳು. ಇವಳು ಚಿಕ್ಕವಳಿದ್ದಾಗಂತೂ ಮನೆಯ ಯಾವ ಗೋಡೆ ನೋಡಿದರೂ ಬಣ್ಣದ ನೂರಾರು ಪುಟ್ಟ ಪುಟ್ಟ ಅಂಗೈ ಅಚ್ಚುಗಳು, ಮನೆಯ ತುಂಬಾ ಬಣ್ಣಗಳು. ನಾವು ಮಲಗುವ ಕೋಣೆಯ ತುಂಬಾ ಇವಳ ಅಂಗೈ ಅಚ್ಚುಗಳು, ಬಣ್ಣದ ಬರೆಗಳೇ. ಆಗೆಲ್ಲಾ ಮನೆಗೆ ಬಂದವರು, ‘ಇದೇನು ಮನೆಯೋ ಪೇಯಿಂಟ್ ಫ್ಯಾಕ್ಟರಿಯೋ ಎಂದು ಆಡಿಕೊಳ್ಳುತ್ತಿದ್ದಿದ್ದೂ ಇತ್ತು.

ಇನ್ನೂ ಪೂರ್ತಿಯಾಗಿ ಬೆಳಕಾಗಿಲ್ಲ. ಮಬ್ಬು ಹೊದ್ದು ಸುರಿವ ಸೋನೆಯಲ್ಲೂ ಈ ಕೋಗಿಲೆಗಳು ಒಂದೇಸಮನೆ ಅರುಚುತ್ತಿವೆ. ಕಾಗೆ ಶಾಖಕ್ಕೆ ಹುಟ್ಟಿದವು, ವಸಂತ ಕಳೆದ ಮೇಲೆ ಹೆಚ್ಚೂಕಡಿಮೆ ಕಾಗೆಯ ಹಾಗೇ ಅರಚುತ್ತವೆ. ಹಿತವಾದ ಚಳಿಯಿದೆ, ಇನ್ನೊಂದಷ್ಟು ಹೊತ್ತು ಬೆಚ್ಚಗೆ ಹೊದ್ದು ಮಲಗೋಣ ಎಂದರೆ ಈ ಕೋಗಿಲೆಗಳ ಅರಚಾಟ. ಕೋಗಿಲೆ ಸಂತತಿಯನ್ನೇ ಶಪಿಸುತ್ತಾ ಎದ್ದು ಕನ್ನಡಿಯ ಮುಂದೆ ನಿಂತೆ. ಹೊಟ್ಟೆ ತುಸು ಕೆಳಕ್ಕೆ ಇಳಿದಿದೆಯೇನೋ ಎನಿಸಿತು. ಈಗ ಈ ಹೊಟ್ಟೆಯ ಚಿಂತೆ ಏಕೆ ಎಂದುಕೊಂಡು ಬಚ್ಚಲಿಗೆ ಹೋಗಿ ಗೀಸರ್ ಆನ್ ವಾಡಿ ಬಿಸಿಬಿಸಿ ನೀರಿನ ಸ್ನಾನ ಮುಗಿಸಿ ಬಂದೆ.

ಕಿಟಕಿಯಿಂದ ಬೀಸುತ್ತಿರುವ ಗಾಳಿಗೆ ಬಿಸಿನೀರಿನ ಸ್ನಾನದ ಬಿಸಿಯು ಆರಿ ಹೋಗುತ್ತಿದೆ. ಚಳಿಚಳಿ ಎನಿಸಿ ಸುತ್ತಿಕೊಂಡಿದ್ದ ಟವೆಲ್ ಅನ್ನು ಇನ್ನಷ್ಟು ಗಟ್ಟಿಯಾಗಿ ಅವುಚಿಕೊಂಡೆ. ನೆಂದ ಟವೆಲ್ ಚಳಿಗಾಳಿಯನ್ನು ಹೀರಿ ಮತ್ತಷ್ಟು ಚಳಿಯಾಗಿಸುತ್ತಿದೆ. ಮೈ ನಡುಗಲು ಶುರುವಾಯಿತು. ಹಲ್ಲುಗಳು ಕಟಕಟ ಸದ್ದು ವಾಡುತ್ತಾ ಅದುರಲು ಶುರುವಿಟ್ಟುಕೊಂಡವು. ಈ ಚಳಿಯ ಬಗ್ಗೆಯು ಸಿಟ್ಟು ಬರುತ್ತಿದೆ. ಕೊರೆವ ಈ ಚಳಿಯನ್ನು ಬೆತ್ತಲೆಯಲ್ಲಿ ಹೀರಿ ಹಾಕಿ ಬಿಡಬೇಕೆಂದು ಸುತ್ತಿಕೊಂಡಿದ್ದ ಟವೆಲ್ ಕಿತ್ತು ಹಾಕಿದೆ. ಬೆತ್ತಲಾಗಿ ಬಂದು ಕಿಟಕಿಗೆ ಹತ್ತಿರವಾಗಿ ನಿಂತೆ. ಮೈಯ ರೋಮರೋಮದ ಕಣದೊಳಕ್ಕೂ ಚಳಿಯನ್ನು ತೀಡುವಂತೆ ಗಾಳಿ ಸುಂಯ್ಯನೆ ಬೀಸುತ್ತಿದೆ. ಇಳಿಬಿದ್ದ ಮೊಲೆಗಳು ಚಳಿಗೆ ಬಿಗಿದುಕೊಳ್ಳುತ್ತಿವೆ. ಜೋಲಿದ್ದ ಹೊಟ್ಟೆ ಚಳಿಯ ನಡುಕಕ್ಕೆ ಬಿಗಿದು ಗಟ್ಟಿಯಾಗುತ್ತಿದೆ. ಕನ್ನಡಿ ಕಡೆಗೆ ತಿರುಗಿದೆ.

ನಡುವಯಸ್ಸಿನ ಈ ದೇಹ. ವಾದಕವೂ ಅಲ್ಲ, ಮೋಹಕವೂ ಅಲ್ಲ. ಮೂರು ಮಕ್ಕಳಿಂದ ಬಿರಿದುಕೊಂಡ ಕಲೆಗಳು ಹೊಟ್ಟೆಯ ಮೇಲೆ ಸೀಳುಸೀಳಾಗಿ ಕಾಣುತ್ತಿವೆ. ಹೆಣ್ಣಿನ ಮೋಹಕ ಬೆತ್ತಲೆ ಚಿತ್ರ ಬರೆಯುವುದರಲ್ಲೇ ಈ ಗಂಡು ಕಲಾವಿದರಿಗೆ ಚಟ ಹೆಚ್ಚು. ಯಾಕೆ ಇವರೆಲ್ಲಾ ನಡುವಯಸ್ಸಿನ ಹೆಂಗಸರು, ಮುದುಕಿಯರ ಬೆತ್ತಲೆ ಚಿತ್ರಗಳನ್ನು ಹೆಚ್ಚು ಬರೆಯುವುದಿಲ್ಲ. ಹರೆಯದಂತೆ ಎಲ್ಲಾ ವಯಸ್ಸಿಗೂ ಅದರದ್ದೇ ಆದ ಬಣ್ಣ, ರುಚಿ, ಹೊಳಪು, ಕನಸುಗಳು ಇರುತ್ತವಲ್ಲಾ?.. ಅಥವಾ ನಡುವಯಸ್ಸು ದಾಟಿದ ಹೆಂಗಸರ ಬೆತ್ತಲೆ ಚಿತ್ರಗಳಿಗೆ ಈಗ ಮಾರ್ಕೆಟ್ ಇಲ್ಲವೋ ಹೇಗೆ? ಅದರಲ್ಲೂ ಬೆತ್ತಲೆ ಚಿತ್ರಗಳು ಎಂದಾಗ ಅವುಗಳಲ್ಲಿ ಹೆಂಗಸರ ಚಿತ್ರಗಳೇ ಹೆಚ್ಚು. ಗಂಡು ಬೆತ್ತಲನ್ನೂ ಚಿತ್ರಿಸಬಹುದು. ಆದರೆ, ಅಂಥ ಚಿತ್ರಗಳು ಕಡಿಮೆ.

