ಮಹೇಶ್ ಕೋಗಿಲವಾಡಿ
ಇವರು ವೃತ್ತಿಯಲ್ಲಿ ಅಭಿಯಂತರರು, ಕೊಡಗಿನ ಹಾರಂಗಿ ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ತಮ್ಮ ಬಿಡುವಿನ ವೇಳೆಯಲ್ಲಿ ಜಮೀನಿ ನಲ್ಲಿ ದುಡಿದು ಕೃಷಿ ಮಾಡುತ್ತಾ ಅದರಲ್ಲಿಯೂ ಲಾಭ ಕಾಣುತ್ತಿ ದ್ದಾರೆ ಪಿರಿಯಾಪಟ್ಟಣ ತಾಲ್ಲೂಕಿನ ಆಲನಹಳ್ಳಿಯ ಎ.ಹರೀಶ್.
ಹರೀಶ್ ತಮ್ಮ ಜಮೀನಿನಲ್ಲಿ ಕೃಷಿಯ ಜತೆಗೆ ಹೈನುಗಾರಿಯನ್ನೂ ಮಾಡುತ್ತಿದ್ದಾರೆ. ಮಡದಿ ವಿಜಯಲಕ್ಷ್ಮೀ ಹಾಗೂ ತಮ್ಮ ಮೂವರು ಮಕ್ಕಳೊಂದಿ ಗೆ ನಿತ್ಯ ಬೆಳಿಗ್ಗೆ 5ರಿಂದ 8ಗಂಟೆವರೆಗೆ ಹಾಗೂ ಸಂಜೆ 6 ಗಂಟೆಯ ನಂತರ ಜಮೀನಿನಲ್ಲಿ ಕೆಲಸ ಮಾಡುವ ಇವರು, ಕೃಷಿ ನಮ್ಮ ಬದುಕಿನ ಮೂಲ ಆಧಾರ ಎಂದು ನಂಬಿದ್ದಾರೆ. ವೃತ್ತಿ ಆರಂಭವಾಗುವುದು ಬೆಳಿಗ್ಗೆ 10 ಗಂಟೆಗೆ ಆದ್ದರಿಂದ ಅಲ್ಲಿಯವರೆಗೂ ಹಳ್ಳಿಯ ಜೀವನ ಎಂದರೆ ನಾವು ಕೃಷಿ ಮಾಡಲೇಬೇಕು. ಉದ್ಯೋಗದ ಜತೆ ಜಮೀನಿನಲ್ಲಿಯೂ ಕೆಲಸ ಮಾಡುತ್ತೇನೆ. ಇದರಿಂದ ನನ್ನ ಆರೋಗ್ಯವೂ ಚೆನ್ನಾಗಿದೆ. ಹಳ್ಳಿಗರಾದ ನಮಗೆ ಕೃಷಿಯೇ ಮೂಲ ಉದ್ಯೋಗ ಎನ್ನುವುದು ಹರೀಶ್ ರವರ ಮಾತು.
ತಮ್ಮ 7 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿ ರುವ ಇವರು, ಹೈನುಗಾರಿಕೆಯ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ತಮ್ಮ ತೋಟದಲ್ಲಿ ಸುಮಾರು 12 ಹಸುಗಳು ಹಾಗೂ 8 ಕರುಗಳನ್ನು ಸಾಕಿದ್ದು, ನಿತ್ಯ 120-130 ಲೀ. ಹಾಲು ಉತ್ಪಾದಿಸು ತ್ತಾರೆ. ಒಂದು ಹಸು ಸಾಕಿದರೆ ಅದು ಒಬ್ಬರ ಜೀವನಕ್ಕೆ ಬೇಕಾದ ಆರ್ಥಿಕ ಸ್ಥಿರತೆ ನೀಡುತ್ತದೆ ಎನ್ನುವುದು ಹರೀಶರವರ ನಂಬಿಕೆ.
ತಮ್ಮ ಜಮೀನಿನ ಒಂದೂವರೆ ಎಕರೆ ಭೂಮಿಯಲ್ಲಿ ಹಸುಗಳಿಗಾಗಿಯೇ ಪ್ರೊಟೀನ್ ಯುಕ್ತ ಸೂಪರ್ ನೇಪಿಯರ್ ಹುಲ್ಲನ್ನು ಬೆಳೆದಿದ್ದು, ಎರಡು ಎಕರೆ ಜಮೀನಿನಲ್ಲಿ ಕಾಲಕ್ಕನುಸಾರವಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಉಳಿದ ಭಾಗದಲ್ಲಿ ಕಾಳು ಮೆಣಸು, ಅಡಕೆ, ಕಾಫಿ ಬೆಳೆದಿದ್ದಾರೆ. ಹರೀಶ್‌ರ ತಂದೆಯೂ ಸರ್ಕಾರಿ ಉದ್ಯೋಗದಲ್ಲಿ ಇದ್ದುದರಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ವಾಸ್ತವ್ಯ ಹೂಡುವ ಅವಕಾಶ ಇವರಿಗೆ ದೊರಕಿತು. ವಿವಿಧ ಭಾಗಗಳಲ್ಲಿನ ಕೃಷಿ ಪದ್ಧತಿಯ ಪರಿಚಯ ಮಾಡಿಕೊಂಡರು. ಈಗ ಮಡದಿ ವಿಜಯಲಕ್ಷ್ಮೀ ಜತೆಗೂಡಿ ಹೈನುಗಾರಿಕೆ ಮತ್ತು ಕೃಷಿ ಮಾಡುತ್ತಿದ್ದಾರೆ.
