Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಯೋಗ ಕ್ಷೇಮ : ವಿಟಮಿನ್ ‘ಎ’ ಕೊರತೆಯಾಗದಿರಲಿ

ಆಹಾರವೇ ಆರೋಗ್ಯದ ಗುಟ್ಟು. ಎಲ್ಲ ಜೀವಸತ್ವಗಳನ್ನು ಒಳಗೊಂಡ ಆಹಾರ ಸೇವನೆಯಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಕೆಲವು ಬಾರಿ ದೇಹದಲ್ಲಿ ಕೆಲವು ವಿಟಮಿನ್‌ಗಳ ಕೊರತೆಯಾದಾಗ ಅದು ಬೇರೆ ಬೇರೆ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಎ,ಬಿ,ಸಿ,ಡಿ ಹೀಗೆ ದೇಹಕ್ಕೆ ಬೇಕಾದ ಜೀವಸತ್ವಗಳನ್ನು ವಿಂಗಡಣೆ ಮಾಡಲಾಗಿದೆ. ಇವುಗಳನ್ನು ಒಂದೊಂದರ ಕೊರತೆಯೂ, ಹೆಚ್ಚು ಆಗುವುದೂ ಸಮಸ್ಯೆಗಳಿಗೆ ಎಡೆಮಾಡಕೊಡುತ್ತದೆ.

ಈಗ ನಮ್ಮ ದೇಹಕ್ಕೆ ವಿಟಮಿನ್ ಎ ಎಷ್ಟು ಮುಖ್ಯ, ಅದರ ಕೊರತೆಯಿಂದ ಏನೇನು ಸಮಸ್ಯೆ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ವಿಟಮಿನ್ ಎ ಕೊರತೆಯು ಕಣ್ಣುಗಳು, ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

* ಕಣ್ಣಿನ ಸಮಸ್ಯೆಗಳು: ದೃಷ್ಟಿ ಮಂಜಾಗುವುದು, ಕಣ್ಣುಗಳು ಒಣಗಿದಂತಾಗುವುದು, ಕುರುಡುತನ , ಕಾರ್ನಿಯಾಗೆ ಇದು ದಾರಿಯಾಗಬಹುದು. ದೀರ್ಘಕಾಲದವರೆಗೆ ದೇಹದಲ್ಲಿ ವಿಟಮಿನ್ ಎ ಕೊರತೆಯುಂಟಾದರೆ ಅದರಿಂದ ಇರುಳುಗಣ್ಣು ಸಮಸ್ಯೆ ಉಂಟಾಗುತ್ತದೆ.

*ಚರ್ಮದ ಸಮಸ್ಯೆಗಳು: ಚರ್ಮದ ಕೋಶಗಳಿಗೆ ವಿಟಮಿನ್ ಎ ಅತ್ಯವಶ್ಯಕ. ಇದರ ಕೊರತೆಯಿಂದ ಎಸ್ಜಿಮಾ ಅಥವಾ ಒಣ ಚರ್ಮದಂತಹ ಕಾಯಿಲೆ ಉಂಟಾಗಬಹುದು.

ಕೊರತೆ ನಿವಾರಣೆ ಹೇಗೆ?

ಕೆಲವು ಹಣ್ಣು, ತರಕಾರಿ, ಆಹಾರ ಪದಾರ್ಥಗಳಲ್ಲಿ ವಿಟಮಿನ್ ಎ ಹೇರಳವಾಗಿ ಇದ್ದು, ಇವುಗಳ ಸೇವನೆಯಿಂದ ಈ ಜೀವಸತ್ವವನ್ನು ಪಡೆದುಕೊಳ್ಳಬಹುದು.
ಕ್ಯಾರೆಟ್, ಸಿಹಿ ಗೆಣಸು, ಸೊಪ್ಪು, ಹಸಿರು ತರಕಾರಿಗಳು, ಮೊಟ್ಟೆ, ಬೆಣ್ಣೆ ಹಣ್ಣು, ಪಪ್ಪಾಯಿ, ಸೀಬೆಹಣ್ಣು, ಮೀನು, ಮಾಂಸಗಳಲ್ಲಿ ವಿಟಮಿನ್ ಎ ಪ್ರಮಾಣ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