ಈ ಗಂಡು ಬೆತ್ತಲೆಗೂ ನಡುವಯಸ್ಸು ಕಳೆದ ಹೆಂಗಸರ ಬೆತ್ತಲೆಯಂತೆ ಮಾರ್ಕೆಟ್ ಇಲ್ಲವೋ ಏನೋ? ಹೆಣ್ಣಿನ ಬೆತ್ತಲೆಯ ಬೇರೆ ಬೇರೆ ಭಂಗಿ, ಬೇರೆ ಬೇರೆ ಭಾವ, ಬೇರೆ ಬೇರೆ ದೇಹಾಕಾರದ ಚಿತ್ರಗಳನ್ನು ಬರೆಯುತ್ತಾರಲ್ಲಾ ಅದೇ ರೀತಿ ಗಂಡಸರ ಬೆತ್ತಲೆ ಚಿತ್ರಗಳನ್ನೂ ಬರೆಯಬೇಕೆಂಬುದು ನನ್ನ ಎಷ್ಟೋ ವರ್ಷಗಳ ತಲೆಹುಳ. ಆದರೆ, ಅದೇಕೋ ಮನಸ್ಸು ಹಿಂದೇಟು ಹಾಕುತ್ತದೆ. ಹೆಣ್ಣು ಪೇಂಟರ್ ಅಂಥ ಚಿತ್ರಗಳನ್ನು ಬರೆದರೆ, ಅವು ಪ್ರದರ್ಶನಗೊಂಡರೆ ಜನ ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೋ ಎಂಬ ಒಳಗಿನ ಅಂಜಿಕೆಯೇನೋ? ಪಿಕಾಸೊನ ‘ಹೊಮ್ಯೆ ಫಾಮ್ ನು’ ಕಲಾಕೃತಿಯ ಬೆತ್ತಲೆ ಗಂಡು ಇದ್ದಾನಲ್ಲಾ ಅಂಥ ಚಿತ್ರಗಳನ್ನು ಬರೆಯಬೇಕು. ಪ್ರದರ್ಶನಕ್ಕಲ್ಲದಿದ್ದರೂ ಒಳಗಿನ ಒತ್ತಡಕ್ಕಾದರೂ ಬರೆಯಬೇಕು. ನಾನು ಸತ್ತ ಮೇಲಾದರೂ ಅವು ಪ್ರದರ್ಶನ ಕಾಣಬಹುದೇನೋ, ಜನ ಆಗ ಅವನ್ನು ಮೆಚ್ಚಿಕೊಳ್ಳಬಹುದೇನೋ,ಯಾರಿಗೆ ಗೊತ್ತು. ಆಗ ಅವುಗಳ ಬಗ್ಗೆ ಜನ ಏನು ವಾತಾಡಿಕೊಂಡರೆ ಏನಂತೆ, ಈ ತಿಕ್ಕಲು ಕಲಾ ವಿಮರ್ಶಕರು ಅನಿಸಿಕೊಂಡವರು ಆಗ ಬೇಕಾದ್ದು ವಾತಾಡಿಕೊಳ್ಳಲಿ, ಕೇಳಿಸಿಕೊಳ್ಳುವುದಕ್ಕೆ ನಾನಂತೂ ಇರುವುದಿಲ್ಲ. ಅಲ್ಲದೇ, ಮನುಷ್ಯನ ನಿಜ ಹೆಚ್ಚೆಚ್ಚು ತೆರೆದುಕೊಳ್ಳುವುದು ಬೆತ್ತಲಲ್ಲೇ ತಾನೆ.