ಹರೀಶ್‌ರವರು ಸರ್ಕಾರಿ ಉದ್ಯೋಗಿಯಾಗಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಈ ವೇಳೆ ಹಸುಗಳ ನಿರ್ವಹಣೆಯನ್ನು ವಿಜಯಲಕ್ಷ್ಮೀ ಅವರು ನೋಡಿ ಕೊಳ್ಳುತ್ತಾರೆ. ಮುಂಜಾನೆ ಹಾಗೂ ಸಂಜೆಯ ವೇಳೆ ಯಲ್ಲಿ ಹರೀಶ್ ಈ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ. ನಮ್ಮ ಭಾಗಗಳಲ್ಲಿ ವಾಣಿಜ್ಯ ಬೆಳೆಗಳನ್ನು ರೈತರು ಹೆಚ್ಚಾಗಿ ಬೆಳೆಯುವುದಿಲ್ಲ. ವಾಣಿಜ್ಯ ಬೆಳೆ ಗಳು ರೈತರಿಗೆ ಆದಾಯ ತಂದುಕೊಡುವ ಬೆಳೆಗಳು. ಅವುಗಳನ್ನು ಬೆಳೆಯುವ ಪ್ರಯೋಗ ಮಾಡುತ್ತಿದ್ದೇನೆ ಎನ್ನುತ್ತಾರೆ ಹರೀಶ್. ಒಂದು ಹಸುವಿನೊಂದಿಗೆ ಹೈನುಗಾರಿಕೆ ಆರಂಭಿ ಸಿದ ಇವರು, ಅದರಿಂದ ಲಾಭ ಕಂಡುಕೊಂಡ ಬಳಿಕ ಅದನ್ನು ಮುಂದುವರಿಸುತ್ತಿದು, ಪ್ರಸ್ತುತ 12 ಹಸು ಗಳಿವೆ. ವೇತನ ಒಂದೆಡೆಯಾದರೆ ಮಕ್ಕಳ ವಿದ್ಯಾ ಭ್ಯಾಸದ ಖರ್ಚು ಹಾಗೂ ಕುಟುಂಬ ನಿರ್ವಹಣೆಗೆ ಹೈನುಗಾರಿಕೆಯಿಂದ ಬರುವ ಹಣ ಸಾಕಾಗುತ್ತಿದೆ ಎನ್ನುತ್ತಾರೆ ಹರೀಶ್.
ಒಂದು ಹಸು ಒಬ್ಬ ವ್ಯಕ್ತಿಯ ಜೀವನ ನಿರ್ವಹಣೆಗೆ ಆರ್ಥಿಕ ಬಲ ನೀಡುತ್ತದೆ. ನಾನೂ ಹೈನುಗಾರಿಕೆ ಆರಂಭಿಸಿದ್ದು, ಒಂದು ಹಸುವಿನಿಂದಲೇ. ಈಗ 12 ಹಸುಗಳಿವೆ. ಹಸುವಿಗೆ ಹಾಕಿದ ಬಂಡವಾಳ 6 ತಿಂಗಳಲ್ಲಿ ವಾಪಸ್ ಬರಲಿದೆ. ಅಲ್ಲದೆ ಕೃಷಿ ನಮ್ಮ ಮೂಲ ಉದ್ಯೋಗವಾದ್ದರಿಂದ ಕೃಷಿಯಿಂದ ಲಾಭ ಕಂಡುಕೊಳ್ಳುವ ಜತೆಗೆ ನಮ್ಮ ಆರೋಗ್ಯ ವನ್ನೂ ಕಾಪಾಡಿಕೊಳ್ಳಬಹುದು. ನಮ್ಮ ಇತರೆ ಕೆಲಸಗಳ ನಡುವೆ ಕೃಷಿ ಮಾಡುವುದು ಎಲ್ಲರ ಕರ್ತವ್ಯವಾಗಬೇಕು.
-ಎ.ಹರೀಶ್, ಕೃಷಿಕ, ಸಹಾಯಕ ಕಾರ್ಯಪಾಲಕ ಅಭಿಯಂತರ, ಹಾರಂಗಿ ಜಲಾಶಯ.