Mysore
28
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ವಿದ್ಯಾಕೇಂದ್ರ ಪಾತ್ರದ ‘ಬೇಬೋ’ ಆದ್ರೆ ಇವರು ಕರೀನಾ ಅಲ್ಲ

ಈ ಹಿಂದೆ ‘ಯುದ್ಧ ಮತ್ತು ಸ್ಥಾತಂತ್ರ್ಯ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ವಿದ್ಯಾ, ಈಗ ‘ಬೇಬೋ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಜಯ ಹರಿಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ವಿ.ಕೆ.ಕಂಬೈನ್ಸ್ ಲಾಂಛನದಲ್ಲಿ ವಿದ್ಯಾ ಅವರ ಬಂಧುಗಳಾದ ಸಂತೋಷ್ ವಿಜಯ್ ಮತ್ತು ಸುಪ್ರೀಶ್ ವಿಜಯ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇಷ್ಟಕ್ಕೂ ‘ಬೇಬೋ’ ಎಂದರೇನು ಎಂಬ ಪ್ರಶ್ನೆಯನ್ನು‌ ವಿದ್ಯಾ ಮುಂದಿಟ್ಟರೆ, ‘ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ಬೇಬೋ ಎಂಬ ಅಡ್ಡ ಹೆಸರಿದೆ. ಇಲ್ಲಿ ನಾಯಕಿಯ ಹೆಸರು ಮಹಾಲಕ್ಷ್ಮೀ, ಆಕೆಗೆ ಕರಿನಾ ಕಪೂರ್‌ ಎಂದರೆ ಬಹಳ ಇದ್ದ. ಅವರಂತ ಜೀವನದಲ್ಲಿ ಆಗಬೇಕು ಎಂದು ಕನಸು ಕಾಣುತ್ತಿರುತ್ತಾಳೆ. ಹಾಗಾಗಿ, ಆಕೆಯ ಗೆಳತಿಯರು ಆಕೆಯನ್ನು ಬೇಬೋ ಎಂದು ಕರೆಯುತ್ತಿರುತ್ತಾರೆ. ಅದೇ ಕಾರಣಕ್ಕೆ ಚಿತ್ರಕ್ಕೆ ಈ ಹೆಸರಿಟ್ಟಿದ್ದೇವೆ’ ಎಂದರು.

ಈ ಚಿತ್ರದ ಕುರಿತು ಮಾತನಾಡುವ ನಾಯಕಿ ವಿದ್ಯಾ, “ಸಾಮಾನ್ಯವಾಗಿ ಮನುಷ್ಯ ದಪ್ಪಗಿದ್ದರೆ, ಆತನನ್ನು ಸಮಾಜ ದೂರ ಇಟ್ಟು ಬಿಡುತ್ತದೆ. ಅವರಿಂದ ಏನೂ ಕೆಲಸವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಈ ಚಿತ್ರದಲ್ಲಿ ನಾನು ಕ್ಲಾಸಿಕಲ್ ಡ್ಯಾನ್ಸ‌ರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ, ಮನಸ್ಸು ಮಾಡಿದರೆ ಹೆಚ್ಚು ತೂಕವಿರುವವರು ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಹೇಳುವ ಚಿತ್ರವಿದು’ ಎಂದರು.

ನಿರ್ದೇಶಕ ಜಯ ಹರಿಪ್ರಸಾದ್, “ಇದೊಂದು ನೃತ್ಯದ ಕುರಿತಾದ ಚಿಕ್ಕ, ದಪ್ಪ ಇರುವ ವ್ಯಕ್ತಿಯೊಬ್ಬರು ನೃತ್ಯದಲ್ಲಿ ದೊಡ್ಡ ಸಾಧನೆ ಮಾಡುವ ಕಥೆ ಇರುವ ಚಿತ್ರ. ನಾವು ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಈ ಚಿತ್ರದ ಮೂಲಕ ಹೇಳುದ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ಬೇಬೋ’ ಚಿತ್ರದಲ್ಲಿ ವಿದ್ಯಾ ತಾಯಿಯಾಗಿ ರೇಖಾ ದಾಸ್‌ ಅಭಿನಯಿಸಿದರೆ, ರಾಧಾ ರಾಮಚಂದ್ರ ಆಧುನಿಕ ಅಜ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿಲ್ ಮತ್ತು ಸೂರ್ಯವರ್ಧನ್ ಎಂಬ ಇಬ್ಬರು ಹೊಸನಾಯಕರನ್ನು ಚಿತ್ರದ ಮೂಲಕ ಪರಿಚಯಿಸಲಾಗುತ್ತಿದೆ. ‘ಬೇಬೋ’ ಚಿತ್ರಕ್ಕೆ ‘ಆದ್ರೆ ಇವ್ಳು ಕರೀನಾ ಅಲ್ಲ’ ಎಂಬ ಅಡಿ ಬರಹವಿದ್ದು, ಚಿತ್ರಕ್ಕೆ ವಿ.ಮನೋಹರ್ ಸಂಗೀತ ಸಂಯೋಜನೆ ಮತ್ತು ಮೋಹನ್ ಕುಮಾರ್ ಛಾಯಾಗ್ರಹಣವಿದೆ.

Tags:
error: Content is protected !!