ಇವನು ಇನ್ನೂ ಹಾಸಿಗೆ ಮೇಲೇ ಇದ್ದಾನೆ. ಇವನ ತಲೆಯಷ್ಟೇ ಅಲ್ಲ, ಎದೆಯ ಮೇಲಿನ ಕೂದಲುಗಳೂ ಈಗ ಬೆಳ್ಳಗಾಗಿಹೋಗಿವೆ. ವಯಸ್ಸಾಗಿದೆ. ಆದರೂ ಅದನ್ನು ತೋರಗೊಡದಂತೆ ನಿಭಾಯಿಸುವುದರಲ್ಲಿ ಇವನಿಗೆ ಇವನೇ ಸಾಟಿ. ಒಂದು ದಿನವೂ ಇವನು ಶೇವ್ ವಾಡಿಕೊಳ್ಳದೆ ಮನೆಯಿಂದ ಹೊರಗೆ ಕಾಲಿಟ್ಟವನಲ್ಲ. ಡಾಕ್ಟರ್ ಶಿಸ್ತು ಎಂದರೆ ಇದೇ ಇರಬೇಕು. ಆದರೆ ನಾನು ಹಾಗಲ್ಲ. ಶಿಸ್ತಿಗೂ ನನಗೂ ಅಷ್ಟು ದೂರ. ಅಚ್ಚುಕಟ್ಟಾಗಿರಬೇಕು ನಿಜ. ಆದರೆ, ಶಿಸ್ತನ್ನು ಹೇರಿಕೊಂಡು ಅದನ್ನು ವ್ಯಸನ ವಾಡಿಕೊಳ್ಳುವುದು ನನಗೆ ಆಗಿ ಬರಲ್ಲ. ಮಕ್ಕಳೂ ಅಷ್ಟೇ. ಎಷ್ಟು ಬೇಕೋ ಅಷ್ಟೇ ಶಿಸ್ತು. ಮಗಳು ಈಗಿನ್ನೂ ಬಿಟೆಕ್ ಮುಗಿಸಿ ಅದ್ಯಾವುದೋ ಕಂಪೆನಿ ಸೇರಿದ್ದಾಳೆ. ‘ಇನ್ನೂ ಮುಂದೆ ಓದು’ ಎಂದು ಅವರಪ್ಪ ಎಷ್ಟು ಹೇಳಿದರೂ ಕೇಳದೆ ಕ್ಯಾಂಪಸ್ ಸೆಲೆಕ್ಷನ್‌ಗೆ ಬಂದಿದ್ದ ಕಂಪೆನಿಗೇ ಅಗ್ರಿಮೆಂಟ್ ವಾಡಿಕೊಂಡು ಬಿಟ್ಟಿದ್ದಾಳೆ. ಕಾಲೇಜು ದಿನಗಳಲ್ಲಿ ಬೆಳಿಗ್ಗೆ ಐದಕ್ಕೇ ಏಳುತ್ತಿದ್ದವಳು ಕೆಲಸಕ್ಕೆ ಸೇರಿದ ಮೇಲೆ ಸ್ವಲ್ಪ ತಡ ವಾಡಿ ಏಳುತ್ತಾಳೆ. ಓದುವ ವಯಸ್ಸು ಮುಗಿಯಿತಲ್ಲಾ, ಇನ್ನು ಹಾಗೇ. ಮೊದಲು ಡ್ರಾಯಿಂಗ್ ವಾಡುತ್ತಿದ್ದ ಇವಳು ಆಮೇಲೆ ಯಾಕೋ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಚಿಕ್ಕವಳಿದ್ದಾಗ ನಾನು ಪೇಂಟಿಂಗ್ ವಾಡುತ್ತಿದ್ದರೆ ಬಂದು ಕೈ ಮೈಗೆಲ್ಲಾ ಬಣ್ಣ ಬಳಿದುಕೊಂಡು ಆಟವಾಡುತ್ತಿದ್ದಳು. ಇವಳು ಚಿಕ್ಕವಳಿದ್ದಾಗಂತೂ ಮನೆಯ ಯಾವ ಗೋಡೆ ನೋಡಿದರೂ ಬಣ್ಣದ ನೂರಾರು ಪುಟ್ಟ ಪುಟ್ಟ ಅಂಗೈ ಅಚ್ಚುಗಳು, ಮನೆಯ ತುಂಬಾ ಬಣ್ಣಗಳು. ನಾವು ಮಲಗುವ ಕೋಣೆಯ ತುಂಬಾ ಇವಳ ಅಂಗೈ ಅಚ್ಚುಗಳು, ಬಣ್ಣದ ಬರೆಗಳೇ. ಆಗೆಲ್ಲಾ ಮನೆಗೆ ಬಂದವರು, ‘ಇದೇನು ಮನೆಯೋ? ಪೇಯಿಂಟ್ ಫ್ಯಾಕ್ಟರಿಯೋ?’ ಎಂದು ಆಡಿಕೊಳ್ಳುತ್ತಿದ್ದಿದ್ದೂ ಇತ್ತು. ಅವಳ ಆಟದಿಂದ ಮೂಡಿದ ಒಂದು ಗೋಡೆ, ಅಗೋ ಅಲ್ಲಿ ಕಾಣುತ್ತಿದೆಯಲ್ಲಾ ಆ ಗೋಡೆ ಇನ್ನೂ ಹಾಗೆಯೇ ಉಳಿದಿದೆ ನೋಡಿ. ಸಣ್ಣಸಣ್ಣ ನೂರಾರು ಅಂಗೈ ಅಚ್ಚುಗಳು, ಅವುಗಳೊಳಗೆ ಸಾವಿರಾರು ಬಣ್ಣಗಳು, ಅವುಗಳಿಗೆ ಕೋಟಿಕೋಟಿ ಕನಸುಗಳು. ಇಡೀ ಅರ್ಧ ಗೋಡೆಯ ಒಂದು ಕಲಾಕೃತಿಯಂತೆ ಕಾಣುತ್ತಿದೆ. ಅವಳಪ್ಪನಿಗೂ ಇದು ಇಷ್ಟ. ಮನೆಗೆ ಪೇಂಟಿಂಗ್ ವಾಡಿಸುವಾಗೆಲ್ಲಾ, ‘ಆ ಗೋಡೆಗೂ ಪೇಯಿಂಟ್ ವಾಡಿಸ್ಬಿಡು ಡ್ಯಾಡಿ. ಅದು ಈಗ ಚೆನ್ನಾಗಿ ಕಾಣಲ್ಲಾ, ಲುಕ್ಸ್ ಲೈಕ್ ಶಿಷ್’ ಎಂದು ಅವರಪ್ಪನನ್ನು ಕಾಡುತ್ತಾಳೆ. ಆದರೂ ಅವಳಪ್ಪನಿಗೆ ಅದರ ಮೇಲೆ ಎಂಥದ್ದೋ ಮೋಹ. ನನ್ನ ಪೇಂಟಿಂಗ್‌ಗಳ ಬಗ್ಗೆ ಹೆಚ್ಚು ವಾತನಾಡದ ಅವನು ಮಗಳ ಆಟದಿಂದ ಮೂಡಿದ ಈ ಬಣ್ಣ ಬಣ್ಣದ ಚಿತ್ತಾರಕ್ಕೆ ನೂರಾರು ಬಗೆಯ ವ್ಯಾಖ್ಯಾನ ವಾಡುತ್ತಾನೆ.

ಮಗಳನ್ನು ಡಾಕ್ಟರ್ ಮಾಡಿಸಬೇಕೆಂದು ಆಸೆಯಿತ್ತು ಇವನಿಗೆ. ಆದರೆ, ಇವಳು ಚಿಕ್ಕವಳಿದ್ದಾಗ ಆಟಕ್ಕೂ ಕೂಡ ಸ್ಟೆತಸ್ಕೋಪ್ ಮುಟ್ಟುತ್ತಿರಲಿಲ್ಲ. ಆಟವಾಡಿಸಲು ಅವರಪ್ಪ ಸ್ಟೆತಸ್ಕೋಪ್ ಅನ್ನು ಇವಳ ಕೊರಳಿಗೆ ಹಾಕಿದರೆ ಮೈ ಮೇಲೆ ಹಾವು ಬಿದ್ದಂತೆ ಕಿಟಾರನೆ ಚೀರುತ್ತಿದ್ದಳು. ಆದರೆ, ನನ್ನ ಬ್ರಷ್, ಪೆನ್ಸಿಲ್, ಡ್ರಾಯಿಂಗ್ ಶೀಟ್ ಜತೆಗೆ ಆಗಿನಿಂದಲೂ ಏನೋ ಸಲುಗೆ. ಇದನ್ನು ಕಂಡು ಇವನು ಒಮ್ಮೆ ಹೇಳಿದ್ದ ಕೂಡ ‘ಇವಳೂ ನಿನ್ನ ಹಾಗೇ ಪೇಂಟರ್ ಆಗೋಳೆ’.

ಹೈಸ್ಕೂಲು ಮುಗಿಯುವವರೆಗೂ ಅದೆಷ್ಟೋ ಡ್ರಾಯಿಂಗ್‌ನಲ್ಲಿ ಕಾಂಪಿಟೇಷನ್‌ಗಳಲ್ಲಿ ಬಹುವಾನ ಗೆದ್ದು ತಂದಿದ್ದಳು. ಆದರೆ, ಕಾಲೇಜಿಗೆ ಸೇರಿದ ಮೇಲೆ ಏಕಾಏಕಿ ಅದರಿಂದ ದೂರಾಗಿಬಿಟ್ಟಳು. ನಾವೂ ಆ ಬಗ್ಗೆ ಅವಳನ್ನು ಹೆಚ್ಚು ಕೇಳಲಿಲ್ಲ. ‘ಸದ್ಯ ಇವಳು ಪೇಂಟರ್ ಆಗಲಿಲ್ಲ’ ಎಂದು ಇವಳ ಡಾಕ್ಟರಪ್ಪ ಒಳಗೇ ಸವಾಧಾನದ ಉಸಿರು ಬಿಟ್ಟಿರಬೇಕು.

