Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಸಿನಿಮಾಲ್‌ : ವೇದ 50 ದಿನದ ಆನಂದ

ಶಿವರಾಜಕುಮಾರ್ ಅಭಿನಯದ 125ನೇ ಚಿತ್ರ ‘ವೇದ’. ಈ ಚಿತ್ರವನ್ನು ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದು, ಹರ್ಷ ನಿರ್ದೇಶಿಸಿದ್ದಾರೆ. ಚಿತ್ರ ತೆರೆಕಂಡು ಯಶಸ್ವಿಯಾಗಿ ಐವತ್ತು ದಿನಗಳನ್ನು ಪೂರೈಸಿದ ಸಂಭ್ರಮವನ್ನು ನಿರ್ಮಾಪಕಿ ಗೀತಾ ಅವರು ತಮ್ಮಮನೆಯಲ್ಲಿ ಆಚರಿಸಿಕೊಂಡರು. ‘ವೇದ’ ಚಿತ್ರದ ಸಂಭ್ರಮದ ಜೊತೆಗೆ, ಶಿವರಾಜಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು 37 ವರ್ಷಗಳನ್ನುಪೂರೈಸಿದ ಸಡಗರವೂ ಸೇರಿಕೊಂಡಿತ್ತು. ಶಿವಣ್ಣ ಅವರ ‘ವೇದ’ ಚಿತ್ರ ಹೆಣ್ಣುಮಕ್ಕಳನ್ನು ಗೌರವಿಸಬೇಕು ಎನ್ನುವ ಸಂದೇಶವಿದ್ದು, ಆದಿತಿ ಸಾಗರ್, ಗಾನವಿ ಲಕ್ಷ್ಮಣ್‌, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ಉಮಾಶ್ರೀ ಮುಖ್ಯಪಾತ್ರಗಳಲ್ಲಿದ್ದರು. ಚಿತ್ರತಂಡಕ್ಕೆ 50 ದಿನ ಪೂರೈಸಿದ ನೆನಪಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. 1986ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ ಮೊದಲ ಚಿತ್ರ ‘ಆನಂದ್’, ಅವರ ಅಮ್ಮ ಪಾರ್ವತಮ್ಮ ರಾಜಕುಮಾರ್ ನಿರ್ಮಾಣದ ಚಿತ್ರವಾದರೆ, 125ನೇಚಿತ್ರದ ನಿರ್ಮಾಪಕಿ ಪತ್ನಿ ಗೀತಾ ಶಿವರಾಜಕುಮಾರ್. ಇದನ್ನು ಸ್ವತಃ ಶಿವರಾಜಕುಮಾರ್ ನೆನಪಿಸಿಕೊಂಡು, ತಮ್ಮಅಭಿನಯ ಜೀವನಯಾನದಲ್ಲಿ ನೆರವಾದ ಎಲ್ಲರನ್ನೂ ಸ್ಮರಿಸಿಕೊಂಡರು. ಶಿವರಾಜಕುಮಾರ್ ಅಭಿನಯದ ನೂರನೇ ಚಿತ್ರದ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಿ, ಅವರ ಚಿತ್ರಗಳಲ್ಲಿ ಕೆಲಸ ಮಾಡಿದ ಸಹಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಪ್ರದರ್ಶಕರು, ವಿತರಕರು… ಹೀಗೆ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಗೀತಾ ಶಿವರಾಜಕುಮಾರ್. 125ನೇ ಚಿತ್ರದ 50ನೇ ದಿನ ಸಮಾರಂಭವನ್ನು ತಮ್ಮ ಮನೆಯಲ್ಲಿ ಏರ್ಪಡಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!