Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರಿನಲ್ಲೊಬ್ಬರು ಕನ್ನಡದ ರಾಜಕುಮಾರ

ಶಭಾನ ಮೈಸೂರು

ಇವರು ಗುಡ್ಡದ ಎಲ್ಲಮ್ಮನ ಪೂಜಾರಿ. ಮದುವೆ ಸಂಭ್ರಮಗಳಿಗೆ ಚಪ್ಪರ ಕಟ್ಟುವ ಕರ್ಮಚಾರಿ, ನವೆಂಬರ್ ತಿಂಗಳು ಮಾತ್ರ ಕನ್ನಡದ ರಾಜಕುಮಾರನ ವೇಷ ಧರಿಸಿ ಸೈಕಲ್‌ ದೂಡುತ್ತಾ ತಿರುಗುವ ಬರಿಗಾಲಿನ ಕನ್ನಡ ಯೋಗಿ.

ನವೆಂಬರ್ ತಿಂಗಳಲ್ಲಿ ವರನಟ ಡಾ.ರಾಜಕುಮಾ‌ ಅವರಂತೆ ರಾಜ ಪೋಷಾಕು ತೊಟ್ಟಿ ಪುಟ್ಟಸ್ವಾಮಿ ಅವರು ಮೈಸೂರಿನ ಹಾದಿಗಳಲ್ಲಿ ಹಳದಿ ಕಂದು ಬಣ್ಣ ಬಳಿದ ಸೈಕಲ್ ಏರುತ್ತಾ, ಸಂಚರಿಸುತ್ತಾರೆ, ಕನ್ನಡ ನಾಡು ಮಡಿಯ ಪ್ರತಿಮೆಯಂತಿದ್ದ ಡಾ ರಾಜ್‌ ಕುಮಾರ್ ಅವರೇ ಅವರಿಗೆ ಸ್ಫೂರ್ತಿ, ಬಿಸಿಲ ಝಳಪಿನಲ್ಲೂ ಇವರ ಸೈಕಲ್ ನಲ್ಲಿ ಕನ್ನಡದ ಬಾವುಟ ಹಾರುತ್ತಿರುತ್ತದೆ.

ಪುಟ್ಟಸ್ವಾಮಿ ಅವರು ಮೈಸೂರಿನ ಮಂಡಿ ಮೊದಲಾದ ಸೂಪ್ಪಿನಕೇರಿ, ಉಪ್ಪಿನಕೇರಿ ನಡುವೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿನ ಜನರು “ನೀನು ಮೈಸೂರಿನ ರಾಜ್‌ಕುಮಾರ್ ಕಣೋ’ ಎನ್ನುವಾಗೆಲ್ಲ ಪುಟ್ಟಸ್ವಾಮಿ ಅವರ ಮುಖ ಕಳೆಗಟ್ಟುತ್ತದೆ. ಇವರಿಗೆ 68ರ ವಯಸ್ಸು. ಈಗ ನಿತ್ಯದ ಒಂದೂವರೆ ಗಂಟೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಾ ಕಳೆಯುತ್ತಾರೆ.

ಇವರ ತಂದೆ ಗಾಳಿಮಾದಪ್ಪ ನಾಟಿ ವೈದ್ಯರಾಗಿದ್ದವರು. ತಾಯಿಗೆ ಹೊಲದ ದುಡಿಮೆಯ ಜವಾಬ್ದಾರಿ, ಚಿಕ್ಕಂದಿನಿಂದಲೂ ದುಡಿಮೆಯ ಜೊತೆಗೆ ಆರೋಗ್ಯಕರ ವಾತಾವರಣವಿತ್ತು, ಎಷ್ಟರ ಮಟ್ಟಿಗೆಂದರೆ, ಪುಟ್ಟಸ್ವಾಮಿ ಅವರು ಇದುವರೆಗೂ ಆಸ್ಪತ್ರೆಯ ಕಡೆ ಇಣುಕಿಯೂ ನೋಡಿಲ್ಲ. ಸಣ್ಣಪುಟ್ಟ ರೋಗಕ್ಕೆ ಮದ್ದು ನೀಡಿ ಎಂದು ಆಸ್ಪತ್ರೆಗೆ ದೌಡಾಯಿಸುವ ಬದಲು, ಅಡುಗೆಮನೆಗೆ ಹೋಗಿ ಎನ್ನುತ್ತಾ ಬೇಳೆ ಕಾಳುಗಳ ಮಹತ್ವವನ್ನು ಹೇಳುತ್ತಾರೆ.

