Mysore
23
overcast clouds

Social Media

ಗುರುವಾರ, 02 ಜುಲೈ 2026
Light
Dark

ದರ್ಶನ್‌ ಗೆ ಚಪ್ಪಲಿ ಎಸೆತ; ನನ್ನ ಮನಸ್ಸಿಗೆ ನೋವುಂಟು ಮಾಡಿದೆ : ಶಿವಣ್ಣ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌ ಅವರು ತಮ್ಮ ಬಹುಬೇಡಿಕೆಯ ಚಿತ್ರ ಕ್ರಾಂತಿ ಸಿನಿಮಾದ  ಪ್ರಚಾರದ ವೇಳೆ ಕಿಡಿಗೇಡಿಗಳು ದರ್ಶನ ಮೇಲೆ ಚಪ್ಪಲಿ ಎಸೆದ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಿನ್ನೆ ನಡೆದಿದೆ.

ನಟ ದರ್ಶನ್‌ ತೂಗದೀಪ ಅಭಿಯನದ ಬಹುನಿರೀಕ್ಷಿತ ಕ್ರಾಂತಿ ಚಿತ್ರದ “ಬೊಂಬೆ, ಬೊಂಬೆ’ ಆಡಿಯೋ ಬಿಡುಗಡೆ ಸಮಾರಂಭ ನಗರದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ರಾತ್ರಿ ನಡೆಯಿತು. ಈ ವೇಳೆ ದರ್ಶನ ನೋಡಲು ಸಾವಿರಾರು ಜನರು ಆಗಮಿಸಿದ್ದರು, ಆದರೆ ಈ ವೇಳೆ ಕಿಡಿಗೇಡಿಗಳು ದರ್ಶನ ಮೇಲೆ ಚಪ್ಪಲಿ ಎಸೆದಿದ್ದಾರೆ ಈ ಬಗ್ಗೆ ಬೇಸರ ವ್ಯಕ್ತಡಿಸಿರುವ ನಟ ಶಿವರಾಜ್‌ ಕುಮಾರ್‌ ಅವರು ವೀಡಿಯೋವೊಂದನ್ನು ಟ್ವೀಟ್‌ ಮಾಡುವ ಮೂಲಕ  ಘಟನೆಯ ಕುರಿತು

“ನೆನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ.
ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ
ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ” ಎಂದು ಹೇಳುವ ಮೂಲಕ ಕೃತ್ಯದ ಕುರಿತು ಅಭಿಮಾನಿಗಳಲ್ಲಿ ವಿನಂತಿಸುವ ಮೂಲಕ ಕಿವಿಮಾತು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!