Mysore
19
overcast clouds
Light
Dark

ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸಾಕಷ್ಟು ಭಿನ್ನ ಪಾತ್ರಗಳ ಮೂಲಕ ಮನಗೆದ್ದ ನಟ ಲೋಹಿತಾಶ್ವ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು ಒಂದು ತಿಂಗಳ ಕಾಲ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೂಲತಃ ತುಮಕೂರಿನ ತೊಂಡಗೆರೆ ಗ್ರಾಮದವರಾದ ಲೋಹಿತಾಶ್ವ ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಂಗ್ಲ ಪ್ರಾಧ್ಯಾಪಕಾರಾಗಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದರು.

500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಲೋಹಿತಾಶ್ವ ಅವರು ನಿವೃತ್ತ ಉಪನ್ಯಾಸಕರೂ ರಂಗ ಕಲಾವಿದರೂ ಆಗಿದ್ದಾರೆ.
ಲೋಹಿತಾಶ್ವಅವರ ಪುತ್ರ ಶರತ್ ಲೋಹಿತಾಶ್ವ ಆಸ್ಪತ್ರೆಯಲ್ಲಿಯೇ ಇದ್ದು ತಂದೆಯ ಆರೋಗ್ಯದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡುತ್ತಿದ್ದರು.

ಚಿಕ್ಕ ವಯಸ್ಸಿನಿಂದಲೂ ಅವರಿಗೆ ನಟನೆಯಲ್ಲಿ ಆಸಕ್ತಿ ಇತ್ತು. ವಿದ್ಯಾರ್ಥಿ ಆಗಿದ್ದಾಗಿನಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಅವರು ತುಂಬ ಖ್ಯಾತಿ ಗಳಿಸಿದ್ದರು.

ಪ್ರಸಿದ್ಧ ನಟರ ಜೊತೆ ತೆರೆ ಹಂಚಿಕೊಂಡಿದ್ದ ಇವರು ವಿಲನ್ ಆಗಿಯೂ ನಟಿಸಿ ಗಮನ ಸೆಳೆದಿದ್ದರು. ಅವರ ಮಗ ಶರತ್‌ ಲೋಹಿತಾಶ್ವ ಕೂಡ ನಟನಾಗಿ ಸೈ ಎನಿಸಿಕೊಂಡಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರುಅಕ್ಟೋಬರ್​ 4ರಂದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಪ್ರಶಸ್ತಿಗಳು:
* ಕರ್ನಾಟಕ ರಾಜ್ಯ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – 2013.
* ಉದಯ ಸನ್ ಫಿಸ್ಟ್ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
* ಏರ್ ಟೆಲ್ ಕಸ್ತೂರಿ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
* ಮೈಸೂರು ಮಿನಿರಲ್ಸ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಕಡ್ಡಿಪುಡಿ ( 2014).

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