ಮಗ ಇನ್ನೂ ಹೈಸ್ಕೂಲು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲ ಅವನಿಗೆ. ಆದರೆ, ತಬಲಾ ಎಂದರೆ ಅವನಿಗೆ ಪ್ರಾಣ. ದಿನಕ್ಕೆ ನಾಲ್ಕು ಗಂಟೆ ತನ್ನ ರೂಮಿನಲ್ಲಿ ರಿವೈಜ್ ವಾಡುತ್ತಾನೆ. ಅವನ ಗುರುಗಳು ಹೇಳಿಕೊಟ್ಟ ಪಾಠವನ್ನು ಒಂಚೂರೂ ತಪ್ಪಿಲ್ಲದಂತೆ ಒಪ್ಪಿಸುತ್ತಾನೆ. ಅವನು ತಬಲಾ ಕಲಿಯಲು ಶುರು ವಾಡಿದ್ದು ಐದೋ ಆರೋ ಕ್ಲಾಸಿನಲ್ಲಿದ್ದಾಗ. ಈಗ ಒಂಬತ್ತನೇ ಕ್ಲಾಸ್. ಅಂದರೆ ಹೆಚ್ಚೂ ಕಮ್ಮಿ ಮೂರ್ನಾಲ್ಕು ವರ್ಷ ತರಬೇತಿ ನಡೆದಿದೆ. ಅದಕ್ಕೇ ಬೆರಳುಗಳು ಅವನು ಹೇಳಿದ ಹಾಗೆ ತಬಲಾದ ಮೇಲೆ ಆಡುತ್ತವೆ. ಆದರೆ ಪಡಂತ್ ಬೋಲ್ ಹೇಳುವುದರಲ್ಲಿ ತೊಡರುತ್ತಾನೆ.

‘ಇಷ್ಟು ವರ್ಷ ಕಲಿತರೂ ‘ತಾ ತೆರೆಕಿಟತಕ ತಕ್ಡಾನ್’ ಹೇಳೋಕೆ ಬರೋದಿಲ್ಲ’ ಎಂಬುದು ಅವನ ಗುರುವಿನ ಗೊಣಗಾಟ.
‘ನುಡಿಸುವುದರಲ್ಲಿ ಇರೋ ಫಾಸ್ಟ್, ಪಡಂತ್ ಹೇಳೋದ್ರಲ್ಲೂ ಬರಬೇಕು. ಇಲ್ಲಾಂದ್ರೆ ಬರೀ ಸಾಥೀ ಆಗಿ ಉಳ್ಕೋಬೇಕಾಗುತ್ತೆ. ಸೋಲೋ ಆರ್ಟಿಸ್ಟ್ ಆಗಬೇಕು ಅಂದ್ರೆ ಒಳ್ಳೆ ಚಂದಕ್ಕೆ ಪಡಂತ್ ಹೇಳೋದು ಬರ್ಲೇಬೇಕು’.

ಅವರು ಹೇಳೋದೂ ನಿಜ. ಆದರೆ, ಇವನಿಗೆ ಸರಿಯಾಗಿ ನಾಲಿಗೆಯೇ ಹೊರಳದು. ಅದು ಈಗಿನ ಸಮಸ್ಯೆಯಲ್ಲ. ಚಿಕ್ಕಂದಿನಿಂದಲೂ ಹಾಗೇ. ರ- ಲ, ಡ- ದ, ಣ- ನ, ಳ- ಲ ಉಚ್ಚಾರಗಳ ಸಮಸ್ಯೆ ಇದೆ ಇವನಿಗೆ. ಇದಕ್ಕಾಗಿ ಯಾವ್ಯಾವುದೋ ಕ್ಲಾಸ್‌ಗೆ ಹೋಗಿದ್ದೂ ಆಯಿತು, ದಿನಾ ಬೆಳಿಗ್ಗೆ ಉಪ್ಪಿಂದ ನಾಲಿಗೆ ತಿಕ್ಕಿಸಿದ್ದೂ ಆಯಿತು. ಯಾರೋ ಹೇಳಿದರು ಎಂದು ಅವರಪ್ಪನಿಗೆ ಗೊತ್ತಾಗದ ಹಾಗೆ ಗುಬ್ಬಚ್ಚಿ, ಪಾರಿವಾಳದ ಹಸಿರಕ್ತವನ್ನು ಬಲವಂತದಿಂದ ಕುಡಿಸಿದ್ದೂ ಆಯಿತು. ಏನು ಮಾಡಿದರೂ ಅವನ ಮಾತೊಂದು ದಾರಿಗೆ ಬರುತ್ತಿಲ್ಲ. ‘ದೊಡ್ಡವನಾದ ಮೇಲೆ ಸರಿ ಹೋಗುತ್ತೆ ಬಿಡು’ ಅನ್ನುತ್ತಿದ್ದ ಅವರಪ್ಪ. ಆದರೆ, ದೊಡ್ಡವನಾದ ಮೇಲೂ ಅದೇ. ಏನೇನು ವಾಡಿದರೂ ಅವನ ಮಾತು ಮಾತಿಗೆ ಕೂರುತ್ತಿಲ್ಲ.
‘ತಬಲಾ ಗಿಬಲಾ ಎಲ್ಲಾ ಸದ್ಯಕ್ಕೆ ಸಾಕು. ಓದೋ ಕಡೇ ಗಮನ ಕೊಡು. ಡಾಕ್ಟರ್ ಮಗ ತರ್ಡ್ ಕ್ಲಾಸ್ ಅಂದ್ರೆ ಕೇಳಿಸಿಕೊಳ್ಳೋಕೂ ಚೆನ್ನಾಗಿರಲ್ಲ’

ಇವರಪ್ಪನ ಗೊಣಗಾಟದಲ್ಲೂ ಸತ್ಯವಿದೆ. ಈಗಿನ ಮಕ್ಕಳಂತೆ ಮೊಬೈಲ್ ಹಿಡಿದು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗೆ ಅಂಟಿಕೊಂಡಿಲ್ಲ ಇವನು. ಆದರೆ, ತಬಲಾದ ಆಸಕ್ತಿ ಸ್ಕೂಲಿನ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ.
‘ಸಂಗೀತ, ಚಿತ್ರ ಇವೆಲ್ಲಾ ಕಲೆಯಾಗಿ ಅಷ್ಟೇ ಚೆಂದ. ಹೊಟ್ಟೆ ಪಾಡಿಗಾಗಿ ಇವನ್ನೆಲ್ಲಾ ನೆಚ್ಚಿಕೊಳ್ಳೋಕೆ ಆಗೋಲ್ಲ’ ಎನ್ನುವ ಅವರಪ್ಪನ ವಾತನ್ನು ಇವನು ಅದೆಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾನೋ ಏನೋ ಗೊತ್ತಿಲ್ಲ. ಹೊಟ್ಟೆಪಾಡಿಗಾಗಿ ಅಂತ ದುಡಿಯಾಬೇಕಾದ ಅಗತ್ಯವೂ ಅವನಿಗಿಲ್ಲ. ಅವನಿಗೆ ಅವನ ಕಲೆಯ ಬಗ್ಗೆಯೇ ಹೆಚ್ಚು ಹುಚ್ಚು.
ಅವರವರ ಹುಚ್ಚು ಅವರವರಿಗೆ ಹೆಚ್ಚು. ಈಗ ನನಗೆ ಬೆತ್ತಲಾಗುವ ಹುಚ್ಚು. ಕಿಟಕಿಯಿಂದ ಬೀಸುತ್ತಿರುವ ಗಾಳಿಯ ಜತೆಗೆ ಬೆಳಕೂ ಇಷ್ಟಿಷ್ಟೇ ಹೆಚ್ಚುತ್ತಿದೆ. ಕಿಟಕಿ ಮುಚ್ಚಿ ಬಂದು ಬಟ್ಟೆ ಹಾಕಿಕೊಂಡು ತಾಂರಾಗುವಷ್ಟರಲ್ಲಿ ಗಂಡನ ಅಲಾರ್ಮ್ ಬಡಿದುಕೊಂಡಿತು. ಎದ್ದವನು, ‘ಗುಡ್ ವಾರ್ನಿಂಗ್. ಇಷ್ಟ್ ಬೇಗ ರೆಡಿಯಾಗಿದ್ದೀ?ಯಾ’ ಎಂದ.

