ಸುಧಾರಿತ ತಳಿಗಳು ಮತ್ತು ಬೇಸಾಯಗಳ ಪ್ರಾತ್ಯಕ್ಷಿಕೆ
ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳು ಮೈಸೂರು, ಹಾಸನ, ಚಾಮರಾಜನಗರ, ತುಮಕೂರು ಹಾಗೂ ಕಾಡಾ ಸಹಯೋಗದಲ್ಲಿ ಏರ್ಪಡಿಸಿರುವ ಈ ಬಾರಿಯ ಕೃಷಿ ಮೇಳ ಸಾಕಷ್ಟು ವೈವಿಧ್ಯಕ್ಕೆ ಸಾಕ್ಷಿಯಾಗಲಿದೆ ಎಂಬುದು ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ.ಎಸ್.ಎಸ್.ಪ್ರಕಾಶ್ ಅಭಿಪ್ರಾಯ.
ಪ್ರಮುಖ ಆಕರ್ಷಣೆಗಳು
- ಭತ್ತದ ಸುಧಾರಿತ ತಳಿಗಳ ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ, ಶ್ರೀಪದ್ಧತಿ ಹಾಗೂ ಏರೋಬಿಕ್ ಭತ್ತದ ಬೇಸಾಯ ಪ್ರಾತ್ಯಕ್ಷಿಕೆ, ಡ್ರಂಸೀಡರ್‌ನಿಂದ ಹಾಗೂ ಯಂತ್ರಚಾಲಿತ ನಾಟಿ ಪ್ರಾತ್ಯಕ್ಷಿಕೆ.
- ನೂತನ ರಾಗಿ ತಳಿಗಳ ಪ್ರಾತ್ಯಕ್ಷಿಕೆ, ಮುಸುಕಿನ ಜೋಳ ಮತ್ತು ಶಕ್ತಿಮಾನ್ ಜೋಳದ ನೂತನ ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ.
- ಸುಧಾರಿತ ಕಬ್ಬಿನ ತಳಿಗಳು, ಅಂಗಾಂಶ ಕೃಷಿ ತಂತ್ರಜ್ಞಾನದಲ್ಲಿ ರೋಗಮುಕ್ತ ಕಬ್ಬಿನ ಸಸಿಗಳ ಉತ್ಪಾದನೆ, ಕಬ್ಬಿನಲ್ಲಿ ಆಧುನಿಕ ಬೇಸಾಯ ತಾಂತ್ರಿಕತೆಗಳು, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಯ ಪ್ರಾತ್ಯಕ್ಷಿಕೆ.
- ಕಬ್ಬು ನಾಟಿ ಮಾಡುವ ಹಾಗೂ ತರಗು ಪುಡಿ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಹತ್ತಿ ತಳಿಗಳ ಪ್ರಾತ್ಯಕ್ಷಿಕೆ
- ಮೇವಿನ ಬೆಳೆಗಳ ಸುಧಾರಿತ ತಳಿಗಳು, ರಸಮೇವು, ಜಲ ಕೃಷಿಯಲ್ಲಿ ಮೇವು ಉತ್ಪಾದನೆ ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳು ಬೇಳೆಗಳು, ನೀರು ನಿರ್ವಹಣಾ ತಂತ್ರಜ್ಞಾನ, ದೂರ ಸಂವೇದಿ ನೀರಾವರಿ ಪದ್ಧತಿ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಕೃಷಿ ವಸ್ತು ಪ್ರದರ್ಶನ, ಸಮಗ್ರ ಮೀನುಸಾಕಾಣಿಕೆ, ವಿವಿಧ ಸೊಪ್ಪು, ತರಕಾರಿ, ಹೂವಿನ ಬೆಳೆಗಳ ಪ್ರಾತ್ಯಕ್ಷಿಕೆ.