ಸುತ್ತೂರು ನಂಜುಂಡ ನಾಯಕ
ನಂಜನಗೂಡು ತಾಲ್ಲೂಕು ಕಲ್ಮಳ್ಳಿ ಗ್ರಾಮದ ಪ್ರಗತಿಪರ ರೈತ ಶಿವಕುಮಾರ್ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಸಮಗ್ರ ಬೇಸಾಯ ಪದ್ಧತಿ ಅನುಸರಿಸುತ್ತಾ ಕೈತುಂಬಾ ಆದಾಯಗಳಿಸುತ್ತಿದ್ದಾರೆ.
೧೦೦ ತೆಂಗಿನ ಮರ, ೧೦೦ ಔಷಧಿ ಗಿಡಗಳು, ೫೦ ನಿಂಬೆ ಗಿಡಗಳು, ೫೦ ಜೇನು ಸಾಕಣೆ ಪೆಟ್ಟಿಗೆ ಜೊತೆಗೆ ತೋಟಗಾರಿಕೆ ಇಲಾಖೆಯಿಂದ ಬಗೆ ಬಗೆಯ ಹಣ್ಣಿನ ಗಿಡಗಳನ್ನು ತಂದು ನೆಟ್ಟು ಸಮಗ್ರ ಬೇಸಾಯ ಮಾಡುತ್ತಾ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ನಮ್ಮ ತೋಟದಲ್ಲಿ ಜೇನು ಸಾಕಣೆಯಿಂದಾಗಿ ಪರಾಗಸ್ಪರ್ಶ ಹೆಚ್ಚಿ ಎಲ್ಲ ಬೆಳೆಗಳೂ ಹೆಚ್ಚು ಫಲವತ್ತಾಗಿ ಬೆಳೆಯಲು ಅನುಕೂಲವಾಯಿತು. ಅಲ್ಲದೇ ಜೇನುತುಪ್ಪವನ್ನು ಸಂಗ್ರಹಿಸಿಕೊಂಡು ನಮ್ಮ ಮನೆಯ ಬಳಕೆಯ ಜೊತೆಗೆ ಮಾರಾಟವನ್ನೂ ಮಾಡುತ್ತಿದ್ದೇನೆ. ಅದರಿಂದಲೂ ಹಣ ಗಳಿಸುತ್ತಿದ್ದೇನೆ ಎನ್ನುತ್ತಾರೆ ರೈತ ಶಿವಕುಮಾರ್.
ಇದರ ಜೊತೆಯಲ್ಲಿ ತೆಂಗಿನ ಮರಗಳನ್ನು ಬೆಳೆಸಿದ್ದು, ತೆಂಗಿನಕಾಯಿ ಹೆಚ್ಚು ಲಾಭವನ್ನು ಪಡೆಯಲು ಸಾಧ್ಯವಾಗಿದೆ. ಈ ರೀತಿ ಎಲ್ಲಾ ಬೆಳೆಗಳನ್ನು ಬೆಳೆಯುವುದರಿಂದ ನಮ್ಮ ಭೂಮಿ ಫಲವತ್ತಾಗಿದೆ. ಸಮಗ್ರ ಬೇಸಾಯದಿಂದ ಯಾವ ಗಿಡಗಳಿಗೂ ರೋಗ ಬಾಧೆ ಕಾಡುತ್ತಿಲ್ಲ. ಹೀಗಾಗಿ ಉತ್ತಮವಾದ ಬೆಳೆ ಬೆಳೆದು, ಉತ್ತಮ ಬೆಲೆಯನ್ನು ಪಡೆದಿದ್ದೇನೆ. ಒಂದೇ ಬೆಳೆಯನ್ನು ಬೆಳೆದರೆ ರೈತರಿಗೆ ಹೆಚ್ಚು ಲಾಭ ಬರುವುದಿಲ್ಲ. ಈ ಸಮಗ್ರ ಬೇಸಾಯ ಪದ್ಧತಿಯಿಂದ ಭೂಮಿಯೂ ಆರೋಗ್ಯಕರ ವಾಗಿರುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಲ್ಲದೇ ಕೈತುಂಬಾ ಹಣವೂ ಸಿಗುತ್ತದೆ ಎನ್ನುತ್ತಾರೆ.
ಸ್ಥಳೀಯ ಬಿಳಿಗೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಽಕಾರಿ ಶ್ರುತಿ ಹಾಗೂ ಇತರೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತೋಟಗಾರಿಕೆ ಹಾಗೂ ಸಾವಯುವ ಗೊಬ್ಬರ ತಯಾರು ಮಾಡಿ ಕೊಂಡು ಸಮಗ್ರ ಬೇಸಾಯದಲ್ಲಿ ತೊಡಗಲು, ಹೆಚ್ಚು ಲಾಭ ಪಡೆಯಲು ಸಾಧ್ಯವಾಯಿತು. ಕೃಷಿ ಇಲಾಖೆ ಅಽಕಾರಿಗಳು ಈ ಪದ್ಧತಿ ಅನುಸರಿಸಲು ಹಾಗೂ ಹೆಚ್ಚು ಲಾಭ ಪಡೆಯಲು ನನಗೆ ಮಾರ್ಗದರ್ಶನ ನೀಡಿ ಅನುಕೂಲ ಮಾಡಿಕೊಟ್ಟರು ಎಂದು ರೈತ ಶಿವಕುಮಾರ್ ಕೃಷಿ ಇಲಾಖೆ ಅಽಕಾರಿಗಳಿಗೆ ಧನ್ಯವಾದ ಹೇಳುತ್ತಾರೆ.
ಸುಭಾಷ್ ಪಾಳೇಕಾರರ ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡುವ ಪದ್ಧತಿಯನ್ನು ಅನುಸರಿಸು ತ್ತಿರುವ ರೈತ ಕಲ್ಮಳ್ಳಿ ಶಿವಕುಮಾರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರೈತ ಮುಖಂಡ ಬೊಕ್ಕಳ್ಳಿ ನಂಜುಂಡಸ್ವಾಮಿ ಅವರು, ಕೃಷಿ ಲಾಭದಾಯಕವಲ್ಲ ಎಂದು ರೈತರು ಕೈಚೆಲ್ಲುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಈ ಪದ್ಧತಿಯನ್ನು ಅನುಸರಿಸಲು ಹೆಚ್ಚು ನೆರವು ನೀಡಬೇಕು. ಈ ಪದ್ಧತಿಯಿಂದ ರೈತನ ಆರ್ಥಿಕ ಮಟ್ಟ ಹಾಗೂ ದೇಶದ ಆರ್ಥಿಕ ಮಟ್ಟ ಸುಧಾರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.