‘ಬೇಗ ಅಲ್ಲ ಆಗಲೇ ಏಳಾಯಿತು ಗೆಟ್ ರೆಡಿ ಫಾಸ್ಟ್’ ಎಂದೆ. ಹಾಕಿಕೊಂಡಿರುವ ಜೀನ್ಸ್ ಯಾಕೋ ಸೊಂಟ ಬಿಗಿಯುತ್ತಿದೆ ಎನಿಸಿತು. ದಪ್ಪಗಾಗಿದ್ದೀನೇನೋ ಎಂದು ಮತ್ತೆ ಕನ್ನಡಿ ಮುಂದೆ ಹೋಗಿ ನೋಡಿಕೊಂಡೆ, ಮಂಚದ ಕೆಳಕ್ಕೆ ದೂಡಿದ್ದ ಸ್ಕೇಲ್ ತೆಗೆದು ನಿಂತೆ. ಮೂರಂಕಿಗೆ ಇನ್ನೇನು ಹತ್ತಿರದಲ್ಲೇ ಇದ್ದೇನೆ. ಹೌದು. ಹೊಟ್ಟೆ ಯಾಕೋ ಇತ್ತೀಚೆಗೆ ಜೋಲು ಬಿದ್ದು ಉಬ್ಬಿಕೊಳ್ಳುತ್ತಿದೆ. ಮುಂದಿನ ವಾರದಿಂದ ಯೋಗ ಕ್ಲಾಸಿಗಾದರೂ ಹೋಗಬೇಕು. ಅರೆ, ಈ ವಯಸ್ಸಲ್ಲಿ ಮೈ ಮಾಟದ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿದ್ದೇನಲ್ಲ. ನಡುವಯಸ್ಸಿನ ಈ ಹೆಂಗಸನ್ನು ಇನ್ನು ಈಗ ಯಾರು ನೋಡಬೇಕು? ಯಾರು ನೋಡಬೇಕು ಎಂದು ಅಲ್ಲ, ಆರೋಗ್ಯದ ದೃಷ್ಟಿಯಿಂದಾದರೂ ಬೊಜ್ಜು ಕರಗಿಸಬೇಕು. ಸಾಯುವ ವಯಸ್ಸಲ್ಲಿ ಎತ್ತಿ ಇಳುಕಲು ಮತ್ತೊಬ್ಬರಿಗೆ ಕಷ್ಟವಾಗಬಾರದಲ್ಲ. ಇದೆಲ್ಲಾ ಬರೀ ವರಾತ. ನಾನು ಚೆನ್ನಾಗಿ ಕಾಣಬೇಕು. ಅದಕ್ಕಾಗಿಯಾದರೂ ಬೊಬ್ಬು ಕರಗಿಸಬೇಕು. ಯಾರಿಗಾಗಿ ಯಾಕೆ ನಾನು ನನ್ನನ್ನೇ ನೋಡಿಕೊಳ್ಳಲೂ ಚೆನ್ನಾಗಿರಬೇಕಲ್ಲ.
ಇವನು ರೆಡಿಯಾಗುಷ್ಟರಲ್ಲಿ ಮಕ್ಕಳನ್ನು ಎಬ್ಬಿಸೋಣ ಎಂದುಕೊಂಡೆ. ಆದರೆ, ಅವರಿಬ್ಬರೂ, ‘ನಾವು ಬರೋಲ್ಲ. ನೀವೇ ಹೋಗಿ ಬನ್ನಿ’ ಎಂದು ನಿನ್ನೆಯೇ ಕಡ್ಡಿ ತುಂಡು ಮಾಡಿ ಆಗಿದೆ.
ಎರಡು ಕಪ್ ಕಾಫಿಯ ಜತೆಗೆ ಎರಡು ಟೋಸ್ಟ್ ಅನ್ನು ಡೈನಿಂಗ್ ಟೇಬಲ್ ಮೇಲಿಡುವುದಕ್ಕೂ ಇವನು ರೆಡಿಯಾಗಿ ಬರುವುದಕ್ಕೂ ಸರಿಯಾಯಿತು. ‘ಮಕ್ಕಳಿಗೆ ಏನು ವಾಡಿದ್ದೀಯ. ಇವತ್ತು ಸಂಡೇ, ಕೆಲಸದವಳು ಬೇರೆ ರಜೆ’ ಎಂದ ಇವನು ಕಾಫಿ ಹೀರುತ್ತಾ.

‘ರಾತ್ರಿನೇ ಸ್ಯಾಂಡ್‌ವಿಚ್‌ಗೆ ರೆಡಿ ವಾಡಿಟ್ಟಿದ್ದೀನಿ. ಅವರ ತಿಂಡಿಗೆ ಅಷ್ಟು ಸಾಕು. ಹೇಗೂ ಮಧ್ಯಾಹ್ನ ನಮ್ಮ ಊಟ ರೆಸ್ಟೊರಂಟ್‌ನಲ್ಲೇ ಆಗುತ್ತಲ್ಲಾ, ಅಲ್ಲಿಂದಲೇ ಇವ್ರಿಗೂ ಏನಾದ್ರೂ ತಂದರಾಯಿತು’ ಎಂದೆ. ಇಬ್ಬರೂ ಕಾಫಿ ಕುಡಿದು, ಟೋಸ್ಟ್ ಮುಗಿಸಿ ಹೊರಟೆವು.ಕಾರಿನಲ್ಲಿ ಹೋಗುವಾಗ ಕನ್ನಡಿಯಲ್ಲಿ ಕಂಡ ನನ್ನದೇ ಬಿಂಬದ ತುಟಿಗೆ ಲಿಪ್‌ಸ್ಟಿಕ್ ಹೆಚ್ಚೇ ಆಯಿತು ಎನಿಸಿತು. ಡೈ ಮಾಡಿದ್ದರೂ ಕಪ್ಪೊಳಗಿಂದ ಇಣುಕುವ ಬಿಳಿ ಕೂದಲ ಬುಡ ಅಸಹ್ಯವಾಗಿ ಕಂಡಿತು. ವಯಸ್ಸಾಗುತ್ತಿದೆ ನಿಜ. ಆದರೆ, ವಯಸ್ಸಾದವರು ಮೇಕಪ್ ವಾಡಿಕೊಳ್ಳಬಾರದೆ? ಕೂದಲಿಗೆ ಬಣ್ಣ ಹಾಕಿಕೊಳ್ಳಬಾರದೆ? ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ಮೈ ಮನಸ್ಸನ್ನು ಗೆಲುವಾಗಿಯೇ ಇಟ್ಟುಕೊಳ್ಳಬೇಕು. ಇರುವುದು ಇದೊಂದೇ ಜನ್ಮ. ಆದರೂ, ವಯಸ್ಸನ್ನು ಪೂರ್ತಿಯಾಗಿ ಮರೆಸುವ ಶಕ್ತಿ ಯಾವ ಕ್ರೀಮು, ಸೋಪು, ಆಯಿಲ್‌ಗಳಿಗೂ ಇಲ್ಲ.