ಮೈಸೂರು ಮಹಾರಾಜರ ಆಸ್ಥಾನದಲ್ಲಿ ನಾಟಿ ಔಷಧಿ ನೀಡುತ್ತಿದ್ದ ಗಾಳಿಮಾದಪ್ಪ ಆವರು ಮಕ್ಕಳಿಗೆ ರಜೆ ಸಿಕ್ಕಾಗ, ಆರಮನೆಗೆ ಕರೆದುಕೊಂಡು ಬರುತ್ತಿದ್ದರು. ಮೈಸೂರು ಅರಮನೆಗೆ ಹೊರಡುವುದೆಂದರೆ ಎಲ್ಲಿಲ್ಲದ ಖುಷಿ ‘ನಾನೇ ರಾಜಕುಮಾರ’ ಎಂಬ ಹಾಡನ್ನು ಗುನುಗುತ್ತಾ, ಅರಮನೆಯ ತುಂಬ ಓಡಾಡುವಾಗ ಪುಟ್ಟಸ್ವಾಮಿ ಅವರಿಗೆ “ನಾನೂ ರಾಜನೆ ಎಂಬ ಭಾವ ತೀರಿಹೋದ ಶ್ರೀಕಂಠದತ್ತ ಒಡೆಯರ್ ಅವರ ಮದುವೆಯ ಸುಭ್ರಮವನ್ನು ಇವರ ಕಂಗಳು ಮರೆತಂತಿಲ್ಲ.

ಆ ಕಾಲದಲ್ಲಿ ನಾಟಿ ವೈದ್ಯರಿಗೆ ಖರೇನ ಗೌರವವಿತ್ತು. ಜನರ ತಂದೆಯ ನಂತರ ಅರಮನೆಗೆ ಮತ್ಯಾವ ನಾಟಿ ವೈದ್ಯರು ಬರಲಿಲ್ಲವಂತೆ, ತಂದೆಯ ಹಾಗೆ ನಾಟಿ ವೈದ್ಯರಾಗುವುದು ಇವರಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಒಂದನೇ ತರಗತಿಗೆ ಓದು ಸಾಕೆನಿಸಿತು. ನಾಟಕದಲ್ಲಿ ಪಾತ್ರ ಮಾಡಬೇಕೆಂದು ಈ ಸಣ್ಣ ಹುಡುಗ ಅಂದು ಕನಸು ಕಟ್ಟುತ್ತಿದ್ದ. 15 ವರ್ಷವಿರುವಾಗ ಪೇಟವನ್ನು ತಲೆಗೇರಿಸಿಕೊಂಡು ಕೈಯಲ್ಲಿ ಖಡ್ಗ, ರಾಜರ ವೇಷಭೂಷಣ ತೊಟ್ಟು ಪುಟ್ಟಸ್ವಾಮಿ ಅವರು ದಸರಾ ಮೆರವಣಿಗೆಯಲ್ಲಿ ಸಾಗಿದ್ದರು, ಹಸಿಮ ಬೆಟ್ಟನಲ್ಲಿ ತನ್ನಿಂದ ಅನತಿ ದೂರದಲ್ಲಿರುವ ಪ್ರೇಯಸಿಯ ಬಳಿಗೆ ನಾಯಕ ನಿಧಾನಗತಿಯಲ್ಲಿ ಓಡುವುದು ರೆಟ್ರೋ ಕಾಲದ ಟ್ರೆಂಡ್ ಆಗಿತ್ತು. ಸಿನಿಮಾ ನೋಡುತ್ತಿದ್ದ ಪುಟ್ಟಸ್ವಾಮಿ ಅವರು ರಾಜನ ವೇಷವನ್ನು ತೊಟ್ಟುಕೊಂಡು, ಹಾಗೇ ನಿಧಾನಗತಿಯಲ್ಲಿ ಓಡಿಬಂದು ನೆರೆದಿದ್ದ ಜನರ ಮನಸೆಳೆದ ಕ್ಷಣ ಇವರ ಬದುಕಿಗೆ ಸುಂದರ ನೆನಪಾಗಿದೆ.

