Mysore
17
clear sky

Social Media

ಗುರುವಾರ, 11 ಡಿಸೆಂಬರ್ 2025
Light
Dark

ಕೃಷಿ ಉತ್ಪನ್ನಗಳ ರಫ್ತು ಪ್ರಮಾಣದಲಿ ಹೆಚ್ಚಳ

೨೦೨೪-೨೫ನೇ ಹಣಕಾಸು ವರ್ಷದಲ್ಲಿ ಭಾರತದ ಅಕ್ಕಿ ಮತ್ತು ವಾಣಿಜ್ಯ ಬೆಳೆಗಳ ರ- ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಾಫಿ, ಚಹಾ, ತಂಬಾಕು ಮತ್ತು ಪಸಾಲೆ ಪದಾರ್ಥ ಗಳ ರ- ೯. ೧೬ ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಅಕ್ಕಿ ರ- ಶೇ. ೨೦ರಷ್ಟು ಹೆಚ್ಚಳ ಸೇರಿದಂತೆ ಕೃಷಿ ಉತ್ಪನ್ನಗಳ ಒಟ್ಟು ರಫ್ತಿನ ಪ್ರಮಾಣ ಶೇ. ೧೩ರಷ್ಟು ಹೆಚ್ಚಳವಾಗಿದೆ.

ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತದಿಂದ ಅಕ್ಕಿ ಹಾಗೂ ವಾಣಿಜ್ಯ ಬೆಳೆಗಳ ರ- ಪ್ರಮಾಣ ಕಳೆದ ಹಣಕಾಸು ವರ್ಷದಲ್ಲಿ ಗಣನೀಯ ವಾಗಿ ಹೆಚ್ಚಳವಾಗಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿ ಸಿದರೆ ಇವುಗಳ ರ- ಪ್ರಮಾಣ ಶೇ. ೧೭. ೧ರಷ್ಟು ಹೆಚ್ಚಳ ಕಂಡಿದ್ದರೆ, ರ- ವಹಿವಾಟು ೭. ೮೨ ಬಿಲಿಯನ್ ಡಾಲರ್ ಗಳಿಂದ ೯. ೧೬ ಬಿಲಿಯನ್ ಡಾಲರ್‌ಗೆ ಜಿಗಿದಿದೆ.

ವರ್ಜೀನಿಯಾ ತಂಬಾಕು ರಫ್ತಿನಲ್ಲಿ ಶೇ. ೩೬. ೬ರಷ್ಟು ಹೆಚ್ಚಳವಾಗಿದ್ದರೆ, ಕಾಫಿ ಶೇ. ೪೦, ಚಹಾ ಶೇ. ೧೦. ೮, ಸಾಂಬಾರ ಪದಾರ್ಥಗಳು ಶೇ. ೪. ೭ರಷ್ಟು ರ- ಏರಿಕೆಯಾಗಿದೆ.

ಅಕ್ಕಿ ರಫ್ತಿನಲ್ಲಿ ಗಣನೀಯ ಹೆಚ್ಚಳ: ೨೦೨೪-೨೫ನೇ ಸಾಲಿನಲ್ಲಿ ಕೃಷಿ ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳ ರ- ೨೫. ೧೪ ಬಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೊತ್ತ ಶೇ. ೧೩ರಷ್ಟು ಹೆಚ್ಚಳವಾಗಿದೆ. ಈ ಹೆಚ್ಚಳದಲ್ಲಿ ಅಕ್ಕಿಯ ಪಾಲು ದೊಡ್ಡದು. ಕಳೆದ ಹಂಗಾಮಿನಲ್ಲಿ ಉತ್ತಮ -ಸಲು ಬಂದ ಕಾರಣ ಭಾರತದಿಂದ ಕೃಷಿ ಉತ್ಪನ್ನಗಳ ರ- ಪ್ರಮಾಣ ಸಾಕಷ್ಟು ಏರಿಕೆ ಕಂಡಿದ್ದು, ೨೦೨೪ರ ಸೆಪ್ಟೆಂಬರ್ ವರೆಗೆ ಅಕ್ಕಿ ರಫ್ತಿಗೆ ಇದ್ದ ನಿರ್ಬಂಧ ಸಡಿಲಿಸಿದ ಕಾರಣ ಅಕ್ಕಿ ರ- ಶೇ. ೨೦ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ದಶಕ ದಿಂದಲೂ ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರ- ರಾಷ್ಟ್ರವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದ ದೇಶಗಳ ನಡುವೆ ಭಾರತ ಅಗ್ರಪಂಕ್ತಿಯನ್ನು ಕಾಯ್ದುಕೊಂಡಿದೆ. ಕೃಷಿ ಉತ್ಪನ್ನಗಳ ಜೊತೆಗೆ ಹೈನೋದ್ಯಮದಿಂದ ಹಾಲು, ಮೊಟ್ಟೆ, ಮಾಂಸ, ಕೋಳಿ ಮಾಂಸಗಳ ರ- ಕೂಡ ಹೆಚ್ಚಳವಾಗಿರುವುದನ್ನು ವಾಣಿಜ್ಯ ಸಚಿವಾಲಯದ ಮಾಹಿತಿ ಹೊರಹಾಕಿದೆ.

Tags:
error: Content is protected !!