ಕಾರು ಓಡಿಸುವಾಗ ಇವನ ವಾತು ಕಡಿಮೆ. ಕಡಿಮೆ ಎಂದರೂ ತಪ್ಪೇ, ವಾತು ಇಲ್ಲವೇ ಇಲ್ಲ ಎನ್ನುವುದೇ ಸರಿ. ಮ್ಯೂಸಿಕ್ ಸಿಸ್ಟಮ್ ಆನ್ ವಾಡಲೂ ಬಿಡುವುದಿಲ್ಲ. ‘ಡ್ರ್ತ್ಯೈವಿಂಗ್‌ನಲ್ಲಿರುವಾಗ ಗಮನ ಪೂರ್ತಿ ರೋಡ್ ಮೇಲೇ ಇರಬೇಕು. ಒಂದು ಕ್ಷಣ ಯಾಮಾರಿದ್ರೆ ಅಷ್ಟೇ’ ಎನ್ನುತ್ತಾನೆ. ಡಾಕ್ಟರ್ ಆಗಿ ಜೀವದ ಬೆಲೆ ಚೆನ್ನಾಗಿ ಗೊತ್ತು ಅವನಿಗೆ. ಅವನು ಹೇಳುವುದೂ ನಿಜ. ಒಂದು ಕ್ಷಣ ಯಾಮಾರಿದ್ರೆ ಅಷ್ಟೇ, ಅದು ರೋಡಿನಲ್ಲೂ, ಬದುಕಿನಲ್ಲೂ.ಮನೆಯಿಂದ ಹೊರಟ ಸುವಾರು ಅರ್ಧ ಗಂಟೆಯಲ್ಲಿ ಗ್ಯಾಲರಿಗೆ ಬಂದೆವು. ಭಾನುವಾರವಾದ್ದರಿಂದ ಟ್ರಾಫಿಕ್ ಹೆಚ್ಚಾಗಿರಲಿಲ್ಲ. ಉಳಿದ ದಿನಗಳಲ್ಲಿ ಈ ಊರಿನ ಟ್ರಾಫಿಕ್ ಬಗ್ಗೆ ವಾತಾಡುವಂತೆಯೇ ಇಲ್ಲ. ಅದು ಟ್ರಾಫಿಕ್ ಅಲ್ಲ, ವಾಹನಗಳ ಪ್ರವಾಹ.

ಗ್ಯಾಲರಿಯೊಳಗೆ ಹೋದಾಗ ಮಕ್ಕಳು ಮತ್ತು ಅವರ ಮೆಂಟರ್‌ಗಳು ಕೈಗೆ ಬೊಕ್ಕೆ ಕೊಟ್ಟು ಆತ್ಮೀಯವಾಗಿ ಸ್ವಾಗತಿಸಿದರು. ಈ ಮಕ್ಕಳನ್ನು ನೋಡಿದಾಗ ನನ್ನ ಮಕ್ಕಳಲ್ಲಿ ಒಬ್ಬರಿಗೂ ಬಣ್ಣದ ಗೀಳು ಹತ್ತಲಿಲ್ಲವಲ್ಲಾ ಎಂದು ಹೊಟ್ಟೆಯಲ್ಲಿ ಹುಳಿಹುಳಿಯಾಯಿತು. ಮಕ್ಕಳ ಚಿತ್ರಗಳ ಪ್ರದರ್ಶನದ ಉದ್ಘಾಟನೆಗೆಂದು ಒಂದು ರೇಖಾಚಿತ್ರ ಬಿಡಿಸಿದೆ. ಮಕ್ಕಳು ಅದನ್ನು ನೋಡಿ ಬೆರಗಾದರು. ಅವರ ಮೆಂಟರ್‌ಗಳು ಮಕ್ಕಳ ಕಿವಿಯಲ್ಲಿ ಕಿಸಿಪಿಸಿ ವಾಡುತ್ತಾ, ನಗುಮುಖ ವಾಡಿಕೊಂಡು ನನ್ನ ಚಿತ್ರದ ಬಗ್ಗೆ ಏನೇನೋ ಹೇಳುತ್ತಿದ್ದರು. ಉದ್ಘಾಟನೆ ಬಳಿಕ ಒಂದೊಂದೇ ಚಿತ್ರಗಳನ್ನು ನೋಡುತ್ತಾ ಹೋದೆ. ಮಕ್ಕಳ ಮನಸ್ಸು ಚಿತ್ರಗಳ ಮೂಲಕ ಹೇಗೆ ವ್ಯಕ್ತವಾಗುತ್ತದೆ ಎಂದು ಬೆರಗಾಯಿತು. ಕೆಲವು ಚಿತ್ರಗಳು ನಾನೂ ಬರೆಯಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಚೆನ್ನಾಗಿದ್ದವು. ಬಣ್ಣದ ಮಿಶ್ರಣ, ಬ್ರಷ್‌ನ ಬೀಸು, ವಸ್ತುವಿಗೆ ಬಣ್ಣಬಣ್ಣದ ಕೂಡುವಿಕೆ ಕೆಲವು ಚಿತ್ರಗಳಲ್ಲಿ ಅಚ್ಚರಿ ಹುಟ್ಟಿಸುವಂತಿತ್ತು.