ತಂದೆಯವರು ಎಲ್ಲಮ್ಮನ ಪೂಜಾರಿಯಾಗಿದ್ದು, ಯಂತ್ರಗಳನ್ನು ಕಟ್ಟುತ್ತಿದ್ದರು. ನಂತರ ಪುಟ್ಟಸ್ವಾಮಿ ಅವರ ಎಲ್ಲಮ್ಮನ ಆರಾಧಕರಾದರು. ಎಲ್ಲಮ್ಮನ ಜಾತ್ರೆ ಬಂತೆಂದರೆ ಇಂದಿಗೂ ಹದಿನೈದು
ಇಪ್ಪತ್ತು ಮೈಲಿಗಳ ತನಕ ನೀರು ತುಂಬಿದ ಕೊಡಪಾನಗಳನ್ನು ರಟ್ಟೆಯ ಮೇಲಿಟ್ಟುಕೊಂಡು ಸಾಗುತ್ತಾರೆ.

ಪುಟ್ಟಸ್ವಾಮಿ ಅವರ ಇನ್ನೊಂದು ವಿಶೇಷತೆ ಎಂದರೆ ಸಮಾರಂಭಗಳಿಗೆ ಚಪ್ಪರ ಕಟ್ಟುವುದು, ಇವರ ಬಳಿ ತಳ್ಳು ಗಾಡಿಯೊಂದಿದೆ, ಅವರ ಮೇಲೆ ನಿಂತೇ ಚಪ್ಪರ ಕಟ್ಟುತ್ತಾರೆ. ಮೂರು ಆಳುಗಳ ಶ್ರಮ ಬೇಡುವ ಈ ಕಸವನ್ನು 60 ವರ್ಷಗಳಿಂದ ಪುಟ್ಟಸ್ವಾಮಿ ಒಬ್ಬರೆ ನಿಭಾಯಿಸುತ್ತಾರೆ. ಯುಗಾದಿಗೆ, ಊರ ಹಬ್ಬಗಳಿಗೆ, ಹೆಣ್ಣು ಮೈನೆರೆದಾಗ ಮಾಡುವ ಶಾಸ್ತ್ರ ಕಾರ್ಯಕ್ಕೆ ತಕ್ಕಂತೆ ಚಪ್ಪರವನ್ನು ನಿರ್ಮಿಸುತ್ತಾರೆ. ಪುಟ್ಟಸ್ವಾಮಿ ಅವರು ಕಟ್ಟಿದ ಚಪ್ಪರದಡಿ ಅದೆಷ್ಟು ಮದುವೆಗಳಾಗಿವೆಯೋ! ಆದರೆ ಇವರು ಮಾತ್ರ ಅಪ್ಪಟ ಬ್ರಹ್ಮಚಾರಿ.

