ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ತಾರೆ ರಮ್ಯಾ ಮರಳಿದ್ದಾರೆ. ಈ ಬಾರಿ ನಿರ್ಮಾಣದತ್ತ ಅವರ ಆಸಕ್ತಿ. ತಮ್ಮ ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ಅವರು ನಿರ್ಮಿಸುತ್ತಿರುವ ಮೊದಲ ಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ಚಿತ್ರದ ಚಿತ್ರೀಕರಣ ಮುಗಿದು, ಚಿತ್ರೀಕರಣೋತ್ತರ ಕೆಲಸಗಳು ಈಗ ನಡೆಯುತ್ತಿವೆ. ಇದು ಒಂದು ಪ್ರಬುದ್ಧ ಪ್ರೇಮಕಥೆ, ಒಂದು ಭಾವುಕ ಪ್ರಯಾಣ ಎನ್ನಲಾಗಿದ್ದು, ರಾಜ್ ಬಿ. ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸುತ್ತಿರುವದಷ್ಟೇ ಅಲ್ಲದೆ, ಮುಖ್ಯಪಾತ್ರಧಾರಿಯೂ ಕೂಡಾ. ಸಿರಿ ರವಿಕುಮಾರ್ ಅವರ ಜೋಡಿಯಾಗಿ ನಟಿಸಿದ್ದಾರೆ. ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹಾ ಶರ್ಮಾ, ಜೆ.ಪಿ.ತುಮ್ಮಿನಾಡ್, ಗೋಪಾಲ ಕೃಷ್ಣ ದೇಶಪಾಂಡೆ ತಾರಾಗಣದಲ್ಲಿನ ಇತರರು. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮತ್ತು ಸಂಕಲನ, ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ತಮ್ಮ ನಿರ್ಮಾಣದ ಮೊದಲ ಚಿತ್ರದಲ್ಲಿ ರವ್ಯಾಅವರೇ ನಟಿಸುವುದಾಗಿ ಮೊದಲು ಹೇಳಿದ್ದರೂ, ಕೊನೆಯ ಹಂತದಲ್ಲಿ ಸಿರಿ ರವಿಕುಮಾರ್ ಅವರನ್ನು ಆರಿಸಿದ್ದಾರೆ. ರಮ್ಯಾ ಮತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಡಾಲಿ ಧನಂಜಯ್ ಜೋಡಿ. ಚಿತ್ರದ ಹೆಸರು ‘ಉತ್ತರಕಾಂಡ’