ಮಕ್ಕಳಿಗೆ ಇಷ್ಟೆಲ್ಲಾ ಸಾಧ್ಯವೇ ಎನಿಸಿತು. ನಾನಂತೂ ಅಚಾನಕ್ ಕಲಾವಿದೆಯಾದವಳು. ಬಾಲ್ಯದಲ್ಲಿ ಪೆನ್ಸಿಲ್‌ನಿಂದ ಹಾಳೆಯ ಮೇಲೆ ಒಂದಷ್ಟು ಗೀಚುತ್ತಿದ್ದೆ ಬಿಟ್ಟರೆ ಚಿಕ್ಕಂದಿನಲ್ಲಿ ಬಣ್ಣಗಳೊಂದಿಗೆ ಇಂಥಾ ಪ್ರೋಂಗಗಳನ್ನು ವಾಡಿದ್ದಿಲ್ಲ. ಸ್ಕೂಲಿಗೆ ಹೋಗುವ ದಿನಗಳಲ್ಲಿ ಚಿತ್ರ ಬಿಡಿಸುವ ಬಗ್ಗೆ ಆಸಕ್ತಿ ಇದ್ದಿದ್ದು ನಿಜ. ಆದರೆ, ಆಮೇಲೆ ಅಪ್ಪ ನನ್ನನ್ನು ಬಲವಂತದ ಕಲಾವಿದೆ ವಾಡಿದ್ದ. ಮಗಳು ಹದಿನೇಳನೇ ವುಂಸ್ಸಿನಲ್ಲಿ ಮನೆಬಿಟ್ಟು ಹೋಗಿದ್ದಳು ಎಂಬುದನ್ನು ಮುಚ್ಚಿಕೊಳ್ಳಲು ರಾಯಲ್ ಸ್ಕೂಲ್‌ನಲ್ಲಿ ಪೇಂಟಿಂಗ್ ಕಲಿತವಳು ಎಂದು ಹೇಳಿಕೊಂಡು ತಿರುಗಿದ ಅಪ್ಪ. ಮರ್ಯಾದೆ ಎಂಬುದನ್ನು ಉಳಿಸಿಕೊಳ್ಳಲು ಮನುಷ್ಯ ಏನೇನೆಲ್ಲಾ ಸರ್ಕಸ್ ವಾಡುತ್ತಾನಲ್ಲಾ!

ಮಕ್ಕಳಿಗೆಲ್ಲಾ ಕೈ ಕುಲುಕಿ, ಭೇಷ್ ಹೇಳಿ, ಗ್ರೂಪ್ ಫೋಟೊ, ಸೆಲ್ಛಿಗಳೆಲ್ಲಾ ಮುಗಿದ ಮೇಲೆ ಅಲ್ಲಿಂದ ಹೊರಟೆವು. ಕಾರು ಹತ್ತಿದ ಮೇಲೆ, ‘ರೆಸ್ಟೋರಂಟ್‌ಗೆ ಹೋಗೋದು ಬೇಡ’ ಎಂದೆ.
‘ಯಾಕೆ?’ ಎಂಬಂತೆ ಮುಖ ನೋಡಿದ ಇವನು.
‘ಇನ್ನೂ ಟೈಮಿದೆ. ಮನೆಗೆ ಹೋಗೇ ಊಟ ವಾಡೋಣ’ ಎಂದೆ.
ಸಣ್ಣಗೆ ನಕ್ಕವನು ರಸ್ತೆಗೆ ಕಣ್ಣು ನೆಟ್ಟ. ಕಾರು ತನ್ನ ಪಾಡಿಗೆ ತಾನೆಂಬಂತೆ ರಸ್ತೆಯ ಮೇಲೆ ಓಡುತ್ತಿತ್ತು.

‘ಮಮ್ಮೀ ನಾನು ನಿನ್ನ ಜೊತೆ ಸ್ವಲ್ಪ ವಾತಾಡಬೇಕು. ಸಂಜೆ ಸೌತ್ ರೋಡ್‌ನಲ್ಲಿರೋ ಮ್ಯೂರಲ್ ಪಬ್‌ಗೆ ಬಾ’ ಮಗಳ ವಾಟ್ಸ್ ಆಪ್ ಸಂದೇಶ. ಇವಳಿಗೇನಾಗಿದೆ. ವಾತಾಡುವುದಿದ್ದರೆ ಮನೆಯಲ್ಲೇ ಮಾತಾಡಬಹುದಿತ್ತಲ್ಲಾ. ಮನೆಯಿಂದ ಹೊರಗೆ ವಾತನಾಡಬೇಕಾದ ಅಂಥ ಘನಂದಾರಿ ಮಾತೇನಿದೆ? ಎಂದು ಮಗಳ ಮೇಲೆ ಸ್ವಲ್ಪ ಸಿಟ್ಟು ಬಂತು. ‘ಏನೋ’ ವಾತನಾಡಬೇಕು ಅಂದಳಲ್ಲಾ ಆ ‘ಏನೋ’ ಎಂಬುದು ಏನು? ಇವಳು ಇನ್ನೇನು ಗಡಬಡ ವಾಡಿಕೊಂಡಿದ್ದಾಳೋ ಏನೋ ಎಂದು ತಕ್ಷಣ ಫೋನ್ ಮಾಡಿದೆ. ಕಟ್ ಮಾಡಿ, ‘ಸಾರಿ ಕಾನ್ಟ್ ಟಾಕ್, ಟೆಕ್ಸ್ತ್ರ್ಟ್ ಮಿ’ ಎಂದು ಮೆಸೇಜಿಸಿದಳು.
‘ಏನಾಯಿತು?’
‘ಏನೂ ಇಲ್ಲ ವಾತಾಡಬೇಕು ಅಷ್ಟೆ’
‘ಏನು ಅಂತ ಹೇಳಬಾರದಾ, ಸುಮ್ನೆ ಟೆನ್ಷನ್ ಕೊಡಬೇಡ’
‘ತಲೆ ಹೋಗೋದು ಏನೂ ಇಲ್ಲ. ಸಂಜೆ ಸಿಗು ಹೇಳ್ತಿನಿ’
‘ಓಕೆ’

ಪಬ್‌ನ ಪಾರ್ಕಿಂಗ್ ಲಾಟ್‌ನಲ್ಲಿ ಕಾರು ನಿಲ್ಲಿಸಿ, ರೆಸ್ಟೋ ಫ್ಲೋರ್‌ಗೆ ಹೋದಾಗ ಅವಳು ಹುಡುಗಿಯೊಬ್ಬಳ ಜೊತೆ ಒಂದು ಟೇಬಲ್‌ನಲ್ಲಿ ಕುಂತಿದ್ದು ಕಾಣಿಸಿತು. ನಾನು ಹತ್ತಿರಾಗುತ್ತಲೇ ಕೈ ಸನ್ನೆ ಮಾಡಿ ಕರೆದಳು. ನಾನು ಟೇಬಲ್ ಹತ್ತಿರಕ್ಕೆ ಬರುತ್ತಿದ್ದಂತೆ ಮುಗುಳುನಗುತ್ತಾ ಎದ್ದು ನಿಂತ ಆ ಹುಡುಗಿ ಕೈ ನೀಡಬೇಕೋ, ನಮಸ್ಕಾರ ಮಾಡಬೇಕೋ ತಿಳಿಯದೆ ತಡಬಡಿಸಿ, ‘ಹಾಯ್ ಆಂಟಿ’ ಎಂದು ಪಕ್ಕದ ಚೇರನ್ನು ನನ್ನ ಕಡೆಗೆ ಸರಿಸಿದಳು.
‘ಏನ್ ತಗೋತಿಯಾ ಮಮ್ಮೀ’ ಎಂದು ಕೇಳಿದಳು ಮಗಳು. ನಾನು ಸೀರಿಯಸ್ಸಾಗಿ ಅವಳ ಮುಖ ನೋಡಿದ್ದಕ್ಕೆ ಅವಳೇ ಮೂರು ಹಾಟ್ ಡ್ಯಾಮ್ ಆರ್ಡರ್ ಮಾಡಿ ನನ್ನ ಕಡೆಗೆ ನೋಡಿದಳು.