ಒಬ್ಬರೇ ಕೆಲಸ ಮಾಡುವ ಬದಲು ಜೊತೆಗೆ ಸಹಾಯಕರನ್ನು ಕರೆದುಕೊಂಡು ಹೋಗಬಹುದಲ್ಲಾ ಎಂದರೆ ಇಷ್ಟೇ ದುಡ್ಡು ಕೊಡಿ ಎಂದು ಯಾವತ್ತೂ ಕೇಳಿದ್ದಿಲ್ಲ. ಕೊಡುವ ಕಾನು ಮೂವರಿಗೆ ಸಾಲುವುದಿಲ್ಲ. ಹೆಚ್ಚು ಕೊಡಿ ಎಂದು ಕೇಳುವ ಉಭಯ ಸಂಕಟಕ್ಕಿಂತ ಒಬ್ಬನೇ ಹೋಗುವುದು ಒಳಿತು ಎನ್ನುತ್ತಾರೆ. ಬಂದ ದುಡ್ಡನ್ನೆಲ್ಲಾ ಕೂಡಿಸಿ ರಾಜರ ಬಟ್ಟೆಗಳನ್ನು ಖರೀದಿಸುತ್ತಾರೆ.

ಇಷ್ಟರವರೆಗೆ ಒಟ್ಟು ಏಳೆಂಟು ಜೊತೆಯ ಬಟ್ಟೆಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಕವಿರತ್ನ ಕಾಳಿದಾಸ ಚಿತ್ರದ … ಓ ಪ್ರಿಯತಮ’ ಹಾಡಿಗೆ ತಕ್ಕ ಬಟ್ಟೆ ತೊಡಬೇಕೆಂದು ದುಷ್ಯಂತ ಮಹಾರಾಜನಂತೆ ಕಾಣುವ ಬಟ್ಟೆ ಖರೀದಿಸಿದರು. ಆಕಸ್ಮಿಕ ಚಿತ್ರದಲ್ಲಿ ಬರುವ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಿಬೇಕು’ ಹಾಡನ್ನು ಅಭಿನಯಿಸಬೇಕೆಂದು ಬಿಳಿ ಪಂಚೆ, ಜುಬ್ಬ, ಕೆಂಪು ಶಾಲು, ಹಳದಿ ಪೇಟವನ್ನೂ ಕೊಂಡರು. ಒಟ್ಟಿನಲ್ಲಿ ಚಿತ್ರಕ್ಕೆ ಅನುಗುಣವಾಗಿ ವೇಷಭೂಷಣಗಳನ್ನು ಹೊಂದಿಸಿಕೊಳ್ಳುತ್ತಾರೆ. ಕನ್ನಡ ರಾಜ್ಯೋತ್ಸವಕ್ಕಾಗಿ ನವೆಂಬರ್ ತಿಂಗಳು ಪೂರ್ತಿ ರಾಜ ಪೋಷಾಕು ತೊಟ್ಟು, ವಿಗ್ ಹಾಕಿ, ಮುಖಕ್ಕೆ ಬಣ್ಣ ಹಚ್ಚಿ, ಸಿಂಗಾರಗೊಂಡ ಸೈಕಲ್ ಬರುತ್ತಿದ್ದರೆ ಮೈಸೂರಿನ ರಾಜಕುಮಾರ ಕನ್ನಡ ತೇರಿನಲ್ಲಿ ಕುಳಿತಂತೆ ಭಾಸವಾಗುತ್ತವೆ.

