Mysore
26
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಸಿನಿಮಾಲ್‌ : ಮೈಸೂರಿನಲ್ಲಿ ಕೋಮಲ್‌ಕುಮಾರ್ ಮತ್ತು ಪ್ರಕಾಶ್‌ರೈ

ಅಣ್ಣ ಜಗ್ಗೇಶ್ ಅವರ ಸಲಹೆಯಂತೆ ಕಳೆದ ಐದು ವರ್ಷಗಳ ಕಾಲ ನಟನೆಯಿಂದ ದೂರವಿದ್ದ ನಟ ಕೋಮಲ್‌ಕುಮಾರ್ ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ. ಅವರು ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ‘ಕಾಲಾಯತಸ್ಮೈ ನಮಃ?. ಈ ಚಿತ್ರವನ್ನು ಕೋಮಲ್ ಅವರ ಪತ್ನಿ ಅನುಸೂಯ ನಿರ್ಮಿಸುತ್ತಿದ್ದು, ಮತಿವಣ್ಣನ್ ನಿರ್ದೇಶಿಸುತ್ತಿದ್ದಾರೆ. ಅದರ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ನಟ ಪ್ರಕಾಶರೈ ಅಭಿನಯದ ಚಿತ್ರೀಕರಣ ಇಲ್ಲಿ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿದೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ.ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೋಮಲ್‌ಕುಮಾರ್, ಪ್ರಕಾಶ್‌ರೈ ಅವರೊಂದಿಗೆ ಆಸಿಯಾ ಫಿರ್ದೋಸ್, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!