Mysore
28
clear sky

Social Media

ಶುಕ್ರವಾರ, 17 ಜನವರಿ 2025
Light
Dark

ಸಿನಿಮಾಲ್‌ : ಈ ವಾರ ಎರಡು, ಮತ್ತೊಂದು

ಮುಂದಿನ ವಾರ ಸುದೀಪ್ ಮುಖ್ಯಭೂಮಿಕೆಯ, ಬಹುನಿರೀಕ್ಷೆಯ ಚಿತ್ರ ‘ವಿಕ್ರಾಂತ್ ರೋಣ’ ಬಿಡುಗಡೆ ಇರುವ ಕಾರಣ ಈ ವಾರ ಎರಡು ಚಿತ್ರಗಳು ಚಿತ್ರಮಂದಿರಗಳಲ್ಲಿ, ಒಂದು ಒಟಿಟಿ ತಾಣದಲ್ಲಿ ಪ್ರದರ್ಶನ ಕಾಣುತ್ತಿವೆ. ಅವು ‘ಶ್ರೀರಂಗ’, ‘ಮಾರಾಯ’ ಮತ್ತು ಒಟಿಟಿಯಲ್ಲಿ ಪ್ರಸಾರವಾಗಲಿರುವ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ?’.

‘ಶ್ರೀರಂಗ’

ರುತು ಕ್ರಿಯೇಷನ್ ಸಂಸ್ಥೆಯ ಮೂಲಕ ಸುಮಾ ಸಿ.ಆರ್.ನಿರ್ಮಿಸಿರುವ ಚಿತ್ರ ‘ಶ್ರೀರಂಗ’. ಬಿ.ಎಂ. ದಿಲೀಪ್ ಸಹನಿರ್ಮಾಪಕರಾಗಿರುವ ಈ ಚಿತ್ರದ ರಚನೆ, ನಿರ್ದೇಶನದ ಜೊತೆ ಪ್ರಮುಖ ಪಾತ್ರವನ್ನು ನಿರ್ವಹಿಸಿರುವವರು ವೆಂಕಟ್ ಭಾರದ್ವಾಜ್. ಮುಖ್ಯಭೂಮಿಕೆಯಲ್ಲಿ ಶಿನವ್ ಜೊತೆಗೆ, ರಚನಾ ರಾಯ್, ರೂಪ ರಾಯಪ್ಪ, ವಂದನಾ ಶೆಟ್ಟಿ, ಗುರುರಾಜ್ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್ ಜಯರಾಮ್, ಚಿಪ್ಸ್ ಬಾಬು, ಗಿರೀಶ್, ಮಣಿ ಮಾರನ್, ಮಾಸ್ಟರ್ ಚಿರಾಯು ಚಕ್ರವರ್ತಿ, ತ್ರಿಧಾರ ಲಕ್ಷ್ಮಣ್, ಪುಷ್ಕಲ್ ಪ್ರೀತ್, ರಜತ್ ರಿತಿಕ್, ಐಶಾನಿ ಇದ್ದಾರೆ. ಮಿಥುನ್ ಛಾಯಾಗ್ರಹಣ, ಚಂದನ್ ಸಂಕಲನ, ಶಂಕರ್ ರಾಮನ್ ಸಂಭಾಷಣೆ, ಸಮೀರ್ ಕುಲಕರ್ಣಿ ಸಂಗೀತ ಸಂಯೋಜನೆ ಇದೆ.

‘ಮಾರಾಯ’

ಶ್ರೀ ಹೊನ್ನಾದೇವಿ ಗಂಗಾಧೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಎನ್.ಜಿ.ಸುಜಾತಾ ನಂದನ್ ನಿರ್ಮಿಸಿರುವ ಚಿತ್ರ ‘ಮಾರಾಯ’. ಈ ಚಿತ್ರದ ರಚನೆ, ನಿರ್ದೇಶನ ಉದಯ್ ಪ್ರೇಮ್ ಅವರದು. ವಿನು ಮನಸು ಸಂಗೀತ ಸಂಯೋಜನೆ, ಉದಯಾನಂದ ಬರ್ಕೆ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಇರುವ ಈ ಚಿತ್ರದ ತಾರಾಗಣದಲ್ಲಿ ದಿವಾಕರ ಶರ್ಮ, ದಿನೇಶ್ ಕುಮಾರ್, ವಿನಯ ಪ್ರಸಾದ್, ಜೆಕೆ, ಚಿಲ್ಲರ್ ಮಂಜು, ಡಿಂಗ್ರಿ ನಾಗರಾಜ್, ಶ್ರೇಯಾ ಶ್ರೀನಿವಾಸ್, ಬಸು ಮುಂತಾದವರು ಇದ್ದಾರೆ. ರಾಜೇಶ್ ಕೃಷ್ಣನ್ ಚಿತ್ರದ ಶೀರ್ಷಿಕೆ ಗೀತೆ ಹಾಡಿದ್ದಾರೆ.

‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’

ಅಮ್ರೇಜ್ ಸೂರ್ಯವಂಶಿ ನಿರ್ಮಿಸಿರುವ ಚಿತ್ರ ‘ನೋಡಿ ಸ್ವಾಮಿ ಇವನು ಇರೋದೇ ಹೀಗೆ?’. ‘ಆಪರೇಷನ್ ಅಲಮೇಲಮ್ಮ’,‘ಕವಲು ದಾರಿ’ ಚಿತ್ರಗಳ ಮೂಲಕ ಹೆಸರಾದ ನಟ ರಿಷಿ ಕೇಂದ್ರ ಪಾತ್ರದಲ್ಲಿರುವ ಈ ಚಿತ್ರವನ್ನು ಇಸ್ಲಾಹುದ್ದೀನ್ ಎನ್.ಎಸ್. ಬರೆದು ನಿರ್ದೇಶಿಸಿದ್ದಾರೆ.

ರಿಶಿ ಅವರೊಂದಿಗೆ ಧನ್ಯ ಬಾಲಕೃಷ್ಣ, ಗ್ರೀಷ್ಮಾ ಶ್ರೀಧರ್, ಅಪೂರ್ವ ಎಸ್ ಭಾರಧ್ವಜ್, ಭವಾನಿ ಪ್ರಕಾಶ್, ನಾಗಭೂಷಣ, ಮಹದೇವ್ ಪ್ರಸಾದ್ ಮುಂತಾದವರಿದ್ದಾರೆ. ವಿಷ್ಣು ಪ್ರಸಾದ್ ಪಿ, ದುಲೀಪ್ ಕುಮಾರ್ ಎಂ.ಎಸ್ ಛಾಯಾಗ್ರಹಣ, ಪ್ರಸನ್ನ ಸಿವರಾಮನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