ಪುಟ್ಟಸ್ವಾಮಿ ಅವರ ಬಳಿ ಎರಡು ಸೈಕಲ್‌ಗಳವೆ. ಹಳೆಯ ಸೈಕಲ್‌ ಗೆ 4 ವರ್ಷಗಳಾಗಿವೆ. ಹೊಸ ಸೈಕಲ್‌ಗೆ 30 ವರ್ಷ ತುಂಬಿದೆ. 40 ವರ್ಷಗಳ ಹಿಂದೆಲ್ಲ ಸೈಕಲ್ ಗೆ ಹಾರ್ನ್ ಇರುವ ಹಿತ್ತಾಳೆಯ ಗ್ರಾಮಾಫೋನ್ ಕಟ್ಟಿಕೊಂಡು ತಿರುಗಾಡುತ್ತಿದ್ದರು. ಕನ್ನಡ ಗೀತೆಗಳನ್ನು ಜನರಿಗೆ ಕೇಳಿಸಬೇಕೆಂದು ಮೈಕ್ ಕೊಂಡರು. ನಂತರ ಟೇಪ್ ರೆಕಾರ್ಡರ್, ಸಿ.ಡಿ. ಫೈಯರ್ ಖರೀಸಿದ್ದಾಯಿತು, ಕಾಲದ ಕಂತ್ರಜ್ಞಾನಕ್ಕೆ ತನ್ನಂತೆ ತಮ್ಮನ್ನು ಅಣಿಗೊಳಿಸಿಕೊಂಡು, ಈಗ ಹಳೆಯ ಮೈಕ್, ಹೊಸ ಮೆಮೊರಿ ಕಾರ್ಡ್ ಸಹಾಯದಿಂದ ರಾಜಕುಮಾರ್ ಅಭಿನಯದ ಹಾಡುಗಳೊಂದಿಗೆ ಕನ್ನಡದ ಬಂಡಿಯಲ್ಲಿ ಸವಾರಿ ಹೊರಡುತ್ತಾರೆ.

ಮೊದಲು ಮೈಸೂರಿನಿಂದ ಬೆಂಗಳೂರಿಗೆ ಸೈಕಲ್‌ನಲ್ಲಿ ತೆರಳುತ್ತಿದ್ದರು. ರಾಜ್‌ ಕುಮಾರ್ ಅವರ ಮನೆಯೆದುರು ನಿಂತು, ಸೆಕ್ಯುರಿಟಿ ಅವರಲ್ಲಿ ಒಳಗೆ ಬಿಡಿ ಎಂದು ಬೇಡಿಕೊಂಡಿದ್ದರು. ಸೆಕ್ಯುರಿಟಿ ಮಾತ್ರ ಜಪ್ಪಯ್ಯವೆಂದರೂ ಮನೆಯೊಳಕ್ಕೆ ಬಿಡಲಿಲ್ಲ. ಮಾತಿನ ಚಕಮಕಿ ನಡೆಯುತ್ತಿದ್ದದ್ದನ್ನು ಕಂಡ ರಾಜ್‌ಕುಮಾರ್ ಅವರು ಒಳಗೆ ಬರುವಂತೆ ತಿಳಿಸಿದರು. ಅವರ ಸರಳ, ಸೌಮ್ಯ ವ್ಯಕ್ತಿತ್ವಕ್ಕೆ ಪುಟ್ಟಸ್ವಾಮಿ ಅವರು ಶರಣೆಂದಿದ್ದರು. ಒಂದು ಆದರೊಂದಿಗೆ ಕೊಡು, ಉಟ್ಟು ಸವಿದಿದ್ದರು. ಮೈಸೂರಿನ ರಾಜಕುಮಾರ ಈ ನಾಡಿನ ರಾಜಕುಮಾರನೊಂದಿಗೆ ರವೆ ಉಪ್ಪಿಟ್ಟು ತಿಂದಿದ್ದರೆಂಬುದು ಸಾಮಾನ್ಯ ಸಂಗತಿಯೇ..

