ರಮೇಶ್ ಪಿ. ರಂಗಸಮುದ್ರ
ಕೃಷಿಯಲ್ಲಿ ಖರ್ಚು ಹೆಚ್ಚಾಗಿದ್ದು, ಆದಾಯ ಕಡಿಮೆಯಾಗಿದೆ. ಜತೆಗೆ ಕೃಷಿ ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಮಾರುಕಟ್ಟೆ ಕೊರತೆ ಇವೆಲ್ಲವೂ ಕೃಷಿಕರನ್ನು ಕಾಡುತ್ತಿರುವ ಸಮಸ್ಯೆಗಳಾಗಿವೆ.
ಇಂತಹ ಅನೇಕ ಸಮಸ್ಯೆಗಳ ನಡು ವೆಯೂ ಕೆಲ ಜಾಣ ಕೃಷಿಕರು ಕೃಷಿಯ ಆಗುಹೋಗುಗಳ ಬಗ್ಗೆ ನಿರಂತರ ಅಭ್ಯಾಸ ನಡೆಸಿ ಮಾರುಕಟ್ಟೆಗಳ ಬೇಡಿಕೆಗೆ ಅನು ಸಾರವಾಗಿ ಬೆಳೆ ಬೆಳೆಯುತ್ತಾರೆ. ಜೊತೆಗೆ ಕಡಿಮೆ ಖರ್ಚು ಮಾಡಿ ಹೆಚ್ಚು ಆದಾಯ ಗಳಿಸುವ ಮೂಲಕ ಕೃಷಿಯಲ್ಲಿಯೂ ನೆಮ್ಮದಿ ಕಾಣುತ್ತಾರೆ. ಅಂತಹ ಕಡಿಮೆ ಖರ್ಚು, ನಿರ್ವ ಹಣೆ ಮತ್ತು ನಿರಂತರ ಆದಾಯ ಹೊಂದಿದ ಬೆಳೆ ಗಳಲ್ಲಿ ನುಗ್ಗೆ ಬೆಳೆಯು ಪ್ರಮುಖವಾಗಿದೆ.
ನುಗ್ಗೆ ಬೆಳೆಯು ಬಹುವಾರ್ಷಿಕ ತರಕಾರಿ ಬೆಳೆ. ಭಾರತದಲ್ಲಿ ಹುಟ್ಟಿದ ನುಗ್ಗೆ ಇಂದು ಏಷ್ಯಾ, ಆಫ್ರಿಕಾ, ಅಮೆರಿಕ ದಲ್ಲಿಯೂ ಪ್ರಚಲಿತವಾಗಿದೆ.
ನುಗ್ಗೆಯ ಉಪಯೋಗಗಳು
೧. ನುಗ್ಗೆಯ ಸೊಪ್ಪು, ಹೂ, ಕಾಯಿಗಳನ್ನು ದ್ವಿದಳ ಧಾನ್ಯಗಳೊಂದಿಗೆ ಅಡುಗೆಗೆ ಬಳಸಬಹುದು.
೨. ನುಗ್ಗೆಯ ಬೇರುಗಳಲ್ಲಿನ ಆಲಾಯಿಡ್ ಗಳಾದ ಮೊರಿಂಜಿನ್‌ಗಳಿಂದ ಪರಿಮಳ ಯುಕ್ತ ಕಾರದಪುಡಿಯನ್ನು ತಯಾರಿಸಬಹುದು.
೩. ನುಗ್ಗೆಯ ಬೀಜಗಳಿಂದ ಎಣ್ಣೆಯನ್ನು ತೆಗೆದು ಸಂಧಿವಾತ, ಕೀಲು ನೋವುಗಳಿಗೆ ಔಷಧಿಯನ್ನಾಗಿ ಬಳಸಬಹುದು. ಜೊತೆಗೆ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿಯೂ ಬಳಸಬಹುದು.
೪. ನುಗ್ಗೆಯ ಕಾಂಡ ಮತ್ತು ರೆಂಬೆ ಕೊಂಬೆಗಳಿಂದ ಗುಣಮಟ್ಟದ ಪೇಪರ್ ತಯಾರಿಸಬಹುದು.
೫. ಪುರುಷರಲ್ಲಿ ವೀರ್ಯ ವೃದ್ಧಿ ಮತ್ತು ನಪುಂಸಕತ್ವ ನಿವಾರಿಸಲು, ಸ್ತ್ರೀಯರಲ್ಲಿ ಅಂಡಾಣುವರ್ಧಕವಾಗಿ ನುಗ್ಗೆ ಹೂ, ಬೀಜ, ಕಾಯಿಗಳನ್ನು ಬಳಸಲಾಗುತ್ತದೆ.
ಪೋಷಕಾಂಶಗಳು
ನುಗ್ಗೆಯ ಎಲೆಯಲ್ಲಿ ಶೇ. ೭೬ ನೀರಿನ ಅಂಶ, ಶೇ. ೧೨. ೫ ಶರ್ಕರ ಪಿಷ್ಟ, ೪೪೦ ಮಿಲಿ ಗ್ರಾಂ ಕ್ಯಾಲ್ಸಿಯಂ, ಶೇ. ೧. ೭ ಕೊಬ್ಬಿನಾಂಶ ಶೇ. ೬. ೭ ಪ್ರೋಟೀನ್, ಶೇ. ೨. ೩ ಖನಿಜಗಳು, ಶೇ. ೮. ೫ ಕಬ್ಬಿಣಾಂಶ ವಿಟಮಿನ್ ಸಿ, ವಿಟಮಿನ್ ಎ ಅಂಶಗಳು ಹೇರಳವಾಗಿವೆ.