ಪಬ್‌ನಲ್ಲಿ ತುಸು ಹೆಚ್ಚೇ ಜನರಿದ್ದರು. ಕೊನೆಯ ಟೇಬಲ್‌ನಲ್ಲಿ ನಡು ವಯಸ್ಸಿನ ವ್ಯಕ್ತಿಯೊಬ್ಬ ಎಡಗೈಲಿ ಏನೋ ಹೀರುತ್ತಾ, ಬಲಗೈಲಿ ಹಿಡಿದಿದ್ದ ಪುಸ್ತಕದೊಳಗೆ ಮುಳುಗಿದ್ದ. ಪರಿಚಿತ ಮುಖ ಎನಿಸಿತು. ಹಿಂದೆ ಹತ್ತಿರದಿಂದಲೇ ಕಂಡಿದ್ದ ಮುಖ ಎನಿಸುತ್ತಿತ್ತು. ಆದರೆ, ಯಾರು ಎಂಬುದು ನೆನಪಾಗಲಿಲ್ಲ. ಹಿಂದಿನ ಎರಡನೇ ಟೇಬಲ್‌ನಲ್ಲಿ ಈಗಿನ್ನೂ ಹರೆಯಕ್ಕೆ ಬಂದ ಹುಡುಗಿ ಎದೆಯ ಮೇಲೆ ಕೂರದ ಬಟ್ಟೆಯನ್ನು ಕೂರಿಸಿಯೇ ತೀರುವ ಸಾಹಸಕ್ಕೆ ಬಿದ್ದಿದ್ದಳು.

ಪಕ್ಕದ ಒಂಟಿ ಕಂಬದ ಮೇಲೆ ನೇತು ಹಾಕಿರುವ ಒಂದು ಚಿತ್ರ ಈ ಗದ್ದಲದಲ್ಲಿ ನೋಟಕ್ಕೆ ಸಿಕ್ಕಿತು. ಹೆಚ್ಚು ಬಣ್ಣಗಳಿಲ್ಲ. ಬಳಸಿರುವುದು ಕಪ್ಪು, ಬಿಳಿ, ಕೆಂಪು ಮಾತ್ರ. ಕ್ಯಾನ್ವಾಸ್‌ನಲ್ಲಿ ಕೆಳಗಿನ ಅರ್ಧ ಕಪ್ಪು, ಮೇಲಿನ ಅರ್ಧ ಬಿಳಿ. ಮಧ್ಯದಲ್ಲಿ ಒಂಟಿ ಹುಡುಕಿ ಕೆಂಪು. ಲಂಗ ಹಾಕಿಕೊಂಡಿರುವ ಹುಡುಗಿ. ಹುಡುಗಿಯ ಚಿತ್ರ ಹೆಚ್ಚು ಸ್ಪಷ್ಟವಿಲ್ಲ. ಆಕಾರ ಮಾತ್ರದಿಂದ ವಾತ್ರ ಅದನ್ನು ಹುಡುಗಿ ಎಂದುಕೊಳ್ಳಬಹುದು. ಆ ಹುಡುಗಿಗೆ ಚಲನೆಯಿಲ್ಲ. ಚಲನೆ ಇದ್ದರೂ ಆ ಹುಡುಗಿಯ ಮುಂದಿರುವುದು ಎರಡೇ ಆಯ್ಕೆ ಒಂದು ಕಪ್ಪಿಗೆ ಬೀಳಬೇಕು. ಇಲ್ಲವೇ ಬಿಳಿಗೆ ಏರಬೇಕು. ನೋಡಲು ಸಾಮಾನ್ಯ ಎನಿಸಿದರೂ ಹಲವು ಅರ್ಥಗಳಿಗೆ ತೆರೆದುಕೊಳ್ಳುತ್ತಿರುವ ಚಿತ್ರ. ಅಥವಾ ಅದು ಸಾವಾನ್ಯ ಚಿತ್ರವೇ ಆಗಿದ್ದು ನನ್ನ ಕಲ್ಪನೆಗಳು ಹೀಗೆ ಎಲ್ಲೆಲ್ಲೋ ಅಲೆದಾಡುತ್ತಿವೆಯೇ ಅಥವಾ ನಾನೂ ಪೇಂಟರ್ ಆಗಿರುವುದರಿಂದ ಈ ಅರ್ಥಗಳೆಲ್ಲಾ ನನಗೆ ಹೊಳೆಯುತ್ತಿವೆಯೇ. ಅಥವಾ ಕಪ್ಪಿನ ಕಡೆಗೆ ನಡೆಯಬೇಕೋ, ಬಿಳುಪಿನ ಕಡೆಗೆ ನಡೆಯಬೇಕೋ ಎಂದು ಆ ಕೆಂಪು ಹುಡುಗಿ ದ್ವಂದ್ವಕ್ಕೆ ಬಿದ್ದಿದ್ದಾಳೋ. ಅದು ಹುಡುಗಿಯ ಚಿತ್ರವೋ ಅಥವಾ ನನ್ನ ಮಗಳೋ. ಅಥವಾ ಅದು ನಾನೋ?

ತಕ್ಷಣ ಚಿತ್ರದಿಂದ ಕಣ್ಣು ಕಿತ್ತು ಮಗಳನ್ನು ನೋಡಿದೆ. ಏನೋ ಹೇಳಬೇಕೆಂದು ಕರೆದು ಚಡಪಡಿಕೆಗೆ ಬಿದ್ದಿದ್ದಾಳೆ. ಎದುರಿಗೆ ಕುಂತಿರುವ ಹುಡುಗಿಯ ಪರಿಚಯವನ್ನೂ ಮಾಡಿಸಿಲ್ಲ. ಇವಳೇನೂ ಬರೀ ಫ್ರೆಂಡೋ ಅಥವಾ?
‘ಏನು ವಾತಾಡ್ಬೇಕು ಅಂತ ಅಂದ್ಯಲ್ಲಾ?’

‘ಮಮ್ಮೀ ವಿ ವರ್ ಇನ್ ರಿಲೇಷನ್. ನಾವು ಒಟ್ಟಿಗೇ ಇರಬೇಕು ಅಂತ ಡಿಸೈಡ್ ವಾಡಿದ್ದೀವಿ. ವಿ ವಿಲ್ ಲಿವಿಂಗ್ ಟುಗೆದರ್’
ಮೂರೇ ಮಾತಲ್ಲಿ ಎಲ್ಲವನ್ನೂ ಹೇಳಿ ಮುಗಿಸಿದ್ದಳು. ಅವಳೂ ಇವಳ ವಾತನ್ನು ಅನುಮೋದಿಸುವವಳ ಹಾಗೆ ಸಣ್ಣ ನಗೆ ನಗುತ್ತಾ ಗೋಣು ಆಡಿಸಿದಳು.

ನಾನು ಕಂಬದ ಮೇಲಿನ ಕೆಂಪು ಹುಡುಗಿಯನ್ನೇ ನೋಡುತ್ತಾ ಕುಳಿತೆ. ಎಷ್ಟೋ ಹೊತ್ತಾದ ಮೇಲೆ ಇವಳು ಆರ್ಡರ್ ವಾಡಿದ್ದ ಕಾಕ್ ಟೇಲ್ ಬಂತು. ಮೂವರೂ ಕಾಕ್ ಟೇಲ್ ಮುಗಿಸಿ ಅಲ್ಲಿಂದ ಹೊರಟೆವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