ಪುಟ್ಟಸ್ವಾಮಿ ಅವರು ರಾಜ್ ಕುಮಾರ್ ಅವರ ಸಿನಿಮಾಗಳನ್ನು ಕಾಣುತ್ತಲೇ ಅಭಿಮಾನಿಯಾದರು. ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ನಾಯಕ ಗೂಳಿಯ ಜೊತೆ ಹೋರಾಡುವ ದೃಶ್ಯವೊಂದಿದೆ. ಅಣ್ಣಾವ್ರ ತರಹ ತಾನೂ ಮಾಡಬೇಕೆಂದು ಹೋದರೆ ಆದದ್ದೇ ಬೇರೆ! ಗೂಳಿಯ ಬಳಿ ಗುದ್ದಿಸಿಕೊಂಡ ಗಾಯದ ಗುರುತನ್ನು ತೋರಿಸುತ್ತಾ, ತಮ್ಮ ಅವಸ್ಥೆಗೆ ತಾವೇ ನಗುತ್ತಾರೆ. ಅಷ್ಟೇ ಅಲ್ಲ, ರಾಜ್‌ಕುಮಾರ್ ಅವರಂತೆಯೇ ಯೋಗಾಸನ ಮಾಡಬೇಕೆಂದು, ಯೋಗ, ಧ್ಯಾನಗಳನ್ನು ಕಲಿತರು.

ಶೃಂಗಾರ, ಹಾಸ್ಯ, ವೀರ, ಭಯಾನಕ, ನವರಸಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡ ರಾಜ್ ಕುಮಾರ್ ಅವರಂತೆ ಆಭಿನಯಿಸುವ ಮತ್ತೊಬ್ಬ ಕಲಾವಿದರಿಲ್ಲ. ‘ಎಲ್ಲರೊಂದಿಗೂ ಬೆರೀತಿದ್ರು, ಜೊತೇಲಿ ಕೂತು ಊಟ ಮಾಡ್ತಿದ್ರು’ ಎಂದು ಜೂನಿಯರ್ ರಾಜ್ ಕುಮಾರ್ ಹೇಳುವಾಗ ಅಭಿಮಾನಿ ದೇವರುಗಳೆಂದ ಡಾ.ರಾಜ್ ಅವರ ಮಾತು ಮನಸ್ಸಿನಲ್ಲಿ ಮತ್ತೆ ಪ್ರತಿಧ್ವನಿಸುತ್ತಿತ್ತು.

ಎಲ್ಲಮ್ಮ ದೇವಿಯನ್ನ ಆರಾಧಿಸುತ್ತಾ, ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಚಿಪ್ಪರ ಕಟ್ಟುತ್ತಾ, ನವೆಂಬರ್ ತಿಂಗಳು ಪೂರ್ತಿ ರಾಜನ ವೇಷ ಧರಿಸಿ, ಮೈಸೂರಿನಲ್ಲಿ ಸುತ್ತಾಡುತ್ತಿರುವ ಪುಟ್ಟಸ್ವಾಮಿ ಅವರು ಕಾಶ್ಮೀರ, ಶಬರಿಮಲೆ, ಕಾಶಿ, ದೆಹಲಿ, ಆಗ್ರಾ ಕಡೆಗೆಲ್ಲ ಪ್ರಯಾಣ ಬೆಳೆಸಿದ್ದಾರೆ. ಇಂದಿಗೂ ಬರಿಗಾಲಿನಲ್ಲಿ ಓಡಾಡುತ್ತಾರೆಯೇ ಹೊರತು, ಚಪ್ಪಲಿ ಧರಿಸುವ ಅಭ್ಯಾಸವನ್ನೇ ರೂಢಿಸಿಕೊಂಡಿಲ್ಲ. ಪಾದ ನೇರವಾಗಿ ನೆಲವನ್ನು ಮುಟ್ಟಿದರೆ ಗಟ್ಟಿಯಾಗುತ್ತದೆಂಬುದು ಇವರು ಪಾಲಿಸುತ್ತಿರುವ ಆರೋಗ್ಯ ತತ್ವ. ಕೆಲ ಹುಡುಗರೆಲ್ಲ ಇವರ ಗಟ್ಟಿಮುಟ್ಟಾದ ಶರೀರವನ್ನು ಕಂಡು, ‘ಹಳೇ ಕಾಲ್ದೋರು ನೀವು, ಆಗೆಲ್ಲ ಊಟ ಚೆನ್ನಾಗಿರ್ತಿತ್ತು, ನಾವೆಲ್ಲ ಏನ್ ತಿಂದ್ರೂ, ರೋಗ ಮೈಗಂಟಿಸ್ಕೋತೀವಿ ನೋಡಿ’ ಎನ್ನುತ್ತಾರೆ. ಆಹಾರ ಮುಖ್ಯವೇ ತಿಂದ ಆಹಾರವನ್ನು ವ್ಯಾಯಾಮ ಮಾಡಿ ಕರಗಿಸುವುದು ಅಷ್ಟೇ ಮುಖ್ಯ ಎಂಬುದು ಇವರ ಅಭಿಪ್ರಾಯ.