ನುಗ್ಗೆ ಕಾಯಿಯಲ್ಲಿ ಶೇ. ೮೭ ನೀರಿನ ಅಂಶ, ಶೇ. ೩. ೭ ಶರ್ಕರ ಶೇ. ೪. ೮ ನಾರಿನಾಂಶ, ಶೇ. ೩೦ ಕ್ಯಾಲ್ಸಿಯಂ, ೧೧೦ ಮಿಲಿ ಗ್ರಾಂ ರಂಜಕ, ಶೇ. ೨. ೫ ಪ್ರೋಟಿನ್, ಶೇ. ೦. ೧ ಕೊಬ್ಬಿನಾಂಶ, ಶೇ. ೨. ೦ ಖನಿಜ ಗಳು, ಶೇ. ೫. ೦ ಕಬ್ಬಿಣಾಂಶ ಜೊತೆಗೆ ವಿಟ ಮಿನ್ ಸಿ, ವಿಟಮಿನ್ ಎ ಥಾಯಾ ಮೀನ್, ರೈಬೋಮಿನ್ ಅಂಶಗಳು ಹೇರಳವಾಗಿವೆ.
ಇನ್ನು ನುಗ್ಗೆಯ ಬೀಜದಲ್ಲಿ ಶೇ. ೯. ೫ ನೀರಿನ ಅಂಶ, ಶೇ. ೩೪. ೭ ಕೊಬ್ಬಿನಾಂಶ, ಶೇ. ೩೮. ೪ ಪ್ರೋಟಿನ್, ೩. ೩ ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ ಇದ್ದು ಮಾನವ ಮತ್ತು ಸಾಕುಪ್ರಾಣಿಗಳಿಗೆ ಆರೋಗ್ಯದ ಭಂಡಾರವಾಗಿದೆ.
ಕರ್ನಾಟಕಕ್ಕೆ ಸರಿ ಹೊಂದುವ ನುಗ್ಗೆ ತಳಿಗಳು
ನುಗ್ಗೆಯಲ್ಲಿ ವಿವಿಧ ತಳಿಗಳಿದ್ದು, ಅವುಗಳಲ್ಲಿ ಚವಕಚೇರಿ ಮುರುಂಗ, ಜಿ. ಕೆ. ವಿ. ಕೆ-೨, ಧನರಾಜ ೬/೪ ಆರು ಸೆಲೆಕ್ಷನ್, ಭಾಗ್ಯ ನುಗ್ಗೆ ಈ ಪ್ರಮುಖ ತಳಿಗಳು ಮಾತ್ರ ಕರ್ನಾಟಕಕ್ಕೆ ಹೊಂದಿಕೊಳ್ಳಲಿದ್ದು, ರೈತರು ನಿರಂತರವಾಗಿ ಇಳುವರಿ ಪಡೆಯ ಬಹುದಾಗಿದೆ
ನೆಗ್ಗೆ ಬೆಳೆಯುವುದು ಹೇಗೆ?
ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ನೀರಿಲ್ಲದ ಕಪ್ಪುಮಣ್ಣು ನುಗ್ಗೆಗೆ ಸೂಕ್ತ. ಸಾವಯವ ಪದ್ಧತಿಯು ನುಗ್ಗೆಗೆ ಸೂಕ್ತವಾಗಿದ್ದು, ಸಿದ್ಧಪಡಿಸಿದ ಭೂಮಿಯಲ್ಲಿ ನೇರ ಬೀಜ ಬಿತ್ತನೆ, ಪಾಲಿಥಿನ್ ಕವರ್‌ಗಳಲ್ಲಿ ಬೆಳೆಸಿದ ಸಸಿಗಳ ನಾಟಿ, ಕಾಂಡದ ತುಂಡುಗಳ ಮೂಲಕ ನಾಟಿ ಮಾಡಬಹುದು. ಹೀಗೆ ಎತ್ತರದ ತಳಿಯಾದರೆ ೪೪ ಮೀಟರ್ ಅಂತರ, ೪೫೪೫ ಸೆಂ. ಮೀ. ಆಳದಲ್ಲಿ, ಗಿಡ್ಡ ತಳಿಗಳಾದರೆ ೨೨ ಮೀ. ಅಂತರ, ೪೫೪೫ ಸೆಂ. ಮೀ. ಆಳದ ಕುಣಿಯಲ್ಲಿ ನಾಟಿ ಮಾಡಬಹುದು. ಬೇವಿನ ಹಿಂಡಿ, ಎರೆಹುಳು ಗೊಬ್ಬರ, ಜೀವಾಮೃತ ಬಳಕೆ ಮಾಡಿ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಒಂದು ಎಕರೆಗೆ ಒಂದು ಗುಂಡಿಯಲ್ಲಿ ಎರಡು ಗಿಡದಂತೆ ೮೦ ರಿಂದ ೯೦ ಗಿಡಗಳನ್ನು ನೆಡಬಹುದು.