ಕನ್ನಡದ ಬಗ್ಗೆ ಪುಟ್ಟಸ್ವಾಮಿ ಅವರಲ್ಲಿ ಪ್ರೀತಿ ಆಪಾರ, ಗುಡ್ ಮಾರ್ನಿಂಗ್ ಎಂದರೆ ‘ಜೈ ಭುವನೇಶ್ವರಿʼ ಎನ್ನುತ್ತಾರೆ. ಇಂಗ್ಲೀಷಿನ ಹಾಯ್, ಬಾಯ್ ಎಲ್ಲಕ್ಕೂ ‘ಜೈ ಭುವನೇಶ್ವರಿ’ ಎಂಬುದೇ ಇವರ ಪ್ರತಿಕ್ರಿಯೆ. ಪುಟ್ಟಸ್ವಾಮಿ ಅವರಿಗೆ ಒಂದು ತುಂಟ ಹುಡುಗರು ಚುಡಾಯಿಸಬೇಕೆಂದು ‘ಅಂಕಲ್’ ಎನ್ನುತ್ತಿದ್ದರು. ಮುಲಾಜಿಲ್ಲದೆ ತಲೆ ಮೇಲೆ ಹಾಕ್ತೀನಿ ಹಾನಿ ಗುಂಡ್ಕಲ್’ ಎಂದು ಸುಮ್ಮನಾಗಿಸುತ್ತಿದ್ದರು. ಅನೇಕ ಮಹನೀಯರು ಕನ್ನಡಕ್ಕಾಗಿ ಮಾಡಿದ ಸೇವೆಯನ್ನು ನೆನೆದು, “ಕನ್ನಡ ಅಂದ್ರೆ ನಂಗೆ ಇಷ್ಟ. ಅವರಷ್ಟು ಮಾಡ್ತೀನೋ ಇಲ್ಲೋ, ನಂಗೆ ಎಟುಕಿದಷ್ಟು ಮಾಡ್ತಿದ್ದೀ?’ ಎನ್ನುವಾಗ ಪುಟ್ಟಸ್ವಾಮಿ ಅವರ ಮುಖದ ಮಂದಹಾಸ ಕಾಯಕ ತೃಪ್ತಿಯನ್ನು ಕಾಣಿಸುತ್ತಿತ್ತು.

ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಕನ್ನಡದ ಕಟ್ಟಾಳುವಾಗುತ್ತಾ ಪುಟ್ಟುಂಟು ಅವರು ಶಿವರಾತ್ರಿಯಲ್ಲಿ “ಶಿವ”, ರಾಮನವಮಿಯಂದು ‘ಹನುಮ’ ನಾಗುತ್ತಾರೆ. ‘ನಿಮ್ ಥರ ಆಗ್ಬೇಕು’ ಎಂದವರು ಬಹಳಷ್ಟು ಮಂದಿ, ನಾಚಿಕೆ, ಮುಜುಗರವನ್ನು ಬಿಟ್ಟು ವೇಷವನ್ನು ತೊಡುವುದು, ಬಿಸಿಲ ಬೇಗೆಯಲ್ಲಿ ಬಂದು ಮೈಸೂರಿನ ರಾಜ್‌ ಕುಮಾರ್ ಆಗುವುದು ಅಷ್ಟು ಸುಲಭವಲ್ಲವಲ್ಲಾ.

Tags: